ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಂವಾದ; ಜನರ ಜೀವನ ಸುಧಾರಣೆಗೆ ಶಪಥ

By Kannadaprabha NewsFirst Published Aug 9, 2022, 11:05 PM IST
Highlights
  • ಗ್ರಾಮೀಣ ಜನರ ಜೀವನ ಸುಧಾರಣೆಗೆ ಸಿಎಂ ಶಪಥ
  •  ಪ್ರತಿ ಜಿಲ್ಲೆಯಲ್ಲಿ 75ರಂತೆ 2325 ಅಮೃತ ಸರೋವರಗಳ ನಿರ್ಮಾಣ
  • "ಮನೆ ಮನೆಗೆ ಗಂಗೆ’ ಅಡಿ 21 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ
  •  21-22ರಲ್ಲಿ 34 ಲಕ್ಷ ಕುಟುಂಬಗಳಿಗೆ ಕೆಲಸ, 4652 ಕೋಟಿ ರು. ಜಮೆ
  •  22-23ರಲ್ಲಿ ಜುಲೈವರೆಗೆ 18 ಲಕ್ಷ ಕುಟುಂಬಗಳಿಗೆ ಕೆಲಸ, 1325 ಕೋಟಿ ರು. ಜಮೆ
  •  ಸ್ವಚ್ಛ ಭಾರತ್‌ ಯೋಜನೆಯಡಿ 77969 ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣ- 215 ಸಮುದಾಯ ಶೌಚಾಲಯ ನಿರ್ಮಾಣ
  •  ಪಂಚಾಯ್ತಿಯಲ್ಲಿ ಮೀಸಲು ನಿಗದಿಗೆ ಸೀಮಾ ಆಯೋಗ ರಚನೆ

ಬೆಂಗಳೂರು (ಆ.10) : ಪಂಚಾಯತ್‌ ರಾಜ್‌ ಸಂಸ್ಥೆಗಳ ಬಲವರ್ಧನೆಯೊಂದಿಗೆ ಸದೃಢ ಹಾಗೂ ಸಮಗ್ರ ಗ್ರಾಮೀಣ ಪ್ರದೇಶಗಳ ಸರ್ವೋತೋಮುಖ ಅಭಿವೃದ್ದಿಗೊಳಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟಉತ್ತಮಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಶುದ್ಧ ಕುಡಿಯುವ ನೀರು, ಬೀದಿ ದೀಪ, ನೈರ್ಮಲ್ಯ, ತ್ಯಾಜ್ಯಗಳ ನಿರ್ವಹಣೆ, ಉದ್ಯೋಗ, ಶಾಲೆ, ಅಂಗನವಾಡಿಗಳಿಗೆ ಕಟ್ಟಡ, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿದೆ.

1500 ಗ್ರಾ.ಪಂ.ಗಳಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆ, ಮಳೆ ನೀರು ಸಂರಕ್ಷಣೆಗೆ ಅಮೃತ ಸರೋವರ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ 75ರಂತೆ 2325 ಅಮೃತ ಸರೋವರಗಳ ನಿರ್ಮಾಣದ ಗುರಿ ಹೊಂದಲಾಗಿದೆ. ‘ಮನೆ ಮನೆಗೆ ಗಂಗೆ’ ಹೆಸರಿನಲ್ಲಿ ಒಟ್ಟು 21 ಲಕ್ಷ ಮನೆಗಳಿಗೆ ಹೊಸದಾಗಿ ನಳ ಸಂಪರ್ಕ ಒದಗಿಸಲಾಗಿದೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2021-22ನೇ ಆರ್ಥಿಕ ಸಾಲಿನಲ್ಲಿ ಒಟ್ಟು 33.94 ಲಕ್ಷ ಕುಟುಂಬಗಳಿಗೆ ಕೆಲಸ ನೀಡಿ 4652 ಕೋಟಿ ರು. ಹಾಗೂ 2022-23ನೇ ಆರ್ಥಿಕ ಸಾಲಿನ 2022ರ ಜುಲೈ 5ರವರೆಗೆ ಒಟ್ಟು 17.48 ಲಕ್ಷ ಕುಟುಂಬಗಳಿಗೆ ಕೆಲಸ ನೀಡಿ 1325 ಕೋಟಿ ರು. ಕೂಲಿಕಾರರ ಖಾತೆಗೆ ಜಮೆ ಮಾಡಲಾಗಿದೆ.

