ದಲಿತ ಯುವಕನಿಗೆ ಮೂತ್ರ ಕುಡಿಸಿದ ಕೇಸ್ : ಕೈ ನಿಯೋಗದಿಂದ ಡಿಜಿಪಿಗೆ ದೂರು

By Suvarna News  |  First Published May 25, 2021, 1:19 PM IST
  • ಮೂಡಿಗೆರೆ ದಲಿತ ಯುವಕನ ಮೇಲಿನ ಹಲ್ಲೆ ಪ್ರಕರಣ
  • ಡಿಜಿ ಪ್ರವೀಣ್ ಸೂದ್ ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರ ನಿಯೋಗ
  • ಪ್ರಕರಣ ಸಂಬಂಧ ಸೂಕ್ತ ಕ್ರಮ ಜರುಗಿಸುವಂತೆ ದೂರು 

ಬೆಂಗಳೂರು (ಮೇ.25):  ಮೂಡಿಗೆರೆಯ ಗೋಣಿಬೀಡು ಠಾಣೆಯ ಪಿಎಸ್‌ಐ ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಾರೆ ಎಂಬ ಆರೋಪ ಹಿನ್ನೆಲೆ ಕಾಂಗ್ರೆಸ್ ನಿಯೊಗ ಡಿಜಿಪಿ ಪ್ರವೀಣ್ ಸೂದ್ ಅವರನ್ನು ಭೇಟಿ ನೀಡಿ ದೂರು  ನೀಡಿದೆ. 

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿ ಕಚೇರಿಗೆ ಇಂದು ತೆರಳಿದ ಕಾಂಗ್ರೆಸ್ ನಿಯೋಗ ಪ್ರಕರಣದ ಸಂಬಂಧ ದೂರು ನೀಡಿದೆ.  ರಾಜ್ಯ ಸಭಾ ಸದಸ್ಯರಾದ ಡಾ.ಎಲ್ ಹನುಮಂತಯ್ಯ,  ನಾಸೀರ್ ಹುಸೇನ್  ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು ತೆರಳಿ ದೂರು ನೀಡಿದರು.

Tap to resize

Latest Videos

ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡಲ್ಲಿ ನಡೆದ ಘಟನೆಗೆ ಕಾರಣರಾದವರ‌ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಮೂತ್ರ ಕುಡಿಸುವು ಒಂದು ಅತ್ಯಂತ ಅಮಾನವೀಯ ಘಟನೆ ದಲಿತರಲ್ಲ ಬೇರೆ ಯಾರಿಗೂ ಈ ರೀತಿಯಲ್ಲಿ ಆಗಬಾರದು. ಬಿಜೆಪಿ ಮುಖಂಡ ಸಿಟಿ ರವಿ ಹಾಗೂ ಸಂಸದೆ ಶೋಭಾ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತನಾಡಿಲ್ಲ. ಈ ನಿಟ್ಟಿನಲ್ಲಿ ನಾವು ಡಿಜಿಗೆ ದೂರು ನೀಡಿದ್ದಾಗಿ ಹೇಳಿದರು. 

ಮಹಿಳೆಯ ವಿಚಾರ : ಯುವಕನಿಗೆ ಮೂತ್ರ ಕುಡಿಸಿದ ಆರೋಪದಡಿ PSI ವಿರುದ್ಧವೇ FIR ..

 ಘಟನೆಗೆ ಕಾರಣರಾದವರನ್ನು ಅಟ್ರಾಸಿಟಿ ಕೇಸ್ ನಲ್ಲಿ ಬಂಧಿಸಬೇಕು. ಇದರ ನೈತಿಕ ಹೊಣೆ  ಜಿಲ್ಲಾ ವರಿಷ್ಠಾಧಿಕಾರಿ ಹೊರಬೇಕು. ಘಟನೆ ನಡೆದು ಹತ್ತು ದಿನಗಳು ಕಳೆದರೂ ಕ್ರಮ ತೆಗೆದುಕೊಂಡಿಲ್ಲ. ಗೃಹಮಂತ್ರಿಗಳು ಸ್ಥಳಕ್ಕೆ ತೆರಳಿ ವಿಚಾರಣೆ  ನಡೆಸಬೇಕಿತ್ತು. ಆದರೆ ಅವರು ಹೋಗಿಲ್ಲ ,- ಇದು ಖಂಡನೀಯ ಎಂದರು. 
 
ಘಟನೆ ಹಿನ್ನೆಲೆ :  ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಠಾಣೆಯ ಪಿಎಸ್‌ಐ ಅರ್ಜುನ್ ಪುನೀತ್ ಎಂಬಾತನನ್ನು ಮಹಿಳೆಗೆ ಸಂಬಂಧಿಸಿದ ಪ್ರಕರಣಕ್ಕೆ ಯಾವುದೇ ದೂರು ಇಲ್ಲದೆ ಠಾಣೆಗೆ ಕರೆತಂದು ಥಳಿಸಿ ಮನಬಂದಂತೆ ನಿಂದಿಸಿದ್ದರೆಂದು ಆರೋಪಿಸಲಾಗಿತ್ತು.  ಈ ಸಂಬಂಧ ಪಿಎಸ್‌ಐ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿ ಅವರನ್ನು ಅಮಾನತು ಮಾಡಲಾಗಿತ್ತು. 

click me!