Latest Videos

ನಾನು ಸಿದ್ದರಾಮಯ್ಯರ ವಕ್ತಾರನಲ್ಲ; ಬಿಕೆ ಹರಿಪ್ರಸಾದ ಪರೋಕ್ಷ ಅಸಮಾಧಾನ

By Ravi JanekalFirst Published Dec 5, 2023, 9:52 PM IST
Highlights

ನಾನು ಸಿದ್ದರಾಮಯ್ಯರ ವಕ್ತಾರನಲ್ಲ ಎಂದು ಮತ್ತೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಬಿಕೆ ಹರಿಪ್ರಸಾದ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಹುಬ್ಬಳ್ಳಿ (ಡಿ.5): ನಾನು ಸಿದ್ದರಾಮಯ್ಯರ ವಕ್ತಾರನಲ್ಲ ಎಂದು ಮತ್ತೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಬಿಕೆ ಹರಿಪ್ರಸಾದ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇಂದು ಹುಬ್ಬಳ್ಳಿಯಲ್ಲಿ ಮುಸ್ಲಿಮ್ ಸಮುದಾಯದ ಕುರಿತು ಸಿದ್ದರಾಮಯ್ಯ ಹೇಳಿಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಬಹಳ ಅನುಭವ ಇದೆ ಅವರಿಗೆ ಮಾಹಿತಿ ಇರುತ್ತೆ ಅದಕ್ಕೆ ಇದರ ಬಗ್ಗೆ ಅವರನ್ನೇ ಕೇಳೋದು ಒಳ್ಳೆಯದು ಅವರ ಹೇಳಿಕೆ ಸಂಬಂಧ ನಾನು ಉತ್ತರ ನೀಡಲ್ಲ. ನಾನು ಅವರ ವಕ್ತಾರನಲ್ಲ ಎಂದರು.

ನಾನಿಲ್ಲಿ ಸಿದ್ದರಾಮಯ್ಯ ವಿರುದ್ದ ಮಾತಾಡ್ತಿಲ್ಲ. ನಮ್ಮ ಸಮುದಾಯಕ್ಕೆ ಇವಾಗಿಂದ ಅಲ್ಲ, ಮುಂಚೆಯಿಂದಲೂ  ಅನ್ಯಾಯ ಆಗಿದೆ. ಪಕ್ಷದಲ್ಲಿ ಎಲ್ಲ ಚೆನ್ನಾಗಿದೆ, ನಾನು ಚೆನ್ನಾಗಿದೀನಿ ಆದರೆ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸಲು ಆಗ್ತಿಲ್ಲ ಎಂದು ಸಿಎಂ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚಿದ್ರೆ ತಪ್ಪೇನು? ಅಬಕಾರಿ ಸಚಿವ ಯಾಕೆ ಹಿಂಗಂದ್ರು!?

ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಈ ದೇಶದ ಮುಸ್ಲಿಮರಿಗೆ ಅನ್ಯಾಯವಾಗಲು ಬಿಡಲ್ಲ. ದೇಶದ ಸಂಪತ್ತು ಅವರಿಗೂ ಹಂಚುತ್ತೇವೆ. ಕುವೆಂಪು ಅವರ ಆಶಯದಂತೆ ನಮ್ಮದು ಎಲ್ಲ ಜಾತಿ ಧರ್ಮಗಳಿಗೆ ಒಳಿತನ್ನು ಬಯಸುತ್ತದೆ ಎಲ್ಲರನ್ನು ರಕ್ಷಣೆ ಮಾಡುತ್ತೇವೆ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಮಾತು ಹೇಳಿದ್ದ ಸಿಎಂ ಸಿದ್ದರಾಮಯ್ಯ. 

click me!