ಮೋದಿ ಮಾತು ಮೀರದ ಸಿಎಂ: ರೈತರ ಜೊತೆ ಸಭೆ ವಿಫಲ, ಕರ್ನಾಟಕ ಬಂದ್ ಖಚಿತ

By Suvarna NewsFirst Published Sep 25, 2020, 5:54 PM IST
Highlights

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ  ಸಂಬಂಧ ಇಂದು (ಶುಕ್ರವಾರ) ನಡೆದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ರೈತ ಸಂಘಟನೆಗಳ ನಾಯಕ ಸಭೆ ಅಂತ್ಯವಾಗಿದೆ. ಆದ್ರೆ, ಸಭೆಯಲ್ಲಿ ಸಿಎಂ ಯಾವುದಕ್ಕೂ ಒಪ್ಪಿಕೊಂಡಿಲ್ಲ.

ಬೆಂಗಳೂರು, (ಸೆ.25): ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆ ವಿಫಲವಾಗಿದೆ.

ಕಾಯ್ದೆಯಲ್ಲಿ ಬದಲಾವಣೆ ಮಾಡಲು ಒಪ್ಪದ ಸಿಎಂ ಯಡಿಯೂರಪ್ಪ, ರೈತ ಮುಖಂಡರನ್ನೇ ಮನವರಿಕೆ ಮಾಡಲು ಪ್ರಯತ್ನ ಮಾಡಿದರು. ಜಮೀನು ಹೊಂದುವ ಮಿತಿ ಕಡಿಮೆ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದರು. ಆದ್ರೆ, ರೈತರು ಒಪ್ಪಲಿಲ್ಲ. ಹೀಗಾಗಿ ರೈತ ಸಂಘಟನೆಗಳು ಸೆ. 28 ಕರ್ನಾಟಕ ಬಂದ್ ಗೆ ತೀರ್ಮಾನ ಮಾಡಿವೆ.

ಸೆ. 28ರಂದು ಕರ್ನಾಟಕ ಬಂದ್‌ : ವಿವಿಧ ಸಂಘಟನೆಗಳ ಬೆಂಬಲ

ಸಿಎಂ ಜೊತೆಗಿನ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಯಡಿಯೂರಪ್ಪ ಅವರು ಬಿಲ್ ಗಳನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅವರು ಮೋದಿ ಮಾತು ಮೀರಲು ಸಿದ್ಧರಿಲ್ಲ. ಸೆ. 28 ರ ಬಂದ್ ಗೆ ರೈತರ ಅನ್ನ ಉಣ್ಣಯವವರು ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಸಿಎಂ ಸಮಜಾಯಿಶಿ ಒಪ್ಪಲು ಸಾಧ್ಯವಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯ ಮಾಡಿದ್ದೇವೆ. ಅವರು ನಮಗೆ ಉಪದೇಶ ಮಾಡಲು ಬಂದಿದ್ದರು ಅದನ್ನು ನಾವು ಒಪ್ಪಿಕೊಂಡಿಲ್ಲ ಎಂದು ಮಾರುತಿ ಮಾನ್ಪಡೆ ಹೇಳಿದರು.

click me!