ಉರಿಗೌಡ-ನಂಜೇಗೌಡ ಕೇಸಲ್ಲಿ ನಮ್ಮ ವಿರುದ್ಧ ನಿಂತ್ರಿ, ಇನ್ನು ಅದೆಲ್ಲ ನಡೆಯಲ್ಲ: ಪೊಲೀಸರಿಗೆ ಡಿಕೆಶಿ ವಾರ್ನಿಂಗ್

By Gowthami KFirst Published May 23, 2023, 4:17 PM IST
Highlights

 ಕಳೆದ 4 ವರ್ಷದ ಸರಕಾರದಲ್ಲಿ ನಡೆದ ಘಟನೆಗಳು ಯಾವುದು ನಡೆಯೊಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಅದನ್ನ ಉಳಿಸಿಕೊಳ್ಳಿ ಎಂದು ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರು (ಮೇ23): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ನೇತೃತ್ವದಲ್ಲಿ  ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಸರ್ಕಾರ ರಚನೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿ ಗಳ ಸಭೆ ನಡೆದಿದ್ದು, ಡಿಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಬಂಧ ಚರ್ಚೆ ನಡೆದಿದೆ. ಇದರ ಜೊತೆಗೆ ಈ ಹಿಂದಿನ 4 ವರ್ಷದ ವ್ಯವಸ್ಥೆ ನಮಗೆ ಬೇಡ.  ನಮ್ಮ ಸರ್ಕಾರದಲ್ಲಿ ಕಾನೂ‌ನು ಎಲ್ಲರಿಗೂ ಒಂದೇ. ಕಾನೂನು ಪಾಲನೆ ಮಾಡಬೇಕು. ಎಷ್ಟೇ ದೊಡ್ಡವರಾದ್ರು ಕಾನೂನು ಎಲ್ಲರಿಗೂ ಒಂದೇ ಇರಬೇಕು. ರೌಡಿಸಂ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ಇಡಬೇಕು ಎಂದು ಖಡಕ್ ಆಗಿಯೇ ಹೇಳಿದ್ದಾರೆ.    

ಈ ಹಿಂದಿನ 4 ವರ್ಷದ ವ್ಯವಸ್ಥೆ ನಮಗೆ ಬೇಡ: 
ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು. ಈ ಹಿಂದಿನ 4 ವರ್ಷದ ವ್ಯವಸ್ಥೆ ನಮಗೆ ಬೇಡ. ನಮ್ಮ ಸರ್ಕಾರದಲ್ಲಿ ಕಾನೂ‌ನು ಎಲ್ಲರಿಗೂ ಒಂದೇ. ಕಾನೂನು ಪಾಲನೆ ಮಾಡಬೇಕು. ಎಷ್ಟೇ ದೊಡ್ಡವರಾದ್ರು ಕಾನೂನು ಎಲ್ಲರಿಗೂ ಒಂದೇ ಇರಬೇಕು. ರೌಡಿಸಂ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ಇಡಬೇಕು. ಯಾವುದೇ ಕಾನೂನು ಉಲ್ಲಂಘನೆ, ರೌಡಿಸಂ ಚಟುವಟಿಕೆಗಳು ನಡೆದರೆ ಅದಕ್ಕೆ ಆಯಾ ವಲಯದ ಡಿಸಿಎಪಿಗಳು, ಎಸ್ಪಿಗಳೇ ಹೊಣೆ ಮಾಡ್ತೀವಿ. ಅಕ್ರಮ ನೈಟ್ ಕ್ಲಬ್ ಗಳ ಮೇಲೆ ಪೊಲೀಸರು ನಿಗಾ ಇಡಬೇಕು. ಒಳ್ಳೆ ಕೆಲಸ ಮಾಡೋರ ಜೊತೆ ಸರ್ಕಾರ ಇರುತ್ತೆ. ಡ್ರಗ್ಸ್ ,ಅಕ್ರಮ ಚಟುವಟಿಕೆ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ. ಡ್ರಗ್ ಚಟುವಟಿಕೆ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ. ಇಂತಹವರ ಮೇಲೆ ನಿಗಾ ಇಡಿ. ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ನಿಗಾ ಇಡಬೇಕು ಅಂತ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾರಾದ್ರು ತೇಜೋವಧೆ ಮಾಡಿದ್ರೆ ಅವರ ಮೇಲೆ ಸುಮೋಟೋ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದು,  ಸೈಬರ್ ಕ್ರೈಮ್ ಬಗ್ಗೆ ನಿಗಾವಹಿಸಬೇಕು. ಎಕ್ಸ್ ಪರ್ಟ್ ಗಳ ಸಹಾಯ ಅದಕ್ಕೆ ಪಡೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಇದರ ಜೊತೆಗೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಕೇಸ್ ನಮ್ಮ ಮೇಲೆ ಜಾಸ್ತಿ ಹಾಕಲಾಗಿದೆ. ಬಿಜೆಪಿ ಮೇಲೆ ಆಗಿಲ್ಲ ಎಂಬ ವಿಚಾರವೂ ಸಭೆಯಲ್ಲಿ ಚರ್ಚೆ‌ ನಡೆದಿದೆ.

