'ಬೇರೆಲ್ಲಾ ರಾಜ್ಯಕ್ಕಿಂತ ಕಡಿಮೆ..' ಹಾಲಿನ ಬೆಲೆ ಏರಿಕೆಗೆ ಮತ್ತೆ ಹಳೆ ಪ್ಲೇಟ್‌ ಓಡಿಸಿ ಸಮರ್ಥನೆಗಿಳಿದ ಸಿಎಂ!

ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನು 9 ರೂಪಾಯಿ ಏರಿಸಿದೆ, ಈ ಬಾರಿ 4 ರೂಪಾಯಿ ಏರಿಕೆ ಮಾಡಿದ್ದು, ಸಿಎಂ ಸಮರ್ಥಿಸಿಕೊಂಡಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ ನೀಡುವ ಬದಲು ದರ ಏರಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

CM Siddaramaiah defended the Nandini Milk Price Hike decision san

ಬೆಂಗಳೂರು (ಮಾ.27): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಂದಿನಿ ಹಾಲಿನ ಬೆಲೆಯಲ್ಲಿ ಬರೋಬ್ಬರಿ 9 ರೂಪಾಯಿ ಏರಿಕೆ ಮಾಡಿದ್ದಾರೆ. ಈ ಬಾರಿ ದಾಖಲೆ ಎನ್ನುವಂತೆ 4 ರೂಪಾಯಿ ಏರಿಕೆ ಮಾಡಿ ಸಾಮಾನ್ಯ ಜನರ ಮೇಲೆ ಬರೆ ಹಾಕಲಾಗಿದೆ. ಈ ಬಾರಿಯೂ ಬೆಲೆ ಏರಿಕೆ ಮಾಡಿದ್ದಕ್ಕೆ ಸಿಎಂ ಸಿದ್ಧರಾಮಯ್ಯ ಸಮರ್ಥನೆಗೆ ಇಳಿದಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಹಕಾರ ಸಚಿವ ಕೆಎನ್‌ ರಾಜಣ್ಣ, ರೈತರಿಗೆ ಸಹಾಯ ಮಾಡೋದಾದರೆ ಸರ್ಕಾರದಿಂದಲೇ ಪ್ರೋತ್ಸಾಹ ಧನ ನೀಡಬಹುದಲ್ವಾ ಅನ್ನೋ ಪ್ರಶ್ನೆಗೆ ಬೇಜವಾಬ್ದಾರಿ ಉತ್ತರ ನೀಡಿದ್ದರು. 'ಪ್ರೋತ್ಸಾಹ ಧನ ನೀಡೋಕೆ ಸರ್ಕಾರದಲ್ಲೇನು ನೋಟು ಪ್ರಿಂಟಿಂಗ್‌ ಮಷಿನ್‌ ಇಟ್ಟಿದ್ದೇವೆಯೇ?' ಎಂದು ಉತ್ತರ ನೀಡಿದ್ದಾರೆ.

ಜನಾಕ್ರೋಶದ ನಡುವೆ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, 'ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭ ಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ. ನಾಡಿನ‌ ಲಕ್ಷಾಂತರ ಹೈನುಗಾರರ ಬದುಕಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನಮಗಿದೆ' ಎಂದು ಭಾರವನ್ನು ಜನರ ಮೇಲೆ ಹೊರಿಸಿದ್ದಾರೆ.

Latest Videos

ದೇಶದ ಯಾವುದೇ ಹಾಲು ಒಕ್ಕೂಟ ಅಥವಾ ಮಹಾಮಂಡಳಗಳು 20 ತಿಂಗಳ ಅವಧಿಯಲ್ಲಿ ಲೀಟರ್‌ ಹಾಲಿನ ಮೇಲೆ 9 ರೂಪಾಯಿ ಏರಿಕೆ ಮಾಡಿದ್ದ ಇತಿಹಾಸವೇ ಇಲ್ಲ. ಆದರೆ, ಈಗ ರಾಜ್ಯ ಸರ್ಕಾರ ರೈತರ ನೆಪದಲ್ಲಿ 9 ರೂಪಾಯಿ ಏರಿಕೆ ಮಾಡಿದೆ. ಎಂದಿನಂತೆ ಈ ಬಾರಿಯೂ ಸಿಎಂ ಬೇರೆಲ್ಲಾ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಎನ್ನುವ ಪ್ಲೇಟ್‌ ಓಡಿಸಿದ್ದಾರೆ.

ಎರಡು ದಿನಗಳ ಹಿಂದೆ ಕೆಎಂಎಫ್‌ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಹಾಲು ದರವನ್ನು ಹೆಚ್ಚಳ ಮಾಡೋದಿಲ್ಲ ಎಂದು ಸ್ವತಃ ಸಿಎಂ ಹೇಳಿದ್ದಾಗಿ ವರದಿಯಾಗಿತ್ತು. ಅದರ ಬದಲು, 'ಹಾಲು ಒಕ್ಕೂಟಗಳು ಖರ್ಚು-ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆ ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿ ಕೆಲ ಹಾಲು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ' ಎಂದಿದ್ದರು. 

ಕಾಂಗ್ರೆಸ್ ಸರ್ಕಾರದಿಂದ 3ನೇ ಬಾರಿಗೆ ₹4 ಹಾಲಿನ ದರ ಏರಿಕೆ! 20 ತಿಂಗಳಲ್ಲಿ 9 ರೂ. ಹೆಚ್ಚಳ!

'ಹಾಲು ಒಕ್ಕೂಟಗಳ ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ ಶೇ.2ಕ್ಕಿಂತ ಹೆಚ್ಚಾಗಬಾರದು. ಮುಂದಿನ ಮೂರು ತಿಂಗಳಲ್ಲಿಆಡಳಿತಾತ್ಮಕ ವೆಚ್ಚವನ್ನು ಕಡ್ಡಾಯವಾಗಿ ಶೇ.2.5ಕ್ಕೆ ಇಳಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು' ಎಂದು ಹೇಳಿದ್ದರು. 

ಗ್ಯಾರಂಟಿ ಎಂಟಾಣೆ ತೋರಿಸಿ ಜನರನ್ನ ಲಂಗೋಟಿ ಮೇಲೆ ನಿಲ್ಲಿಸಿದ ಸರ್ಕಾರ, 22 ತಿಂಗಳ ಅಧಿಕಾರದಲ್ಲಿ 'ಬೆಲೆ ಏರಿಕೆ'ಯದ್ದೇ ಕಾರುಬಾರು!

ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭ ಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ… pic.twitter.com/Q3P5OW4p0X

— CM of Karnataka (@CMofKarnataka)
vuukle one pixel image
click me!