Congress guarantee: ಖಾಸಗಿ ವಲಯದ 'ಶಕ್ತಿ' ಕುಂದಿಸಿದ ಉಚಿತ ಗ್ಯಾರಂಟಿ!

By Kannadaprabha News  |  First Published Jun 15, 2023, 6:12 AM IST

ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದ ಒಂದು ಬಳಿಕ ಕೊಡಗಿನಲ್ಲಿ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ಇದರಿಂದಾಗಿ ಖಾಸಗಿ ಬಸ್‌ ವಲಯದಲ್ಲಿ ಭಾರಿ ನಷ್ಟಕಂಡುಬರುತ್ತಿದೆ.


ಮಂಜುನಾಥ್‌ ಟಿ.ಎನ್‌.

ವಿರಾಜಪೇಟೆ (ಜೂ.15) ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದ ಒಂದು ಬಳಿಕ ಕೊಡಗಿನಲ್ಲಿ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ಇದರಿಂದಾಗಿ ಖಾಸಗಿ ಬಸ್‌ ವಲಯದಲ್ಲಿ ಭಾರಿ ನಷ್ಟಕಂಡುಬರುತ್ತಿದೆ.

Latest Videos

undefined

ಕೊಡಗಿನಲ್ಲಿರುವ ಬಹುತೇಕ ದೇಶಗಳಲ್ಲಿ ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಓಡಾಟ ವಿರಳವಾಗಿದೆ. ಖಾಸಗಿ ಬಸ್‌ ನಿಲ್ದಾಣಗಳಿಂದ ಬಹುತೇಕ ಬಸ್‌ಗಳು ಪೂರ್ಣ ಸಾಮರ್ಥ್ಯದೊಂದಿಗೆ ತುಂಬಿ ಓಡಾಟ ನಡೆಸಲು ಸಾಧ್ಯವಾಗುತ್ತಿಲ್ಲ.

ಕಾಂಗ್ರೆಸ್‌ಗೆ 6ನೇ ಗ್ಯಾರಂಟಿ ನೆನಪಿಸಿದ ಮಹಿಳೆಯರು, ಸಿಎಂ ಸಿದ್ದು ನೀಡಿದ ಭರವಸೆಯಿಂದ ಅಧಿಕಾರಿಗಳಿಗೆ ಪೀಕಲಾಟ!

ಜಿಲ್ಲಾ ಕೇಂದ್ರದಿಂದ ವಿವಿಧ ಸ್ಥಳಗಳಿಗೆ ತೆರಳುವ ಕೆಲವು ಬಸ್‌ಗಳಲ್ಲಿ ಪೈಕಿ ಒಂದೆರಡು ಬಸ್‌ಗಳಲ್ಲಿ ಕೆಲವೇ ಆಸನಗಳು ಮಾತ್ರ ಭರ್ತಿಯಾಗಿರುವುದು ಕಂಡು ಬಂತು. ಶಕ್ತಿ ಯೋಜನೆ ಪರಿಣಾಮ ಸೋಮವಾರ ಬೆಳಗ್ಗಿನಿಂದಲೇ ಖಾಸಗಿ ಬಸ್‌ಗಳ ಮೇಲೆ ಉಂಟಾಗಿದೆ.