Latest Videos

ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಯೋಜನೆಯಡಿ 77969 ವೈಯಕ್ತಿಕ ಗೃಹ ಶೌಚಾಲಯ, 215 ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಪಿಎಂಜಿಎಸ್‌ವೈ ಯೋಜನೆಯಡಿ 2340.615 ಕಿ.ಮೀ ಉದ್ದದ ರಸ್ತೆಗಳನ್ನು 1261.28 ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಗ್ರಾಮ, ತಾಲ್ಲೂಕು ಜಿಲ್ಲಾ ಪಂಚಾಯತಿಗಳ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯವನ್ನು ನಿರ್ಧರಿಸಿ, ಮೀಸಲಾತಿಯನ್ನು ನಿಗದಿಗೊಳಿಸಲು ಸರ್ಕಾರಕ್ಕೆ ಸೂಕ್ತ ಶಿಫಾರಸ್ಸನ್ನು ಮಾಡಲು ‘ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ರಚಿಸಲಾಗಿದೆ.

ಅಮೃತ ಗ್ರಾಮ ಪಂಚಾಯಿತಿ:

ಹಂತ-1 ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸರ್ಕಾರವು ರಾಜ್ಯದ ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ದಿಗಾಗಿ ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆಯನ್ನು ಅನುಷ್ಠಾನಗೊಳಿಸಲು 2021ರ ಆಗಸ್ಟ್‌ 19 ರಂದು ರಾಜ್ಯ ಸಚಿವ ಸಂಪುಟ ಅನುಮೋದನೆಯನ್ನು ನೀಡಿರುತ್ತದೆ. ಅಮೃತ ಗ್ರಾಮ ಪಂಚಾಯಿತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ಜಿಲ್ಲೆಗಳ 5955 ಗ್ರಾಮ ಪಂಚಾಯಿತಿಗಳ ಪೈಕಿ ಹಂತ-1ರಡಿ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಅನುಮೋದನೆ ನೀಡಲಾಗಿದೆ.

ಆಯ್ಕೆ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ ‘ಜಲ ಜೀವನ್‌ ಮಿಷನ್‌’ಯೋಜನೆ ಅಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳು ಹಾಗೂ ಸೋಲಾರ್‌ ದೀಪಗಳ ಅಳವಡಿಕೆ, ಘನ ಹಾಗೂ ದ್ರವ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ, ಮಹಾತ್ಮ ಗಾಂಧಿ ‘ನರೇಗಾ’ ಯೋಜನೆಯಡಿ ಆಟದ ಮೈದಾನ, ಉದ್ಯಾನವನ, ಸ್ಮಶಾನ ಅಭಿವೃದ್ದಿ, ಗ್ರಾಮ ಪಂಚಾಯತ್‌ ಕಟ್ಟಡಗಳ ನಿರ್ಮಾಣ, ಎಲ್ಲ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿ, ಶೌಚಾಲಯಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ.

