
ಬೆಳಗಾವಿ (ಡಿ.2): ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಜಗದೀಶ ಶೆಟ್ಟರ್ ಅವರಿಗೆ ಯುವಕನೊಬ್ಬ ನೇರವಾಗಿ ಮೊಬೈಲ್ ಕರೆ ಮಾಡಿ ವಿಚಿತ್ರ ಬೇಡಿಕೆ ಇಟ್ಟ ಪ್ರಸಂಗವೊಂದು ಬೆಳಕಿಗೆ ಬಂದಿದ್ದು, ಈ ಕುರಿತ ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರತೀಕ ಮಲಜಿ ಎಂದು ತನ್ನನ್ನು ಪರಿಚಯಿಸಿಕೊಂಡ ಯುವಕ ಶೆಟ್ಟರ್ ಅವರಿಗೆ ಕರೆ ಮಾಡಿ ಮಾತು ಶುರು ಮಾಡಿದ್ದಾನೆ. 'ಸರ್ ನಾನು ಪ್ರತೀಕ ಮಲಜಿ, ಆರಾಮ್ ಅದಿರ್ರಿ. ಸರ್ ನನಗೊಂದು ಹೆಲ್ಪ್ ಬೇಕಾಗಿದೆ' ಎಂದು ತನ್ನ ಮನವಿ ಮುಂದಿಟ್ಟಿದ್ದಾನೆ.
ಸಚಿವ ಶೆಟ್ಟರ್ ಅವರು 'ಏನಾಯ್ತು?' ಎಂದು ಪ್ರಶ್ನಿಸಿದಾಗ, ಆ ಯುವಕ ಹಿಂಜರಿಕೆಯಿಲ್ಲದೆ, 'ಸರ್ ಐಪೋನ್ 17 ಪ್ರೋಮ್ಯಾಕ್ಸ್ ಲಾಂಚ್ ಆಗಿದೆ. ಅದರ ಒಂದು ಪೀಸ್ ನನಗೆ ಬೇಕು' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾನೆ.
ಅನಿರೀಕ್ಷಿತವಾಗಿ ಕೇಳಿದ ಈ ವಿಚಿತ್ರ ಬೇಡಿಕೆಯಿಂದಾಗಿ ಕೆಲಕ್ಷಣ ತಬ್ಬಿಬ್ಬಾದ ಶೆಟ್ಟರ್ ಅವರು, ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. 'ಏನ್ರೀ... ಎಂಪಿಯವರ ಬಳಿ ಹೀಗೆಲ್ಲಾ ಕೇಳುತ್ತೀರಿ' ಎಂದಷ್ಟೇ ಹೇಳಿ ತಕ್ಷಣವೇ ಕರೆಯನ್ನು ಕಡಿತಗೊಳಿಸಿದ್ದಾರೆ.
ದೇಶದ ಪ್ರಮುಖ ಜನಪ್ರತಿನಿಧಿಯೊಬ್ಬರಿಗೆ ಐಷಾರಾಮಿ ಮೊಬೈಲ್‌ಗಾಗಿ ನೇರ ಮನವಿ ಮಾಡಿದ ಈ ಧೈರ್ಯದ ಆಡಿಯೋ ಸಂಭಾಷಣೆಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಯುವಕನ ಬೇಡಿಕೆ ಮತ್ತು ಸಂಸದರ ಪ್ರತಿಕ್ರಿಯೆ ಎರಡೂ ವೈರಲ್ ಆಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