
ಬೆಂಗಳೂರು (ಡಿ.2): ಕರ್ನಾಟಕ ಸರ್ಕಾರ ಜಾರಿ ತರಲು ಸಿದ್ಧವಾಗಿರುವ ಇಂದಿರಾ ಆಹಾರ ಕಿಟ್ ವಿತರಣೆಯ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಭೆ ನಡೆಸಿದರು. ಈ ವೇಳೆ ಕಿಟ್‌ನಲ್ಲಿ ಯಾವುದೇ ಪೌಷ್ಠಿಕಾಂಶ ಮತ್ತು ತೂಕ ಕಡಿಮೆಯಾಗಬಾರದು. ಆದರೆ ಸಂಬಂಧಪಟ್ಟವರನ್ನು ಗುರಿ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಸೋಮವಾರ ಆಹಾರ ಸಚಿವ ಕೆ.ಎಚ್.ಮುನಿಯಪ್ಪ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು,‘ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಾಗಿ ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಶೀಘ್ರ ಸಿದ್ಧತೆ ನಡೆಸಬೇಕು. ಪ್ರತಿ ತಿಂಗಳು 1.25 ಕೋಟಿ ಕಿಟ್ ವಿತರಿಸಬೇಕಿದ್ದು, ಪ್ರತಿ ತಿಂಗಳ 10ರೊಳಗಾಗಿ ಯಾವುದೇ ಸಮಸ್ಯೆಯಿಲ್ಲದೆ ವಿತರಿಸಬೇಕು’ ಎಂದರು.
‘ಈ ವೇಳೆ ಯೋಜನೆ ಜಾರಿಗೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ಯಾವ ತಿಂಗಳಿಂದ ಆಹಾರ ಕಿಟ್ ವಿತರಣೆ ಶುರುವಾಗಲಿದೆ’ ಎಂಬ ಬಗ್ಗೆ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.
‘ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯರಿಗೆ 5 ಕೆಜಿ ಹೆಚ್ಚುವರಿ ಅಕ್ಕಿ ಸೇರಿ ಒಟ್ಟು 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು ಹಾಗೂ ಸಕ್ಕರೆ ಒಳಗೊಂಡ ಕಿಟ್ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ತಿಂಗಳು 18,628 ಟನ್ ತೊಗರಿ ಬೇಳೆ, 12,419 ಟನ್ ಸೂರ್ಯಕಾಂತಿ ಎಣ್ಣೆ ಅಗತ್ಯವಾಗಲಿದೆ. ಪ್ರತಿ ತಿಂಗಳು 466 ಕೋಟಿ ರು. ವೆಚ್ಚ ಆಗುವ ಅಂದಾಜಿದ್ದು, ತೊಗರಿ ಬೇಳೆ, ಎಣ್ಣೆಯನ್ನು ನ್ಯಾಫೆಡ್‌ನಂತಹ ಕೇಂದ್ರದ ಸರಬರಾಜು ಸಂಸ್ಥೆಗಳಿಂದ ಅಥವಾ ಕೆಟಿಪಿಪಿ ಕಾಯ್ದೆಯಡಿ ಪಾರದರ್ಶಕವಾಗಿ ಖರೀದಿಸಬೇಕು’ ಎಂದು ಸೂಚಿಸಿದರು.
ಸೂಚನೆ - ಗುಣಮಟ್ಟದಲ್ಲಿ ರಾಜಿಯಾದರೆ ಸಂಬಂಧಪಟ್ಟವರ ಹೊಣೆ: ಎಚ್ಚರಿಕೆ । ಪ್ರತಿ ತಿಂಗಳ 10ರೊಳಗೆ ಕಿಟ್ ವಿತರಣೆಯಾಗುವಂತೆ ಕ್ರಮ ಕೈಗೊಳ್ಳಿ: ಸಿದ್ದು
- 5 ಕೇಜಿ ಹೆಚ್ಚುವರಿ ಅಕ್ಕಿಯ ಬದಲು ಇಂದಿರಾ ಪಡಿತರ ಕಿಟ್ । ಅದರಲ್ಲಿರಲಿದೆ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