ಅಧಿಕಾರಿಗಳ ವರ್ಗಾವಣೆಯಲ್ಲಿ ವಸೂಲಿ ನಡೆಯುತ್ತಿದೆ. ಒಂದೊಂದು ಹುದ್ದೆಗೆ ನಾಲ್ಕಾರು ಶಿಫಾರಸ್ಸು ಪತ್ರಗಳನ್ನು ಕೊಡಲಾಗುತ್ತಿದ್ದು, ಮಾಧ್ಯಮದವರು ಈ ಬಗ್ಗೆ ಆಂತರಿಕ ತನಿಖೆ ಮಾಡಿ ನೋಡಿ. ಆಗ, ಯಾವ ರೀತಿ ವಸೂಲಿ ಕಾರ್ಯ ನಡೆಯುತ್ತಿದೆ ಎಂಬುದು ತಿಳಿಯುತ್ತದೆ ಎಂದು ಆರೋಪಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಧಾರವಾಡ(ಜು.08): ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಆರೋಪ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ತಾನೇ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಧಾರವಾಡದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ ವಸೂಲಿ ನಡೆಯುತ್ತಿದೆ. ಒಂದೊಂದು ಹುದ್ದೆಗೆ ನಾಲ್ಕಾರು ಶಿಫಾರಸ್ಸು ಪತ್ರಗಳನ್ನು ಕೊಡಲಾಗುತ್ತಿದ್ದು, ಮಾಧ್ಯಮದವರು ಈ ಬಗ್ಗೆ ಆಂತರಿಕ ತನಿಖೆ ಮಾಡಿ ನೋಡಿ. ಆಗ, ಯಾವ ರೀತಿ ವಸೂಲಿ ಕಾರ್ಯ ನಡೆಯುತ್ತಿದೆ ಎಂಬುದು ತಿಳಿಯುತ್ತದೆ ಎಂದು ಆರೋಪಿಸಿದರು. ಅಕ್ಕಿ ವಿತರಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ಜುಲೈ ತಿಂಗಳಿಗೆ ನೀಡಿರುವ ಅಕ್ಕಿಯೂ ಕೇಂದ್ರ ಸರ್ಕಾರದ್ದು ಎಂಬುದನ್ನು ಅವರು ನಾಡಿನ ಜನತೆಗೆ ಏತಕ್ಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
4 ರಾಜ್ಯಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿ ಘೋಷಣೆ, ಪ್ರಹ್ಲಾದ್ ಜೋಶಿಗೆ ಮಹತ್ವದ ಜವಾಬ್ದಾರಿ!
ಕರ್ನಾಟಕ ಸೇರಿ ದೇಶದ 80 ಕೋಟಿ ಜನರಿಗೆ ಕೇಂದ್ರ ಸರ್ಕಾರ ಅಕ್ಕಿ ವಿತರಿಸಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಇನ್ನೂ ಅಕ್ಕಿಯನ್ನು ವಿತರಿಸಿಯೇ ಇಲ್ಲ ಎಂಬುದನ್ನು ಕಾಂಗ್ರೆಸ್ ಮುಖಂಡರು ಒಪ್ಪಿಕೊಳ್ಳಬೇಕು. ರಾಜ್ಯ ಸರ್ಕಾರ, ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅನಗತ್ಯವಾಗಿ ಷರತ್ತು ಹಾಕುತ್ತಿದೆ. ಆ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.