ಕಡಲತೀರದಲ್ಲೆ ಎಲ್ಲೆಂದರಲ್ಲಿ ಬಿದ್ದಿರುವ ಕಾಂಡೋಮ್ ಪ್ಯಾಕೇಟ್ ಕಂಡು ವಾಯುವಿಹಾರಕ್ಕೆ ಬರೋ ಜನರು ಮತ್ತು ಪ್ರವಾಸಿಗರು ಮುಜುಗರಕ್ಕೊಳಗಾಗಿದ್ದಾರೆ.
ಕಾರವಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವಿತರಿಸಲಾಗುವ ಕಾಂಡೋಮ್ ಪ್ಯಾಕೇಟ್‌ಗಳು (Condom Packets_ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಲ್ಲಿ (Rabindranath Tagore Beach, Karwar) ಪತ್ತೆಯಾಗಿವೆ. ಕಡಲತೀರದಲ್ಲೆ ಎಲ್ಲೆಂದರಲ್ಲಿ ಬಿದ್ದಿರುವ ಕಾಂಡೋಮ್ ಪ್ಯಾಕೇಟ್ ಕಂಡು ವಾಯುವಿಹಾರಕ್ಕೆ ಬರೋ ಜನರು ಮತ್ತು ಪ್ರವಾಸಿಗರು ಮುಜುಗರಕ್ಕೊಳಗಾಗಿದ್ದಾರೆ. ಕಡಲತೀರದಲ್ಲಿ ಬಿದ್ದಿರುವ ಕಾಂಡೋಮ್ ಪ್ಯಾಕೇಟ್ ಮೇಲೆ ಭಾರತ ಸರ್ಕಾರ ಎಂದು ಮುದ್ರಿಸಲಾಗಿದೆ. ದಿಢೀರ್ ಅಂತ ಕಾಂಡೋಮ್ ಪ್ಯಾಕೇಟ್‌ಗಳು ಕಂಡು ಬಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ವರ್ಲ್ಡ್ ಹ್ಯೂಮನ್ ರೈಟ್ಸ್ ಆರ್ಕೆ ಫೌಂಡೇಶನ್, ಲೈಂಗಿಕ ಕಾರ್ಯಕರ್ತರು, ಹೆಚ್ಐವಿ ಸೋಂಕಿತರಿಗೆ ಸಮಪರ್ಕವಾಗಿ ಕಾಂಡೋಮ್ ಮಾಡುತ್ತಿಲ್ಲ ಎಂದು ಏಡ್ಸ್ ನಿಯಂತ್ರಣ ಸಂಸ್ಥೆ ವಿರುದ್ಧ ಗಂಭೀರ ಆರೋಪವನ್ನು ಮಾಡಿತ್ತು. ಏಡ್ಸ್ ಜಾಗೃತಿ ಕ್ರಾಂತಿ ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನೋಡಲ್ ಅಧಿಕಾರಿ ಸರ್ಕಾರಕ್ಕೆ ವರದಿಯನ್ನು ಸಹ ಸಲ್ಲಿಕೆ ಮಾಡಿದ್ದರು. ಆಸ್ಪತ್ರೆಯಲ್ಲಿದ್ದ ಕಾಂಡೋಮ್ ಪ್ಯಾಕೇಟ್‌ಗಳು ಚರಂಡಿ ಮೂಲಕ ಕಡಲತೀರಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಕಡಲತೀರ ಸಮೀಪದಲ್ಲಿ ಕಿಮ್ಸ್ ಆಸ್ಪತ್ರೆಯಿದ್ದು, ಇಲ್ಲಿಯ ವೈದ್ಯಕೀಯ ತ್ಯಾಜ್ಯ ಚರಂಡಿ ಮೂಲಕ ಸಮುದ್ರ ಸೇರುತ್ತೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಏಡ್ಸ್ ನಿಯಂತ್ರಣ ಮತ್ತು ಚಿಕಿತ್ಸಾ ಕಚೇರಿ ಕಿಮ್ಸ್ ಆಸ್ಪತ್ರೆಯ ಅಧೀನದಲ್ಲಿದೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಾಂಡೋಮ್ ಕಡಲತೀರಕ್ಕೆ ಬಂದಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!