ಬೆಂಗಳೂರು ಬಿಟ್ಟು ಎದ್ದ ಯಡಿಯೂರಪ್ಪ ಚಿತ್ತ ಪ್ರವಾಹ ಪೀಡಿತ ಪ್ರದೇಶಗಳತ್ತ

By Suvarna NewsFirst Published Aug 22, 2020, 8:48 PM IST
Highlights

ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. 

ಬೆಂಗಳೂರು, (ಆ.22): ರಾಜ್ಯದಲ್ಲಿ ಮಳೆ ಹಾನಿ ಮತ್ತು ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಗಸ್ಟ್ 25ರಂದು ವೈಮಾನಿಕ ಸಮೀಕ್ಷೆ ನಡೆಸಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಮಂಗಳವಾರ ಮೊದಲ ಹಂತದಲ್ಲಿ ಕೃಷ್ಣ ಕೊಳ್ಳದ ತೀರಾ ಪ್ರದೇಶಗಳಾದ ರಾಯಚೂರು, ಬಾಗಲಕೋಟೆ, ಮತ್ತಿತರ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುವರು. ಸಿಎಂಗೆ ಕಂದಾಯ ಸಚಿವ ಆರ್.ಅಶೋಕ್ ಕೂಡಾ ಮುಖ್ಯಮಂತ್ರಿಗೆ ಸಾಥ್ ನೀಡಲಿದ್ದಾರೆ.

ಮಹಾಮಳೆಗೆ ನಲುಗಿದ 11 ರಾಜ್ಯಗಳು; ಎಲ್ಲಾ ಕಡೆ ಅವಾಂತರಗಳದ್ದೇ ಗೋಳು..!

ಭಾರತೀಯ ವಾಯು ಪಡೆ (ಐ ಎಎಪ್) ಗೆ ಸೇರಿದ ವಿಶೇಷ ಹ್ಯಾಲಿಕಾಪ್ಟರ್ ನಲ್ಲಿ ಸಮೀಕ್ಷೆ ನಡೆಸುವರು. ಸಮೀಕ್ಷೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಕೆಲವು ನೆರೆಪೀಡಿತ ಸ್ಥಳಗಳಿಗೆ ಭೇಟಿ ಕೊಡಲಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ಅವರು,ಸಂತ್ರಸ್ಥರನ್ನು ಭೇಟಿಯಾಗಿ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಸಮೀಕ್ಷೆಯ ನಂತರ ಜಿಲ್ಲಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಕರ್ನಾಟಕದ ಕೂಗಿಗೆ ಕೇಂದ್ರದ ಸ್ಪಂದನೆ; ನೆರೆ ಹಾವಳಿಗೆ 395.5 ಕೋಟಿ ರೂ. ಮುಂಗಡ

ಕೆಲ ದಿನಗಳ ಹಿಂದೆಯೇ ಯಡಿಯೂರಪ್ಪ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಾಗಿತ್ತು. ಕೊರೋನಾ ಸೋಂಕು ಕಾಣಿಸಿಕೊಂಡು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಕೆಲ ದಿನಗಳವರೆಗೆ ಮನೆಯಲ್ಲಿ ಕ್ವಾಂರೈಂಟೈನ್‌ಗೆ ಒಳಗಾಗಿದ್ದರು. 

click me!