ಜೂ.11ರಿಂದ ಬಸ್‌ಗಳಲ್ಲಿ ಉಚಿತ ಪ್ರಯಾಣ: ಮಹಿಳೆಯರ ಅನುಮಾನಕ್ಕೆ ಕ್ಲಾರಿಟಿ ನೀಡಿದ ಸಚಿವರು!

By Govindaraj S  |  First Published Jun 7, 2023, 1:59 PM IST

ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಶಕ್ತಿ ಹೆಸರಿನ ಯೋಜನೆಯನ್ನು ಘೋಷಿಸಿದೆ. ಇದೇ ಜೂನ್ 11ರಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. 


ಬೆಂಗಳೂರು (ಜೂ.07): ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಶಕ್ತಿ ಹೆಸರಿನ ಯೋಜನೆಯನ್ನು ಘೋಷಿಸಿದೆ. ಇದೇ ಜೂನ್ 11ರಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.`ಜೊತೆಗೆ ಸರ್ಕಾರ ಮಹಿಳೆಯರಿಗೆ ಗುಡ್‌ನ್ಯೂಸ್ ನೀಡಿದ್ದು, ಅವರ ಅನುಮಾನಕ್ಕೆ ಸಚಿವರು ಕ್ಲಾರಿಟಿ ನೀಡಿದ್ದಾರೆ.

ಡೌಟ್ ನಂಬರ್ -1: ಸ್ಮಾರ್ಟ್ ಕಾರ್ಡ್ ಉಪಯೋಗ
-ಪ್ರಯಾಣ ಖಚಿತ ಸ್ಮಾರ್ಟ್ ಕಾರ್ಡ್ ಉಚಿತ.
-ಸಾರಿಗೆ ಇಲಾಖೆಯಿಂದಲೇ ಉಚಿತ ಸಂಚಾರಕ್ಕಾಗಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ.
-ಉಚಿತವಾಗಿ ಈ ಕಾರ್ಡ್ ಪಡೆದುಕೊಳ್ಳಬಹುದು.
-ಜೂನ್ 11 ರ ಬಳಿಕ  ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ಮಾರ್ಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದು.
-ಅಡ್ರೆಸ್ ಪ್ರೂಫ್, ಆಧಾರ್ ಕಾರ್ಡ್ ನೀಡಬೇಕು.

Tap to resize

Latest Videos

ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ

ಡೌಟ್ ನಂಬರ್- 2: ಪುರುಷರಿಗೆ ಮೀಸಲಾಗಿರುವ ಸೀಟ್ ನಲ್ಲಿ ಕೂತ್ರೆ ದಂಡ ಇದೆಯಾ?
-ಪುರುಷರಿಗೆ ಮೀಸಲಾದ ಸೀಟಿನಲ್ಲಿ ಮಹಿಳೆಯರು  ಕೂತ್ರೆ ದಂಡ ಇಲ್ಲ.
-ಉಚಿತ ಬಸ್ ಪ್ರಯಾಣದ ಕಾರಣಕ್ಕೆ ಬಿಎಂಟಿಸಿ ಹೊರತುಪಡಿಸಿ ಸಾಮಾನ್ಯ ಬಸ್‌ಗಳಲ್ಲಿ 50% ಪುರುಷರಿಗೆ ಮೀಸಲಾತಿ ಇದೆ.
-ಪುರುಷರು ಮಹಿಳೆಯರ ಸೀಟ್‌ನಲ್ಲಿ ಕೂತ್ರೆ 200 ರೂಪಾಯಿ ದಂಡ ಹಾಕಲಾಗುತ್ತಿತ್ತು.
-ಹಾಗಂತ ಪುರುಷರ ಸೀಟ್‌ನಲ್ಲಿ ಮಹಿಳೆಯರು ಕೂತ್ರೆ ದಂಡ ಇಲ್ಲ.
-ಪುರುಷರ ಸೀಟು ಭರ್ತಿಯಾಗದೇ ಇದ್ದಾಗ ಮಹಿಳೆಯರು ಪುರುಷರ ಸೀಟ್‌ನಲ್ಲಿ ಕೂರಬಹುದು.

