ವಿಶೇಷ ಚೇತನರಿಗೆ ಬಂಪರ್ ಕೊಡುಗೆ: KIADB ಸೈಟ್‌ ದರದಲ್ಲಿ 20 ಲಕ್ಷವರೆಗೆ ರಿಯಾಯ್ತಿ! ಸಿಎಂ ಡಿಕೆ ಶಿವಕುಮಾರ್ ಮಹತ್ವ ನಿರ್ಧಾರ

Kannadaprabha News   | Kannada Prabha
Published : Jul 03, 2026, 06:00 AM ISTUpdated : Jul 03, 2026, 07:25 AM IST
DK Shivakumar

ಸಾರಾಂಶ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಐಎಡಿಬಿ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿ ಅಂಗವಿಕಲರಿಗೆ ಭೂಮಿ ಮೌಲ್ಯದ ಶೇ.10 ಅಥವಾ ಗರಿಷ್ಠ 20 ಲಕ್ಷ ರೂ. ರಿಯಾಯಿತಿ ನೀಡಲು ಅನುಮೋದನೆ ನೀಡಲಾಗಿದೆ. 

ಬೆಂಗಳೂರು: ರಾಜ್ಯದಲ್ಲಿ ಕೆಐಎಡಿಬಿ ಕೈಗಾರಿಕಾ ನಿವೇಶನಗಳ ಹಂಚಿಕೆ ವೇಳೆ ಅಂಗವಿಕಲ ಫಲಾನುಭವಿಗಳಿಗೆ ಭೂಮಿ ಮೌಲ್ಯದ ಶೇ.10 ಅಥವಾ ಗರಿಷ್ಠ 20 ಲಕ್ಷದವರೆಗೆ ರಿಯಾಯಿತಿ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ‘ಅಂಗವಿಕಲ ಹಕ್ಕು ಕಾಯ್ದೆ ಅನ್ವಯ ಕೆಐಎಡಿಬಿಯಲ್ಲಿ ಶೇ.5ರಷ್ಟು ಭೂ ಮೀಸಲಾತಿ ರಿಯಾಯತಿ ಬಗ್ಗೆ ಹಿಂದೆ ಕಾನೂನು ತರಲಾಗಿತ್ತು. ಈಗ ಅವರಿಗೆ ಎರಡು ಆಯ್ಕೆ ನೀಡಿದ್ದು, ಭೂಮಿ ಮೌಲ್ಯದ ಶೇ. 10 ಅಥವಾ ಗರಿಷ್ಠ 20 ಲಕ್ಷದವರೆಗೆ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು. ಇದೇ ವೇಳೆ ವಾಣಿಜ್ಯ ಹಾಗೂ ಕೈಗಾರಿಕ ಇಲಾಖೆ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಮನ್ ಫೆಸಿಲಿಟ್ ಸೆಂಟರ್ ಮಾಡಲು 30 ಕೋಟಿ ಅನುದಾನ ನೀಡಲು ಕೆಐಎಡಿಬಿಗೆ ಅನುಮತಿ ನೀಡಲಾಗಿದೆ ಎಂದರು.

ಇತರೆ ತೀರ್ಮಾನಗಳು:

- ರಾಷ್ಟ್ರೀಯ ಅಂಧತ್ವ ನಿಯಂತ್ರಣ ಅಭಿಯಾನದ ಅಡಿ ಸಣ್ಣ ಮಕ್ಕಳಲ್ಲಿ ದೃಷ್ಟಿ ಆರೈಕೆ ಬಲಪಡಿಸಲು 26 ಕೋಟಿ ಅನುದಾನ.

- ಬಾಗಲಕೋಟೆಯ ಬಿಳಗಿ ತಾಲೂಕಿನಲ್ಲಿ ಕೃಷ್ಣಾ ನದಿಯಿಂದ 7 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಬಿಳಗಿ ಏತ ನೀರಾವರಿ ಯೋಜನೆಗೆ 98.50 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

- ಕಲಬುರಗಿಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕೆಐಎಡಿಬಿಯಿಂದ 700 ಕೋಟಿ ವೆಚ್ಚದ ಯೋಜನೆಗೆ ಮೊದಲ ಹಂತದಲ್ಲಿ 320 ಕೋಟಿ ರು.ಗೆ ಒಪ್ಪಿಗೆ

- ಬೆಂಗಳೂರಿನ ಎನ್‌ಜಿಇಎಫ್‌ನಲ್ಲಿ 60 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ 26 ಕೋಟಿ ಅನುದಾನ.

- ಅಲ್ಪಸಂಖ್ಯಾತರ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಶೂ, ಸಮವಸ್ತ್ರ, ವಿದ್ಯಾರ್ಥಿ ಸಾಮಾಗ್ರಿ ವಿತರಣೆಗೆ 33 ಕೋಟಿ ಅನುದಾನ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಡ್ಯಾಮ್‌ ಭರ್ತಿ ಆಗೋವರೆಗೂ ಯಾವ ರೈತರೂ ಬೆಳೆ ಹಾಕಬೇಡಿ, ಸಿಎಂ ಡಿಕೆಶಿ ಕಿವಿಮಾತು
SIR: ರಾಮನಗರ ಅಷ್ಟೇ ಅಲ್ಲ, ಕುಣಿಗಲ್‌, ತೀರ್ಥಹಳ್ಳಿ, ಬೆಂಗಳೂರಲ್ಲೂ ಅರ್ಜಿ ಸಾಮೂಹಿಕ ಭರ್ತಿ!