
ಬೆಂಗಳೂರು(ಮೇ.07): ಮುಖ್ಯಮಂಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು(ಶುಕ್ರವಾರ) ಬೆಳ್ಳಂಬೆಳಿಗ್ಗೆ ನಗರದಲ್ಲಿರುವ ಅಣ್ಣಮ್ಮ ದೇವಸ್ಥಾನಕ್ಕೆ ಆಗಮಿಸಿ ತಾಯಿಯ ದರ್ಶನವನ್ನ ಪಡೆದಿದ್ದಾರೆ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಿಎಸ್‌ವೈ, ಬೆಳಿಗ್ಗೆಯೇ ಅಣ್ಣಮ್ಮ ದೇವಿಯ ದರ್ಶನ ಪಡೆಯಲು ಬಂದೆ, ತಾಯಿದ ಆಶೀರ್ವಾದವನ್ನ ಪಡೆದಿದ್ದೇನೆ. ಮಹಾಮಾರಿ ಕೊರೋನಾ ದೂರ ಆಗುವ ವಿಶ್ವಾಸ ನನಗೆ ಬಂದಿದೆ. ಕೊರೋನಾ ಹೋಗಲಿ ಅಂತ ತಾಯಿಗೆ ಪ್ರಾರ್ಥನೆ ಮಾಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.
"
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಧಂದೆಯನ್ನ ಹೊರಗಡೆ ತಂದಿದ್ದಾರೆ. ನಾನು ಅವರನ್ನ ಅಭಿನಂಧಿಸುತ್ತೇನೆ. ಈ ಸಂಬಂಧ ಬಿಗಿ ಕ್ರಮ ಕೈಗೊಂಡಿದ್ದೇನೆ. ತೇಜಸ್ವಿ ಸೂರ್ಯ ಬಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅಂತವರು ಹಗುರ ಮಾತು ನಿಲ್ಲಿಸಬೇಕು. ತೇಜಸ್ವಿ ಸೂರ್ಯ ರಿಸ್ಕ್ ತಗೊಂಡು ಹಾಸಿಗೆ ಹಂಚಿಕೆ ಅವ್ಯವಹಾರವನ್ನ ಬಹಿರಂಗ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ಕೈಮೀರಿದ ಬಳಿಕ ಜವಾಬ್ದಾರಿ ಹಂಚಿಕೆ: ಕೇಸರಿ ಪಾಳಯದಲ್ಲಿ ಗುಸು ಗುಸು!
ರಾಜ್ಯದಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ನಾಳೆ(ಶನಿವಾರ) ಮಹತ್ವದ ಸಭೆಯನ್ನ ಕರೆದಿದ್ದೇನೆ. ಕೊರೋನಾ ದೂರ ಆಗಬೇಕು ಅಷ್ಟೇ, ಇನ್ನು ಬಿಗಿ ಕ್ರಮ ಅನಿವಾರ್ಯವಾಗಿದೆ. ಜನತಾ ಕರ್ಫ್ಯು ಯಾರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಲಾಕ್‌ಡೌನ್ ಅನಿವಾರ್ಯ ಆಗಬಹುದು ಎಂದು ಹೇಳಿದ್ದಾರೆ.
ಕೊರೋನಾ ಸೋಂಕಿತರಿಗೆ ಬೆಡ್ ಸಿಗಲ್ಲ ಅಂತ ಸಿಎಂ ಮನೆ ಬಳಿ, ವಿಧಾನಸೌಧ ಬಳಿ ಬರುವುದು ಸರಿ ಅಲ್ಲ. ಈ ರೀತಿ ಬರುವುದು ಬೇಡ. ಅಧಿಕಾರಿಗಳ ಗಮನಕ್ಕೆ ತನ್ನಿ ಬೆಡ್ ಕೊಡಿಸುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