ಸಿದ್ದರಾಮಯ್ಯ 'ಸುಳ್ಳುರಾಮಯ್ಯ' ಅಲ್ಲಾ ಅನ್ನೋದಾದ್ರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ: ಸಿಟಿ ರವಿ ಸವಾಲು

By Ravi Janekal  |  First Published Jun 15, 2023, 1:07 PM IST

ತಾವು ಸುಳ್ಳರಾಮಯ್ಯ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.



ಚಿಕ್ಕಮಗಳೂರು (ಜೂ.15) :  ತಾವು ಸುಳ್ಳರಾಮಯ್ಯ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಬಡವರಿಗೆ ಉಚಿತ ಅಕ್ಕಿ ಕೊಡುವ ಸಂಬಂಧ ಕೇಂದ್ರದ ಮೇಲೆ ಕಾಂಗ್ರೆಸ್ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು, ಸಿಎಂ ಸಿದ್ದರಾಮಯ್ಯ 'ಸುಳ್ಳುರಾಮಯ್ಯ' ಅಲ್ಲಾ ಅನ್ನೋದಾದರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ. ಅಕ್ಕಿ ಕಳಿಸುತ್ತೇವೆ ನಿಮ್ಮ ಹೆಸರು ಹಾಕ್ಕೊಂಡು ಕೊಡಿ ಅಂತ ಲೆಟರ್ ಕಳಿಸಿಲ್ಲ. ಕಳಿಸಿದ್ದರೆ ಎಲ್ಲಿದೆ ಆ ಕಮಿಟ್ಮೆಂಟ್ ಲೆಟರ್ ತೋರಿಸಲಿ ಎಂದು ಸವಾಲು ಹಾಕಿದರು.

Tap to resize

Latest Videos

ಕಾಂಗ್ರೆಸ್‌ ಗ್ಯಾರಂಟಿ: ಉಚಿತ 10 ಕೆಜಿ ಅಕ್ಕಿ ವಿತರಣೆ ವಿಳಂಬ ಸಾಧ್ಯತೆ?

ಎಫ್.ಸಿ.ಐ. ನಿಮಗೆ ಅಗತ್ಯವಿರುವ ಅಕ್ಕಿ ಕಳಿಸುತ್ತೇವೆ ಎಂದು ಹೇಳಿದ್ದಾರಾ, ಲೆಟರ್ ತೋರಿಸಿ. ಅಧಿಕಾರಕ್ಕೆ ಬರಲು ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದಾರೆ. ಆದರೆ ಬೇಕಾಗುವಷ್ಟು ಅಕ್ಕಿ ಸಂಗ್ರಹ ಇಲ್ಲ. ಇದೊಂದೇ ಯೋಜನೆ ಅಲ್ಲ. ಕಾಂಗ್ರೆಸ್ ಗ್ಯಾರಂಟಿಯ ಐದು ಯೋಜನೆಗಳೂ ಹೀಗೆ ಸುಳ್ಳು ಹೇಳಿ ಜನರನ್ನು ವಂಚಿಸಲಾಗಿದೆ. ಅನ್ನಭಾಗ್ಯಕ್ಕೆ ಸಾಕಾಗುವಷ್ಟು ಅಕ್ಕಿ ಇಲ್ಲದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ.ತನ್ನ ಕೈನಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ನಾಲ್ಕೈದು ತಿಂಗಳ ಬಳಿಕ ಎಂದು ಭಾವಿಸಿದ್ದೆ ಆರೋಪ ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ಜುಲೈ 1ರಿಂದ ಅಕ್ಕಿ ಉಚಿತ ಎಂದು ಭಾಷಣ, ಈಗ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Assembly election: ಕಾಂಗ್ರೆಸ್‌ ಸುಳ್ಳುರಾಮಯ್ಯನ ರೀಡೂ ಹಗರಣ ಮರೆತೋಯ್ತಾ.?: ಸಿ.ಟಿ. ರವಿ ವಾಗ್ದಾಳಿ

ನೀವು ಎಲ್ಲಾ ಬಿಪಿಎಲ್‌ದಾರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಆಕಾಶವೇನು ಕಳಚಿ ಬಿದ್ದಿಲ್ಲ, ಹಣ ಕೊಟ್ಟರೆ ಅಕ್ಕಿ ಸಿಗುತ್ತೆ, ಮೊದಲು ಬಿಪಿಎಲ್ ಕಾರ್ಡುದಾರರಿಗೆ ಹಣ ಹಾಕಿ. ಕೊಟ್ಟರೆ ನಾನು ಕೊಟ್ಟೆ ಅನ್ನೋದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸಿದ್ದರಾಮಯ್ಯನ ಚಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!