ಡೌಟ್ ನಂಬರ್ -3: ಸಾಮಾನ್ಯ ಬಸ್ ಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಅವಕಾಶ ಇದೆಯಾ?
-ಸಾಮಾನ್ಯ ಬಸ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಗೂ ಅವಕಾಶ.
-ಸಾಮಾನ್ಯ ಬಸ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಅವಕಾಶ ಇದೆ.
-ಉಚಿತ ಪ್ರಯಾಣದ ಫಲಾನುಭವಿ ಮಹಿಳೆಯರು ಈ ಯೋಜನೆ ಲಾಭ ಪಡೆಯಬಹುದು.

ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಕೊಡದ ವಿಚಾರ
-ಉಚಿತ ಪ್ರಯಾಣ ಮಹಿಳೆ ಪ್ರಯಾಣಿಕರ ಜೊತೆ ನಿಲುಗಡೆ ವಿಚಾರದಲ್ಲಿ ಕಿರಿಕಿರಿ ಮಾಡದಂತೆ ಸೂಚನೆ.
-ಮಹಿಳೆಯರಿಗೆ ಉಚಿತ ಪ್ರಯಾಣ ಅಂತಾ ನಿಲುಗಡೆಯ ಜಾಗದಲ್ಲಿ ನಿಲ್ಲಿಸದೇ ಇರೋದು ಅನಗತ್ಯ ಕಿರಿಕಿರಿ ಮಾಡುವಂತಿಲ್ಲ ಅಂತಾ ಸೂಚನೆ.
-ಈಗ ನಿಲುಗಡೆ ಇರುವ ಜಾಗದಲ್ಲಿ ಸ್ಟಾಪ್‌ಗಳನ್ನು ಕಡ್ಡಾಯ ಕೊಡಬೇಕು.
-ಮನಸಿಗೆ ಬಂದ ಹಾಗೆ ವರ್ತಿಸಿದ್ರೆ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವ  ಖಡಕ್ ಸೂಚನೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ರಿಸರ್ವೇಶನ್‌ ಕೂಡ ಇದೆ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಂಪರ್‌ ಕೊಡುಗೆಯೊಂದಿಗೆ ಮುಂಗಡ ಕಾಯ್ದಿರಿಸುವ ಅವಕಾಶ ನೀಡುವ ಕುರಿತು ಮಾರ್ಗಸೂಚಿಗಳನ್ನು ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನಾಲ್ಕು ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಿದೆ. ಜೊತೆಗೆ ದೂರದ ಊರುಗಳಿಗೆ ಪ್ರಯಾಣಿಸುವ ಮಹಿಳೆಯರಿಗೆ ಬಸ್‌ಗಳಲ್ಲಿ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶ ನೀಡುವ ಬಗ್ಗೆಯೂ ಯೋಜಿಸಿದೆ. 

ಸಿಎಂರನ್ನು ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿ ಮೇಲೆ ಹಲ್ಲೆ: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಉಮೇಶ್ ಶೆಟ್ಟಿ ದೂರು

ಈಗಾಗಲೇ ಕೆಎಸ್‌ಆರ್‌ಟಿಸಿ ಸೇರಿದಂತೆ ಮೂರು ಸಾರಿಗೆ ನಿಗಮಗಳ ಅಧಿಕಾರಿಗಳು ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಹಿಳೆಯರಿಗೆ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅನುಸರಿಸಬೇಕಾದ ನಿಯಮಗಳು, ಕ್ರಮಿಸಬೇಕಿರುವ ದೂರ, ಅರ್ಹತೆ ಮತ್ತು ದಾಖಲೆಗಳು ಒಳಗೊಂಡಂತೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಎರಡ್ಮೂರು ದಿನಗಳಲ್ಲಿ ಮಾರ್ಗಸೂಚಿ ರೂಪಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಆ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ಮಾಹಿತಿ ನೀಡಿವೆ.

click me!