ವಿರಾಜಪೇಟೆಯಲ್ಲಿ ಖಾಸಗಿ ಬಸ್‌ ನಿಲ್ದಾಣಕ್ಕೆ ಪ್ರಯಾಣಿಕರ ಆಗಮನ ವಿರಳವಾದ ಹಿನ್ನೆಲೆ ಇತರ ವಹಿವಾಟುಗಳ ಮೇಲೆಯೂ ಪರಿಣಾಮ ಆಗಿದೆ. ನಿಲ್ದಾಣದಲ್ಲಿರುವ ಅಂಗಡಿ, ಹೊಟೇಲ್‌ಗಲು, ಟೀ ಅಂಗಡಿಗಳು, ಆಟೋಮೊಬೈಲ್‌ ಬಿಡಿಭಾಗಗಳ ಅಂಗಡಿಗಳು, ಟೈರ್‌ ಮತ್ತು ಸಂಬಂಧಿತ ಭಾಗಗಳ ರಿಪೇರಿ ಮಾಡುವವರು ಮತ್ತು ಕಾರ್ಮಿಕಕರಿಗೂ ವ್ಯವಹಾರ ಇಳಿಮುಖವಾಗುತ್ತಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಪ್ರತಿದಿನ 180ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಓಡಾಟ ನಡೆಸುತ್ತಿದ್ದು, ವಿಶೇಷವಾಗಿ ಮಹಿಳೆಯರಿಂದಲೇ ತುಂಬಿರುತ್ತಿತ್ತು. ಇದೀಗ ಮಹಿಳೆಯರೊಂದಿಗೆ ಬರುವ ಪುರುಷ ಪ್ರಯಾಣಿಕರೂ ಖಾಸಗಿ ಬಸ್‌ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವ ಬದಲು ತಮ್ಮ ಸಂಗಾತಿ ಜೊತೆ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಆದ್ಯತೆ ನೀಡುತ್ತಿರುವುದು ಕಂಡುಬಂತು.

ಮಡಿಕೇರಿಯಿಂದ ಗೋಣಿಕೊಪ್ಪ, ಮಡಿಕೇರಿಯಿಂದ ಸೋಮವಾರಪೇಟೆ ಮಾರ್ಗವಾಗಿ ಕೊಡ್ಲಿಪೇಟೆಗೆ, ಮಡಿಕೇರಿಯಿಂದ ನಾಪೊಕ್ಲು, ಮಡಿಕೇರಿಯಿಂದ ಭಾಗಮಂಡಲ, ತಲಕಾವೇರಿಗಳಿಗೆ ತೆರಳುವ ಬಸ್‌ಗಳಲ್ಲಿ ಶಕ್ತಿ ಯೋಜನೆಯಿಂದ ಜನ ಸಂಚಾರ ವಿರಳವಾಗಿರುವದು ಕಂಡು ಬರುತ್ತಿದ್ದು.

ರಾಜ್ಯದ ನಾನಾ ಭಾಗಗಳಿಂದ ವಿರಾಜಪೇಟೆಗೆ ಬರುವ ಸಾರಿಗೆ ಸಂಸ್ಥೆಯ ಬಸ್‌ಗಳು ಗೋಣಿಕೊಪ್ಪ ಮಾರ್ಗವಾಗಿ ಬರುವುದರಿಂದ ವಿರಾಜಪೇಟೆ-ಗೋಣಿಕೊಪ್ಪ ರಸ್ತೆಯಲ್ಲಿ ಚಲಿಸುವ ಖಾಸಗಿ ಬಸ್‌ಗಳು ಭಾರಿ ನಷ್ಟಅನುಭವಿಸಿದವು.

ಈ ಹಿಂದೆಯೂ ಖಾಸಗಿ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಅಸನಗಳು ಭರ್ತಿಯಾಗಿರುತ್ತಿದ್ದವು. ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ, ಸಮಯದಲ್ಲಿ ಕೂಡ ಖಾಸಗಿ ಬಸ್ಸುಗಳಿಗೆ ಪ್ರಯಾಣಿಕರು ಬರುತ್ತಿಲ್ಲ.

