
ಬೆಂಗಳೂರು (ಜೂ.7) : ಸರ್ಕಾರ ನಡೆಸೋರು ನಾವು. ನಾವ್ ಏನ್ ಕೊಡಬೇಕು ಅಂತ ಹೇಳಿದ್ದೇವೆ. ಜನ ಕೇಳಿದ್ದಾರೆ. ಬಾಡಿಗೆ ಮನೆ ವಿಚಾರ ಬಂತು ಅದನ್ನ ಕ್ಲಿಯರ್ ಮಾಡಿದ್ದೇವೆ ಡಿಸಿಎಂ ಡಿಕೆ ಶಿವಕುಮಾರ ಹೇಳಿದರು.
ಗೃಹಲಕ್ಷ್ಮಿ ಗ್ಯಾರಂಟಿಗೆ ಷರತ್ತು ಹಾಕಿರುವ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು ಯಾರು ವೋಟರ್ ಲೀಸ್ಟ್ ಇಟ್ಟುಕೊಂಡಿದ್ದಾರೆ, ಯಾರು ವೋಟರ್, ಯಾರು ಆಧಾರ್ ಕಾರ್ಡ್ ಇಟ್ಟುಕೊಂಡಿದ್ದಾರೆ, ಎಲ್ಲವೂ ನೋಡಬೇಕು. ಅವರಿಗೆ ಬ್ಯಾಂಕ್ ಅಕೌಂಟ್ ಇರಬೇಕು ಬೇರೆ ಅವರ ಅಕೌಂಟ್ ಕೊಡೋಕೆ ಆಗಲ್ಲ ಎನ್ನುವ ಮೂಲಕ ಡಿಸಿಎಂ ಜಾರಿಕೊಳ್ಳೋ ರೀತಿ ಪ್ರತಿಕ್ರಿಯಿಸಿದರು
ಜೂ.11ರಿಂದ ಬಸ್‌ಗಳಲ್ಲಿ ಉಚಿತ ಪ್ರಯಾಣ: ಮಹಿಳೆಯರ ಅನುಮಾನಕ್ಕೆ ಕ್ಲಾರಿಟಿ ನೀಡಿದ ಸಚಿವರು!
ಯಜಮಾನಿ ಯಾರು ಅಂತ ಅವರೇ ತೀರ್ಮಾನ ಮಾಡಬೇಕು. ನಮ್ಮ ಬಳಿಯೂ ಎಲ್ಲಾ ದಾಖಲೆಗಳು ಇವೆ. ಅವರು ಡಿಫರ್ ಆಗಬಹುದು. ಮನೆ ಸಂಸಾರ ಯಾರು ನಡೆಸುತ್ತಾರೆ ಅಂತ ಅವರೇ ಹೇಳಬೇಕು. ಅವರ ಮನೆ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡೊಲ್ಲ. ಒಂದು ಮನೆಗೆ ಒಂದು. ವೋಟರ್ ಲಿಸ್ಟ್ ನಲ್ಲಿ ಲೆಕ್ಕ ಇದೆ ಯಾರ್ ಮನೆಯಲ್ಲಿ ಎಪಿಎಲ್, ಬಿಪಿಎಲ್ ಅಂತ್ಯೋದಯ ಇದೆ ಅಂತ ಲೆಕ್ಕ ಇದೆ. ಆದರೆ ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ? ಹೆಣ್ಣುಮಕ್ಕಳು ತೀರ್ಮಾನ ಮಾಡಬೇಕು ಇದರಲ್ಲಿ ನಾವು ತಲೆಹಾಕಲ್ಲ ಎಂದರು.
ಕಾಂಗ್ರೆಸ್ ಗ್ಯಾರಂಟಿ ಬಡವರಿಗಾಗಿ:
ಐಟಿ ಕಟ್ಟೋರಿಗೆ ಗ್ಯಾರಂಟಿ ಇಲ್ಲ ಎಂಬ ಆದೇಶ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ, ಬಡವರಿಗೆ ಕೊಡಬೇಕು ಅಂತ ನಾವು ತೀರ್ಮಾನ ಮಾಡಿದ್ದು ಐಟಿ ಕಟ್ಟೋರು ಯಾರು ಗ್ಯಾರಂಟಿ ಕೇಳಿಲ್ಲ ಯಾರೂ ಬಂದು ಗ್ಯಾರಂಟಿ ಕೊಡಿ ಅಂತ ಕೇಳೋದಿಲ್ಲ ಬಹಳ ಜನ ನಮಗೆ 2 ಸಾವಿರ ಬೇಡ ಅಂತಾ ಪತ್ರ ಬರೆದಿದ್ದಾರೆ. ಯಾರು ಪತ್ರ ಬರೆದಿದ್ದಾರೆ ಅಂತ ನಾನು ಹೇಳೋಕೆ ಅಗೊಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾ 200 ಯುನಿಟ್ ವಿದ್ಯುತ್ ಉಚಿತ ಜೊತೆಗೆ ನಿಗದಿತ ಶುಲ್ಕ ಕೂಡ ಮನ್ನಾ ಆಗಲಿದೆ. ಎಂದರು. ಇದೇ ವೇಳೆ ಸರ್ಕಾರಿ ನೌಕರರಿಗೆ ಗ್ಯಾರಂಟಿ ಅನ್ವಯ ಆಗುತ್ತಾ ಎಂಬ ಪ್ರಶ್ನೆಗೆ ನಮಗೆ ಅವೆಲ್ಲ ಗೊತ್ತಿದೆ ಬಿಡಿ ಎಂದ ಡಿಕೆ ಶಿವಕುಮಾರ್
ಸರ್ಕಾರಿ ನೌಕರರಿಗೆ ಗ್ಯಾರಂಟಿ ಯೋಜನೆ, ಆದೇಶದಲ್ಲಿ ಗೊಂದಲ ವಿಚಾರ ಸಂಬಂಧ ಯಾವುದೇ ಉತ್ತರ ಕೊಡದೇ ಜಾರಿಕೊಂಡ ಡಿಸಿಎಂ ಡಿಕೆ ಶಿವಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