ಹಂತ-2: 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಹೊರಡಿಸಿರುವ ಆದೇಶ ಮತ್ತು ಯೋಜನೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೆಚ್ಚುವರಿ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಗುರಿ ನಿಗದಿಪಡಿಸಿ ಎಲ್ಲ ಜಿಲ್ಲೆಗಳಿಗೆ ಕಳುಹಿಸಿದೆ. ಗ್ರಾಮ ಪಂಚಾಯಿತಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. (ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಉಡುಪಿ, ಉತ್ತರಕನ್ನಡ, ಯಾದಗಿರಿ, ಕೊಪ್ಪಳ, ದಕ್ಷಿಣ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಆಯ್ಕೆ ಪಟ್ಟಿಸ್ವೀಕೃತವಾಗಿರುತ್ತದೆ)

ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ: ಸಚಿವ ಸಂಪುಟವು 2021ರ ಸೆಪ್ಟೆಂಬರ್‌ 4ರಂದು ಅನುಮೋದಿಸಿರುವಂತೆ ಕರ್ನಾಟಕ ಗ್ರಾಮಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರಕ್ಕೆ ತಿದ್ದುಪಡಿ ತಂದು ಕರ್ನಾಟಕ ಪಂಚಾಯತ್‌ ರಾಜ… ಸೀಮಾ ನಿರ್ಣಯ ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಲಾಗಿದ್ದು, 2021ರ ಅಕ್ಟೋಬರ್‌ 13ರ ಸರ್ಕಾರದ ಆದೇಶದಂತೆ ಆಯೋಗವನ್ನು ರಚಿಸಲಾಗಿದೆ. ಈ ಆಯೋಗಕ್ಕೆ ಗ್ರಾಮ, ತಾಲ್ಲೂಕು ಜಿಲ್ಲಾ ಪಂಚಾಯತಿಗಳ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯವನ್ನು ನಿರ್ಧರಿಸುವ ಹಾಗೂ ಮೀಸಲಾತಿಯನ್ನು ನಿಗದಿಗೊಳಿಸುವ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸನ್ನು ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ.

15ನೇ ಹಣಕಾಸು ಆಯೋಗದ ಅನುದಾನ: 15ನೇ ಹಣಕಾಸು ಆಯೋಗ ಅನುದಾನವು 2020-21ನೇ ಸಾಲಿನಿಂದ ಪ್ರಾರಂಭವಾಗಿ 2024-25 ರವರೆಗೆ ಚಾಲ್ತಿಯಲ್ಲಿರುತ್ತದೆ. 2021-22ನೇ ಸಾಲಿನಿಂದ ಇಲ್ಲಿಯವರೆಗೂ 15ನೇ ಹಣಕಾಸು ಆಯೋಗ ಅನುದಾನದಲ್ಲಿ ನಿಗದಿಪಡಿಸಿರುವ ಒಟ್ಟು 2,377 ಕೋಟಿ ರು.ಗಳಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ 2019.17 ಕೋಟಿ ರು.ಗಳನ್ನು, ತಾಲ್ಲೂಕು ಪಂಚಾಯತಿಗಳಿಗೆ 237.55 ಕೋಟಿ ರು.ಗಳನ್ನು ಹಾಗೂ ಜಿಲ್ಲಾ ಪಂಚಾ:ಯತಿಗಳಿಗೆ 118.77 ಕೋಟಿ ರು.ರು.ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.

ಜಿ.ಪಂ. ಅನಿರ್ಬಂಧಿತ ಅನುದಾನ: 2021-22ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತಿ ಅನಿರ್ಬಂಧಿತ ಅನುದಾನದಡಿ ನಿಗದಿಪಡಿಸಿರುವ ಒಟ್ಟು 172.07 ಕೋಟಿ ರು.ಗಳಲ್ಲಿ ರಾಜ್ಯದ ಜಿಲ್ಲಾ ಪಂಚಾಯತಿಗಳಿಗೆ 172.7 ಕೋಟಿ ರು.ಗಳನ್ನು ಹಾಗೂ 2022-23ನೇ ಸಾಲಿನಲ್ಲಿ ನಿಗದಿ ಪಡಿಸಿರುವ ಒಟ್ಟು 175.07.ಕೋಟಿ ರು.ಗಳಲ್ಲಿ ರಾಜ್ಯದ ಜಿಲ್ಲಾ ಪಂಚಾಯತಿಗಳಿಗೆ 43.76 ಕೋಟಿ ರು.ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.