ಸಿದ್ದರಾಮಯ್ಯಗೆ ಡಿಕೆಶಿ ಕಾಂಪಿಟೇಶನ್!
ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತಿಗೂ ಮುನ್ನ ಡಿಸಿಎಂ ಡಿಕೆಶಿಯೇ ಮೊದಲು ಮಾತು ಆರಂಭಿಸಿದರು. ತಮ್ಮದೇ ದಾಟಿಯಲ್ಲಿ  ಹಿರಿಯ ಪೊಲೀಸ್ ಅಧಿಕಾರಿ ಗಳನ್ನು ಎಚ್ಚರಿಸಿದ ಡಿಕೆಶಿ, ಬಿಜೆಪಿ ಸರ್ಕಾರ ಹೋಗಿದೆ, ಇವಾಗ ಇರೋದು ನಮ್ಮ ಸರ್ಕಾರ. ಇಷ್ಟು ದಿನ ಬಿಜೆಪಿ ಪರವಾಗಿ ಕೆಲಸ ಮಾಡಿದ್ದು ಸಾಕು. ಇನ್ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು. 

ಸಿದ್ದರಾಮಯ್ಯ, ಡಿಕೆಶಿಯನ್ನು ಸಿಎಂ ಆಗೋಕೆ ಬಿಡೋದಿಲ್ಲ: ಭವಿಷ್ಯದ ಎಚ್ಚರಿಕೆ ರವಾನೆ!

4 ವರ್ಷ ನೀವು ಸರ್ಕಾರದಲ್ಲಿ ಏನ್ ಮಾಡಿದ್ದೀರಾ ಗೊತ್ತಿದೆ. ನಿಮ್ಮ ಈ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯೊಲ್ಲ. ನನ್ನ,‌ ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಾ ಗೊತ್ತಿದೆ. ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ‌ಏನಾಯ್ತು ಗೊತ್ತಿದೆ. ಸಿದ್ದರಾಮಯ್ಯರನ್ನ ಹೊಡೆದು ಹಾಕಬೇಕು ಅಂದ್ರು ಅವರ ಮೇಲೆ ಕೇಸ್ ಹಾಕಿಲ್ಲ ನೀವು...? ಅಷ್ಟು ದೊಡ್ಡ ಪ್ರಕರಣ ಆದ್ರು ಕೇಸ್ ಹಾಕದೇ ನಮ್ಮ ವಿರುದ್ಧ ನಡೆದುಕೊಂಡ್ರಿ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯೊಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಅದನ್ನ ಉಳಿಸಿಕೊಳ್ಳಿ ಎಂದು  ಹಿರಿಯ ಅಧಿಕಾರಿಗಳಿಗೆ  ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಸುಭದ್ರ ಸರ್ಕಾರ ರಚನೆ ಬೆನ್ನಲ್ಲೇ ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

ನಿಮ್ಮ ವರ್ತನೆಯಲ್ಲಿ ನೀವು ಬದಲಾಗಿ - ಒಂದು ವೇಳೆ ನೀವು ಬದಲಾಗಲಿಲ್ಲ ಅಂದ್ರೆ, ನೀವೆ ಬದಲಾಗುತ್ತೀರಾ.  ಸರ್ಕಾರದ ಒಳ್ಳೆಯ ರೀತಿಯಲ್ಲಿ ಸಾಗಲು ಸಹಕರಿಸಿ. ನಾವು ನಿಮ್ಮ ಜೊತೆ ಇರ್ತೀವಿ‌. ಜನ ಈ ಸರ್ಕಾರದ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರೆ. ಅದ್ರಂತೆ ನಡೆದುಕೊಳ್ಳಿ ಎಂದು ಡಿಕೆಶಿ ತಾಕೀತು ಮಾಡಿದ್ದಾರೆ. ಸಭೆಯಲ್ಲಿ ಸಚಿವರಾದ ಕೆ ಎಚ್ ಮುನಿಯಪ್ಪ, ಕೆಜೆ ಜಾರ್ಜ್, ಜಮ್ಮೀರ್ ಅಹಮದ್, ಎಂಬಿ ಪಾಟೀಲ್ ಸಹ ಭಾಗಿಯಾಗಿದ್ದರು. 

click me!