ಸಿದ್ದರಾಮಯ್ಯ ಅವರು ದೇವರಾಜ್ ಅರುಸು ಎಂದು ಹೇಳಿಕೊಂಡಿಲ್ಲ. ಆದರೆ ಜನರು ಅವರನ್ನು ದೇವರಾಜ್ ಅರಸರಂತೆ ಕಾಣುತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಗಂಗಾವತಿ ಸೆ.12) : ಸಿದ್ದರಾಮಯ್ಯ ಅವರು ದೇವರಾಜ್ ಅರುಸು ಎಂದು ಹೇಳಿಕೊಂಡಿಲ್ಲ. ಆದರೆ ಜನರು ಅವರನ್ನು ದೇವರಾಜ್ ಅರಸರಂತೆ ಕಾಣುತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಮಟ್ಟದ ಕ್ರೀಡಾಕೂಟ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯನವರು ನುಡಿದಂತೆ ನಡೆಯುವ ನಾಯಕ. ಅವರು ಅರಸರ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಹತ್ತಿರ ಗತ್ತು,ಗಾಂಭಿರತೆ ಇದೆ ಎಂದರು.
ಸರ್ಕಾರ ಈಡಿಗ ಸಮಾಜವನ್ನು ನಿರ್ಲಕ್ಷಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧು ಬಂಗಾರಪ್ಪರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದರು. ಬಿಜೆಪಿ ಸರಕಾರದಲ್ಲಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ. ಯಾವುದೇ ಭ್ರಷ್ಟಾಚಾರ, ಅಕ್ರಮ ನಡೆಯಲು ನಮ್ಮ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಬಿ.ಎಲ್.ಸಂತೋಷ್ 4 ಶಾಸಕರನ್ನು ಕರೆಸಿಕೊಳ್ಳಲಿ ನೋಡೋಣ: ಸಚಿವ ಶಿವರಾಜ ತಂಗಡಗಿ
ಕುಷ್ಟಗಿಯಲ್ಲಿಂದು ನೂತನ ಪೊಲೀಸ್ ಠಾಣೆ ಉದ್ಘಾಟನೆ:
ನೂತನವಾಗಿ ನಿರ್ಮಿಸಲಾದ ಕುಷ್ಟಗಿ ವೃತ್ತ ಕಾರ್ಯಲಯ, ಪೊಲೀಸ್ ಠಾಣೆಯನ್ನು ಸೆ.12ರಂದು ಬೆಳಗ್ಗೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು.
ಶಾಸಕ ದೊಡ್ಡನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸವರಾಜ ರಾಯರಡ್ಡಿ, ರಾಘವೇಂದ್ರ ಹಿಟ್ನಾಳ, ಶಾಸಕ ಗಾಲಿ ಜನಾರ್ದನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಚಂದ್ರಶೇಖರ ಪಾಟೀಲ, ಶರಣಗೌಡ ಪಾಟೀಲ್ ಬಯ್ಯಾಪುರ,ಉಪಸ್ಥಿತರಿಲಿದ್ದಾರೆ.
ಲೋಕಸಭೆ ಹೊಸ್ತಿಲಲ್ಲಿ ಗ್ಯಾಸ್ ಸಬ್ಸಿಡಿ ಚುನಾವಣೆ ಗಿಮಿಕ್: ಸಚಿವ ಶಿವರಾಜ ತಂಗಡಗಿ