ತಾಲ್ಲೂಕು ಪಂಚಾಯತಿ ಅನಿರ್ಬಂಧಿತ ಅನುದಾನ: 2021-22ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯತಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತಿ ಅನಿರ್ಬಂಧಿತ ಅನುದಾನದಡಿ ನಿಗದಿ ಪಡಿಸಿರುವ ಒಟ್ಟು 461.89 ಕೋಟಿ ರು.ಗಳಲ್ಲಿ ರಾಜ್ಯದ ತಾಲ್ಲೂಕು ಪಂಚಾಯತಿಗಳಿಗೆ 461.89 ಕೋಟಿ ರು.ಗಳನ್ನು ಹಾಗೂ 2022-23ನೇ ಸಾಲಿನಲ್ಲಿ ನಿಗದಿ ಪಡಿಸಿರುವ ಒಟ್ಟು 516.38 ಕೋಟಿ ರು.ಗಳಲ್ಲಿ ರಾಜ್ಯದ ತಾಲ್ಲೂಕು ಪಂಚಾಯತಿಗಳಿಗೆ 129.09 ಕೋಟಿ ರು.ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.

ರಾಷ್ಟ್ರೀಯ ಗ್ರಾಮ ಸ್ವರಾಜ… ಅಭಿಯಾನ ಯೋಜನೆ: 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ ಯೋಜನೆಯಡಿ ಆಯವ್ಯಯದಲ್ಲಿ ನಿಗದಿಪಡಿಸಲಾದ ಒಟ್ಟು 48.66 ಕೋಟಿ ರು.ಗಳಲ್ಲಿ 46.50 ಕೋಟಿ ರು.ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.

ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳಿಗೆ ಮಾಸಿಕ ಗೌರವಧನ: 2021-22ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಮಾಸಿಕ ಗೌರವಧನದಲ್ಲಿ ನಿಗದಿಪಡಿಸಿರುವ ಒಟ್ಟು 139.32 ಕೋಟಿ ರು.ಗಳಲ್ಲಿ ರಾಜ್ಯದ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ 136 ಕೋಟಿ ರು.ಗಳನ್ನು ಹಾಗೂ 2022-23ನೇ ಸಾಲಿನಲ್ಲಿ ನಿಗದಿಪಡಿಸಿರುವ ಒಟ್ಟು 136.93 ಕೋಟಿ ರು.ಗಳಲ್ಲಿ ರಾಜ್ಯದ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ 56.33 ಕೋಟಿ ರು.ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ : 2021-22ನೇ ಆರ್ಥಿಕ ಸಾಲಿನಲ್ಲಿ ಒಟ್ಟು 33.94 ಲಕ್ಷ ಕುಟುಂಬಗಳಿಗೆ 16.40 ಕೋಟಿ ಮಾನವ ದಿನಗಳ ಕೆಲಸ ನೀಡಿ 46.52 ಕೋಟಿ ರು.ಹಣ ಕೂಲಿಕಾರರ ಖಾತೆಗೆ ಜಮೆ ಮಾಡಲಾಗಿದೆ. ಹಾಗೆಯೇ 2022-23ನೇ ಆರ್ಥಿಕ ಸಾಲಿನ 2022ರ ಜುಲೈ 5ರವರೆಗೆ ಒಟ್ಟು 17.48 ಲಕ್ಷ ಕುಟುಂಬಗಳಿಗೆ 4.52 ಕೋಟಿ ಮಾನವ ದಿನಗಳ ಕೆಲಸ ನೀಡಿ 13.25 ಕೋಟಿ ರು. ಹಣ ಕೂಲಿಕಾರರ ಖಾತೆಗೆ ಜಮೆ ಮಾಡಲಾಗಿದೆ.

