ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಅಧಿಕಾರಿಗಳ ವರ್ಗಾವಣೆ ದಂಧೆ ಆಗಿರೋದು ನಿಜ ಎಂದಿದ್ದು, ಇದು ಸರ್ಕಾರದಲ್ಲಿ ಒಂದು ಅಶಿಸ್ತು ಆಗಿದೆ, ಇದು ಆಗಬಾರದು ಎಂದು ಹೇಳಿಕೆ ನೀಡಿದ್ದಾರೆ.
ಕೊಪ್ಪಳ (ಜು.10): ರಾಜ್ಯದಲ್ಲಿ ವರ್ಗಾವಣೆ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು, ಅಧಿಕಾರಿಗಳ ವರ್ಗಾವಣೆ ದಂಧೆ ಆಗಿರೋದು ನಿಜ ಎಂದಿದ್ದು, ಇದು ಸರ್ಕಾರದಲ್ಲಿ ಒಂದು ಅಶಿಸ್ತು ಆಗಿದೆ, ಇದು ಆಗಬಾರದು ಎಂದು ಹೇಳಿಕೆ ನೀಡಿದ್ದಾರೆ.
ಕೊಪ್ಪಳದ ಕೋಮಲಾಪೂರದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ , ಅಧಿಕಾರಿಗಳ ವರ್ಗಾವಣೆ ದಂಧೆ ಸರ್ಕಾರದಲ್ಲಿ ಒಂದು ಅಶಿಸ್ತು ಆಗಿದೆ, ಇದು ಆಗಬಾರದು. ಇದು ಈ ಸರ್ಕಾರ ಅಂತ ಅಲ್ಲ ಎಲ್ಲಾ ಸರ್ಕಾರಗಳಲ್ಲೂ ದಂಧೆ ಇದೆ. ಈ ವಿಚಾರದಲ್ಲಿ ಸ್ಪಷ್ಟವಾಗಿ ಸಿಎಂ ಹೇಳಿದ್ದಾರೆ. ಯಾವುದೇ ರೀತಿ ಒತ್ತಡಕ್ಕೆ ಮಣಿಯಲ್ಲ ಎಂದು, ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಹೇಳಿದ್ದರಲ್ಲಿ ತಪ್ಪೇನಿದೆ? ಸಿಎಂ ಸಿದ್ದರಾಮಯ್ಯ ಅವರು ಅದನ್ನು ಕಂಟ್ರೋಲ್ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಎಂದರು.
Chitradurga: ಬಾರ್‌ಗೆ ಕನ್ನ ಹಾಕಿ ಎಣ್ಣೆ, ಹಣ ಕದ್ದ ಲೋಕಸಭಾ ಚುನಾವಣಾ ಅಭ್ಯರ್ಥಿ!
ಕೊಪ್ಪಳ ಎಸ್ಪಿ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ನಾನು ಯಾರ ಪರವಾಗಿಯೂ ಮಾತಾಡಿಲ್ಲ. ಶಾಸಕರು ಹೇಳಿದ್ದಕ್ಕೆ ಅದರಲ್ಲಿ ಮಾತಾಡಿದ್ದೆ, ವರ್ಗಾವಣೆ ಯಾವಾಗಲೂ ಒಂದು ದಂಧೆಯೇ ಎಂದು ಬಸವರಾಜ ರಾಯರೆಡ್ಡಿ ಒತ್ತಿ ಹೇಳಿದರು.
ಬಹುಭಾಷಾ ನಟ ಪ್ರಭುದೇವ ಅಜ್ಜಿ ನಿಧನ, ಮೈಸೂರಿಗೆ ಆಗಮಿಸಿದ ನಟ
ಇನ್ನು ರಾಜ್ಯದಲ್ಲಿ ನಡೆದ ಹಗರಣದ ಬಗ್ಗೆ ಸಿಎಂಗೆ ಮಾಹಿತಿ ಇತ್ತು ಅನ್ನೋ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಅದನ್ನು ಹಾದಿ ಬೀದಿಯಲ್ಲಿ ಕೂತು ಮಾತನಾಡಲು ಆಗಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ರಾಯರೆಡ್ಡಿ ಹೇಳಿದರು.