Corona Crisis: ಕರ್ನಾಟಕದಲ್ಲಿ ಪರೀಕ್ಷೆ ಇಳಿಕೆ: ಕೋವಿಡ್‌ ಕೇಸ್‌ ಕೂಡ ಭಾರಿ ಇಳಿಕೆ

By Govindaraj SFirst Published Aug 9, 2022, 4:00 AM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳು ಅರ್ಧಕ್ಕರ್ಧ ತಗ್ಗಿದ ಹಿನ್ನೆಲೆ ಹೊಸ ಪ್ರಕರಣಗಳು ಕೂಡಾ ಅರ್ಧದಷ್ಟುಇಳಿಕೆಯಾಗಿವೆ. ಸೋಮವಾರ 1019 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, 1662 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 

ಬೆಂಗಳೂರು (ಆ.09): ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳು ಅರ್ಧಕ್ಕರ್ಧ ತಗ್ಗಿದ ಹಿನ್ನೆಲೆ ಹೊಸ ಪ್ರಕರಣಗಳು ಕೂಡಾ ಅರ್ಧದಷ್ಟುಇಳಿಕೆಯಾಗಿವೆ. ಸೋಮವಾರ 1019 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, 1662 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 16 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6 ರಷ್ಟುದಾಖಲಾಗಿದೆ. ಭಾನುವಾರಕ್ಕೆ ಹೋಲಿದರೆ ಸೋಂಕು ಪರೀಕ್ಷೆಗಳು 18 ಸಾವಿರ ಕಡಿಮೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 818 ಇಳಿಕೆಯಾಗಿವೆ (ಭಾನುವಾರ 1837 ಕೇಸ್‌, 4 ಸಾವು). 

ರಾಜ್ಯದಲ್ಲಿ 11,252 ಸಕ್ರಿಯ ಕೇಸು ಇವೆ. 55 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು ಉಳಿದ 1197 ಸೋಂಕಿತರು ಮನೆಯಲ್ಲಿದ್ದಾರೆ. ಕಳೆದ ವಾರ ನಿತ್ಯ ಸರಾಸರಿ 32 ಸಾವಿರ ಸೋಂಕು ಪರೀಕ್ಷೆಗಳು ನಡೆಯುತ್ತಿದ್ದವು. ಸೋಮವಾರ ಏಕಾಏಕಿ ಪರೀಕ್ಷೆಗಳು 16 ಸಾವಿರಕ್ಕೆ ಇಳಿಕೆಯಾಗಿವೆ. ಈ ಹಿನ್ನೆಲೆ ಹೊಸ ಪ್ರಕರಣಗಳು ಕೂಡಾ ಒಂದು ಸಾವಿರ ಆಸುಪಾಸಿಗೆ ತಗ್ಗಿವೆ. ಧಾರವಾಡದಲ್ಲಿ 75 ವರ್ಷದ ವೃದ್ಧೆ, ಬಳ್ಳಾರಿಯಲ್ಲಿ 60 ವರ್ಷದ ವೃದ್ಧ, ಬೆಂಗಳೂರಿನಲ್ಲಿ 65 ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೂವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. 

Corona Crisis: ಕರ್ನಾಟಕದಲ್ಲಿ 1287 ಹೊಸ ಕೋವಿಡ್‌ ಪ್ರಕರಣ ಪತ್ತೆ, 2 ಸಾವು

ಸೋಮವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 655 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಮೈಸೂರು ಮತ್ತು ಬೆಳಗಾವಿಯಲ್ಲಿ ತಲಾ 60 ಮಂದಿಗೆ ಸೋಂಕು ತಗುಲಿದೆ. 14 ಜಿಲ್ಲೆಗಳಲ್ಲಿ ಬೆರಳೆಣಿಕೆ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ವಿಜಯಪುರದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಯಲ್ಲಿರುವ 55 ಸೋಂಕಿತರ ಪೈಕಿ 5 ಮಂದಿ ಐಸಿಯು, 6 ಮಂದಿ ಆಕ್ಸಿಜನ್‌, 44 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 11,197 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಬೆಂಗಳೂರಿನಲ್ಲಿ ಇಳಿದ ಕೊರೋನಾ ಕೇಸ್‌: ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ನಗರದಲ್ಲಿ ಸೋಮವಾರ 655 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಪಾಸಿಟಿವಿಟಿ ದರ 7.49ರಷ್ಟಿದೆ. 1,168 ಜನರು ಗುಣಮುಖರಾಗಿದ್ದು, ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ನಗರದಲ್ಲಿ ಸದ್ಯ 7,769 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 53 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಐಸಿಯು-ವೆಂಟಿಲೇಟರ್‌ನಲ್ಲಿ, 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4 ಎಚ್‌ಡಿಯು ಮತ್ತು 35 ಮಂದಿ ಸಾಮಾನ್ಯ ವಾರ್ಡ್‌ಗೆ ದಾಖಲಾಗಿದ್ದಾರೆ.

Corona Vaccine: 4 ಕೋಟಿ ಜನರು ಒಂದು ಡೋಸು ಪಡೆದಿಲ್ಲ: ಕೇಂದ್ರ

ಉಳಿದವರು ಮನೆಗಳಲ್ಲಿ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 2,083 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 75 ಮಂದಿ ಮೊದಲ ಡೋಸ್‌, 511 ಮಂದಿ ಎರಡನೇ ಡೋಸ್‌ ಮತ್ತು 1497 ಮಂದಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 23 ಕ್ಲಸ್ಟರ್‌ಗಳಿದ್ದು, 5ಕ್ಕಿಂತ ಹೆಚ್ಚು ಸೋಂಕಿತರಿರುವ ಒಂದು ಕ್ಲಸ್ಟರ್‌ ಇದೆ.

click me!