ಮಳೆ ನೀರು ಸಂರಕ್ಷಣೆಗಾಗಿ ಜಲಶಕ್ತಿ ಅಭಿಯಾನ: ಅಮೃತ ಸರೋವರ ಯೋಜನೆಯನ್ನು ಕೇಂದ್ರ ಸರ್ಕಾರ 2002ರ ಏಪ್ರಿಲ್ 24 ರಂದು ಪ್ರಾರಂಭಿಸಿದ್ದು, ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು 2023ರ ಆಗಸ್ಟ್‌ 15 ರೊಳಗೆ ನಿರ್ಮಿಸಲು ಗುರಿ ನಿಗದಿಪಡಿಸಲಾಗಿರುತ್ತದೆ. ಅದರಂತೆ, ರಾಜ್ಯದಲ್ಲಿ ಒಟ್ಟು 2325 ಅಮೃತ ಸರೋವರಗಳ ನಿರ್ಮಾಣದ ಗುರಿ ಹೊಂದಿದೆ. ಈಗಾಗಲೇ ತಂತ್ರಜ್ಞಾನ ಬಳಸಿ ಸೂಕ್ತ ಸ್ಥಳಗಳ ಆಯ್ಕೆ ಮುಗಿದಿದ್ದು, 1194 ಅಮೃತ ಸರೋವರಗಳ ನಿರ್ಮಾಣದ ಕೆಲಸ ಪ್ರಾರಂಭವಾಗಿರುತ್ತದೆ. ಅಮೃತ ಸರೋವರ ಕಾಮಗಾರಿಗಳ ಮುಕ್ತಾಯದ ಆಧಾರದಲ್ಲಿ ನಮ್ಮ ರಾಜ್ಯ ದೇಶದಲ್ಲಿ 4ನೇ ಸ್ಥಾನದಲ್ಲಿದೆ.

ಗ್ರಾಮೀಣ ನೀರು ಸರಬರಾಜು: ಕೇಂದ್ರದ ಮಹತ್ವಾಕಾಂಕ್ಷೆಯ ಜಲಜೀವನ್‌ ಮಿಷನ್‌ ಯೋಜನೆಯು ರಾಜ್ಯದಲ್ಲಿ .‘ಮನೆ ಮನೆಗೆ ಗಂಗೆ’ ಎಂಬ ಹೆಸರಿನಲ್ಲಿ ಅನುಷ್ಠಾನಗೊಳ್ಳುತ್ತಿದ್ದು, 2021 ಜುಲೈ 28ರಿಂದ 2022 ಜೂನ್‌ 15 ರವರೆಗೆ ಒಟ್ಟು 21 ಲಕ್ಷ ಮನೆಗಳಿಗೆ ಹೊಸದಾಗಿ ನಳ ಸಂಪರ್ಕ ಒದಗಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 51.96 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳಸಂಪರ್ಕ ಒದಗಿಸಲಾಗಿದೆ

ಸ್ವಚ್ಛ ಭಾರತ ಅಭಿಯಾನ:  2021 ಜುಲೈನಿಂದ 2022 ರ ಜೂನ್‌ ಅವಧಿಯಲ್ಲಿ ಸ್ವಚ್ಛ ಭಾರತ್‌ಮಿಷನ್‌ (ಗ್ರಾ) ಯೋಜನೆಯಡಿ 77969 ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. 215 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2046 ಘನ ತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯಾಚರಣೆಯಲ್ಲಿದ್ದು, 1299 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುತ್ತಿದೆ. 7003 ಗ್ರಾಮಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಮಾಡಲು ಗುರಿ ಹೊಂದಲಾಗಿದ್ದು, ಈವರೆಗೆ 14426 ಗ್ರಾಮಗಳಲ್ಲಿ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಿ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟಾರೆಯಾಗಿ .342.00 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಯೋಜನೆಯ ಮಾರ್ಗ ಸೂಚಿಯಂತೆ ಗ್ರಾಮಗಳನ್ನು ಮೂರು ಹಂತದಲ್ಲಿ ಮಾಡಲು ತಿಳಿಸಲಾಗಿದ್ದು, ಅದರಂತೆ ಪ್ರಸ್ತುತ ವೈಯಕ್ತಿಕ ಗೃಹ ಶೌಚಾಲಯ ಹಾಗೂ ಘನತ್ಯಾಜ್ಯ ನಿರ್ವಹಣೆ ಕಾರ್ಯಾಚರಣೆಯಲ್ಲಿರುವಂತಹ ಗ್ರಾಮಗಳ ಪೈಕಿ ಪ್ರಸ್ತುತ 6643 ಗ್ರಾಮಗಳನ್ನು Oಈಊ P್ಝ್ಠs (ಅspಜ್ಟಿಜ್ಞಿಜ) ಎಂದು ಘೋಷಿಸಲಾಗಿದೆ.