ಕರ್ನಾಟಕ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

ಗ್ರಾಮಿಣ ಬಾಗದಲ್ಲಿ ಸಾರಿಗೆ ಬಸ್‌ಗಳ ಸಂಚಾರ ಕಡಿಮೆ ಇರುವುದರಿಂದ ಗ್ರಾಮೀಣ ಬಾಗದಲ್ಲಿ ಸಂಚಾರ ಮಾಡುವ ಖಾಸಗಿ ಬಸ್‌ಗಳಿಗೆ ಹೊಡೆತ ಕಂಡು ಬರುತ್ತಿಲ್ಲ

ಕೆಎಸ್‌ಆರ್‌ಟಿಸಿಗೆ ಸರ್ಕಾರವು ಉಚಿತ ಟಿಕೆಟ್‌ಗಳ ಸಂಖ್ಯೆಯನ್ನು ಗರಿಷ್ಠಗೊಳಿಸಲು ಸರ್ಕಾರವೇ ಕೆಎಸ್‌ಆರ್‌ಟಿಸಿಗೆ ಹಣ ಮರು ಪಾವತಿಸುತ್ತದೆ. ಆದ್ದರಿಂದ ಕೆಎಸ್‌ಆರ್‌ಟಿಸಿಗೆ ಶೂನ್ಯ ಮೊತ್ತದ ಚಿಕೆಟ್‌ ನೀಡಿದರೆ ಯಾವುದೇ ನಷ್ಟವಾಗುವುದಿಲ್ಲ.

-ಮೂಕಚಂಡ ನಾಚಪ್ಪ, ತ್ರಿನೇತ್ರ ಮೋಟಾರ್ಸ್‌ ಮಾಲೀಕ, ವಿರಾಜಪೇಟೆ.

ಕಳೆದ ಎರಡು ವರ್ಷಗಳಲ್ಲಿ ನಮ್ಮ ದೇಶಕ್ಕೆ ಅಪ್ಪಳಿಸಿದ ಮಹಾಮಾರಿ ಕೋರೊನಾ ಸಮಯದಲ್ಲಿ ಕೂಡ ಸರ್ಕಾರ ಖಾಸಗಿ ಬಸ್ಸುಗಳು ಮಾಲೀಕರಿಗೆ ಯಾವುದೇ ಸಹಾಯ ಹಸ್ತ ಚಾಚಲಿಲ್ಲ.ಆದರೆ ನೆರೆ ರಾಜ್ಯ ಕೇರಳದಲ್ಲಿ ಖಾಸಗಿ ಬಸ್‌ಗಳಿಗೆ ಒಂದು ವರ್ಷದ ತೆರಿಗೆ ವಿನಾಯಿತಿ ನೀಡಿದ್ದಾರೆ. ಅಂತಹ ಸಂದರ್ಭದಲ್ಲಿ ಕೂಡ ನಾವು ಆದಾಯ ನಿರೀಕ್ಷಿಸದೆ ಜನ ಸೇವೆಯನ್ನು ಮಾಡಿದ್ದೇವೆ. ಈಗ ಸರ್ಕಾರದ ಈ ನೀತಿಯಿಂದ ನಮಗೆ ಬಸ್ಸುಗಳನ್ನು ಒಡಿಸುವದೆ ಕಷ್ಟಕರವಾದ ಸಂಗತಿಯಾಗಿದ್ದು . ಇದೇ ರೀತಿ ಮುಂದುವರೆದಲ್ಲಿ ಇನ್ನೆರಡು ತಿಂಗಳಲ್ಲಿ ನಮ್ಮ ಬಸ್‌ಗಳು ನಷ್ಟಎದುರಿಸಲಾಗದೆ ಸಂಚಾರ ನಿಲ್ಲಿಸುವ ಸಂದರ್ಭ ಬಂದೀತು. ಸರ್ಕಾರ ಕೂಡಲೇ ಗಮನಹರಿಸಿ ನಮಗೆ ತೆರಿಗೆ ವಿನಾಯಿತಿ , ಇಂಧನದ ವಿನಾಯಿತಿ ನೀಡಬೇಕಾಗಿ ವಿನಂತಿಸುತ್ತೇವೆ.

-ಜೂಡಿವಾಜ್‌, ಕಾರ್ಯದರ್ಶಿ, ಕೊಡಗು ಖಾಸಗಿ ಬಸ್‌ ಕಾರ್ಮಿಕರ ಸಂಘ, ವಿರಾಜಪೇಟೆ.

click me!