ನ.2ರಂದು ಕಬಿನಿ, ಕೆಆರ್‌ಎಸ್‌ಗೆ ಸಿಎಂ ಬಾಗಿನ

Kannadaprabha News   | Asianet News
Published : Oct 31, 2021, 06:54 AM IST
ನ.2ರಂದು ಕಬಿನಿ, ಕೆಆರ್‌ಎಸ್‌ಗೆ ಸಿಎಂ ಬಾಗಿನ

ಸಾರಾಂಶ

ಕಳೆದ ಕೆಲ ದಿನಗಳಿಂದ ಕಾವೇರಿ ಕೊಳ್ಳದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಭರ್ತಿಯಾಗಿರುವ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.2ರಂದು ಬಾಗಿನ ಸಲ್ಲಿಸಲಿದ್ದಾರೆ. 

ಮಂಡ್ಯ (ಅ.31): ಕಳೆದ ಕೆಲ ದಿನಗಳಿಂದ ಕಾವೇರಿ (Cauvery) ಕೊಳ್ಳದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ (Rain) ಭರ್ತಿಯಾಗಿರುವ ಕಬಿನಿ ಹಾಗೂ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನ.2ರಂದು ಬಾಗಿನ (Bagina) ಸಲ್ಲಿಸಲಿದ್ದಾರೆ. 

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಾವೇರಿ, ಕಬಿನಿಗೆ ಸಲ್ಲಿಸುತ್ತಿರುವ ಮೊದಲ ಬಾಗಿನ (bagina) ಇದಾಗಿದೆ. ನ.2ರಂದು ಬೆಳಗ್ಗೆ 10.30ಕ್ಕೆ ಎಚ್‌.ಡಿ.ಕೋಟೆ (HD Kote) ತಾಲೂಕಿನ ಕಬಿನಿ ಕಾಲೊನಿಯಲ್ಲಿರುವ ಹೆಲಿಪ್ಯಾಡ್‌ನಲ್ಲಿ (Helipad) ಬಂದಿಳಿಯಲಿರುವ ಅವರು ಮೊದಲು ಕಬಿನಿ (kabini) ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. 

ಕೆಆರ್‌ಎಸ್ ಭರ್ತಿ, ಪ್ರವಾಹದ ಎಚ್ಚರಿಕೆ, ನದಿ ಪಾತ್ರದ ಬಳಿ ತೆರಳದಂತೆ ಸೂಚನೆ

ನಂತರ ಮಧ್ಯಾಹ್ನ 12 ಗಂಟೆಗೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಸಮರ್ಪಿಸುವರು. ಮಧ್ಯಾಹ್ನ 1.10ಕ್ಕೆ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ (Bengaluru) ವಾಪಸಾಗಲಿದ್ದಾರೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಕಬಿನಿ ಹಾಗೂ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುತ್ತಿರುವುದು ಇದೇ ಮೊದಲು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಆಗಸ್ಟ್‌ ಕಳೆದರೂ ತುಂಬದೆ ಆತಂಕ ಮೂಡಿಸಿತ್ತು. ಇದೇ ಕಾರಣಕ್ಕೆ ದಸರಾಗೆ ಆಗಮಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮವನ್ನೂ ಮಾಡಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದರು. ಕಾಕತಾಳಿಯವೆಂಬಂತೆ ಆ ನಂತರ ಉತ್ತಮ ಮಳೆಯಾಗಿ ಜಲಾಶಯ ಇದೀಗ ಭರ್ತಿಯಾಗಿದೆ.

ಅನೇಕ ವರ್ಷಗಳ ಬಳಿಕ ಅಕ್ಟೊಬರ್‌ನಲ್ಲಿ ತುಂಬಿದ ಕೃಷ್ಣ ರಾಜ ಸಾಗರ ಜಲಾಶಯ

 

ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು (KRS) ಭರ್ತಿಯಾಗಲು ಇನ್ನು ಕೇವಲ ಒಂದು ಅಡಿ (Feet) ಮಾತ್ರ ಬಾಕಿ ಇತ್ತು. 3 ವರ್ಷಗಳಿಂದ ಜುಲೈ, ಆಗಸ್ಟ್‌ ತಿಂಗಳಲ್ಲಿ ಭರ್ತಿಯಾಗಿದ್ದ ಕೆಆರ್‌ಎಸ್‌ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಭರ್ತಿಯಾಗಿ ಸಮಾಧಾನವನ್ನು ತಂದಿದೆ. ಜಲಾಶಯದ (Dam) ಗರಿಷ್ಠ ಮಟ್ಟ124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ (water Level)123.75 ಅಡಿ ತಲುಪಿದ್ದು ಇದೀಗ ಸಂಪೂರ್ಣ ಭರ್ತಿಯಾದ ಕಾರಣ ಬಾಗಿನ ಸಮರ್ಪಣೆ ಮಾಡಲಾಗುತ್ತದೆ. 

ಜಲಾಶಯಕ್ಕೆ 17,972 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, ಅಣೆಕಟ್ಟೆಯಿಂದ 3,542 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಸದ್ಯ ಅಣೆಕಟ್ಟೆಯಲ್ಲಿ 47.994 ಟಿಎಂಸಿ (TMC) ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 124.80 ಅಡಿ ನೀರು ದಾಖಲಾಗಿತ್ತು. ಜುಲೈ ಅಥವಾ ಆಗಸ್ಟ್‌ ತಿಂಗಳಲ್ಲೇ ಭರ್ತಿಯಾಗುತ್ತಿದ್ದ ಕೆಆರ್‌ಎಸ್‌ ಜಲಾಶಯ ಈ ಬಾರಿ ಅಕ್ಟೋಬರ್‌ ತಿಂಗಳಲ್ಲಿ ಭರ್ತಿಯಾಗುತ್ತಿದೆ. 11 ವರ್ಷಗಳ ನಂತರ ಅಕ್ಟೋಬರ್‌ನಲ್ಲಿ ಪೂರ್ಣ ಮಟ್ಟತಲುಪಿದೆ.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

2010ರ ಅಕ್ಟೋಬರ್‌ 18ರಂದು ಜಲಾಶಯ ತುಂಬಿದ್ದನ್ನು ಸ್ಮರಿಸಬಹುದಾಗಿದೆ. ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ (Agriculture) ಚಟುವಟಿಕೆಗೆ ನೀರಿನ ಕೊರತೆ ಎದುರಾಗಿಲ್ಲ. ಹಾಗಾಗಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ಅಕ್ಟೋಬರ್‌ನಲ್ಲಿ ಕಾವೇರಿ (Cauvery) ಕಣಿವೆ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ (Rain) ತಮಿಳುನಾಡಿಗೆ (Tamil Nadu) ಹರಿಸಬೇಕಾದ ನೀರು ಪೂರ್ಣ ಪ್ರಮಾಣದಲ್ಲಿ ಹರಿದುಹೋಯಿತು. ಇದರೊಂದಿಗೆ ಕಾವೇರಿ ವಿವಾದ ಎದುರಾಗುವ ಆತಂಕವೂ ದೂರವಾಯಿತು.

ಪ್ರವಾಹದ ಎಚ್ಚರಿಕೆ :  ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ನದಿಗೆ 10 ಸಾವಿರ ಕ್ಯುಸೆಕ್‌ನಿಂದ 20 ಸಾವಿರ ಕ್ಯುಸೆಕ್‌ವರೆಗೆ ನೀರು ಹರಿಸಲಾಗುವುದು. ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿ ಇರುವ ವಾಸಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬಿಗ್‌ಬಾಸ್ ಶೋ ನಡೆಯುತ್ತಿರೋ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್
ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