PMGSY ಯೋಜನೆ:

PMGSY ಯೋಜನೆ 3ರಡಿ 2021 ಜುಲೈ28 ರಿಂದ 2022 ಜೂನ್‌ 15ರವರೆಗೆ 2340.615 ಕಿ.ಮೀ ಉದ್ದದ ರಸ್ತೆಗಳನ್ನು ರೂ.1261.28 ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಗ್ರಾ.ಪಂ. ಗ್ರಂಥಾಲಯಗಳ ಡಿಜಿಟಲೀಕರಣ: ರಾಜ್ಯದಲ್ಲಿ ಗ್ರಾಮ ಪಂಚಾಯತ್‌ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳನ್ನು ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಡಿಜಿಟಲೀಕರಣಗೊಳಿಸುವ ಮೂಲಕ ಜನೋಪಯೋಗಿ ಮಾಡಲಾಗಿದೆ. ಸಾವಿರಾರು ಗ್ರಂಥಾಲಯಗಳನ್ನು ಕಟ್ಟಡ, ಕುಡಿಯುವ ನೀರು, ಶೌಚಾಲಯ ಮುಂತಾದ ಸೌಲಭ್ಯಗಳೊಡನೆ ಅಭಿವೃದ್ಧಿಪಡಿಸಲಾಗಿದೆ. ಇದೇ ವೇಳೆ ನೂರಾರು ಗ್ರಂಥಾಲಯಗಳನ್ನು ಮಾದರಿ ಗ್ರಂಥಾಲಯಗಳಾಗಿ ಅಭಿವೃದ್ದಿಗೊಳಿಸಲಾಗಿದೆ. ‘ಓದುವ ಬೆಳಕು’ ಯೋಜನೆಯಡಿ ಸಾವಿರಾರು ಮಕ್ಕಳನ್ನು ಗ್ರಂಥಾಲಯಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಸಲಾಗಿದೆ.

ಯೋಜನಾ ಸಮಿತಿ: ಗ್ರಾಮ ಮಟ್ಟದಲ್ಲಿ ಲಭ್ಯವಿರುವ ಮಾಹಿತಿ ಸಂಗ್ರಹಿಸಿ ಜನರ ಸಹಭಾಗಿತ್ವದೊಡನೆ ಸಮೀಕ್ಷೆ ನಡೆಸಿ ವಾಸ್ತವ ಸ್ಥಿತಿಗಳ ವಿಶ್ಲೇಷಣೆ ಮಾಡಿ ಆಸಕ್ತ ಗುಂಪುಗಳ ಜೊತೆ ಚರ್ಚಿಸಿ ದೂರದೃಷ್ಟಿಯೋಜನೆ ರೂಪಿಸಲು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ‘ಗ್ರಾಮ ಪಂಚಾಯತ್‌ ಯೋಜನಾ ಸಮಿತಿ’ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮ ಯೋಜನಾ ಸಮಿತಿ ರಚಿಸಲು ಸರ್ಕಾರ ತೀರ್ಮಾನಿಸಿದೆ.

click me!