ಚಂದ್ರು ಸಾವಿನ ಬಗ್ಗೆ ಅನುಮಾನ, ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ: ಸಿಎಂ ಬೊಮ್ಮಾಯಿ

By Govindaraj S  |  First Published Nov 3, 2022, 8:18 PM IST

ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ (24) ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ರೇಣುಕಾಚಾರ್ಯ ಜೊತೆಗೆ ಮಾತಾಡಿ ಮುಂದಿನ ನಿರ್ಧಾರ ಮಾಡುತ್ತೇವೆ. 


ಬೆಂಗಳೂರು (ನ.03): ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ (24) ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ರೇಣುಕಾಚಾರ್ಯ ಜೊತೆಗೆ ಮಾತಾಡಿ ಮುಂದಿನ ನಿರ್ಧಾರ ಮಾಡುತ್ತೇವೆ. ಎಲ್ಲವನ್ನು ಸಮಗ್ರವಾಗಿ ನಾವು ನೋಡುತ್ತಿದ್ದೇವೆ. ಮೊದಲು ರೇಣುಕಾಚಾರ್ಯ ಜೊತೆಗೆ ಮಾತಾಡುತ್ತೇನೆ. ನಂತರ ಅವರ ತಂದೆ ಜೊತೆಗೆ ಮಾತಾಡುತ್ತೇವೆ. ಅದರ ಹಿನ್ನೆಲೆ ಅವರಿಗೆ ಗೊತ್ತಿರುತ್ತದೆ. ಅವರ ತಂದೆ ಅನಿಸಿಕೆ ತಿಳಿದುಕೊಳ್ಳುತ್ತೇವೆ. ಅವರು ಏನ್ ಹೇಳುತ್ತಾರೆ ಹಾಗೂ ಏನ್ ಕಂಪ್ಲೆಂಟ್ ಕೊಡುತ್ತಾರೆ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. 

ಚಂದ್ರು ದೇಹ ಕೊಳೆತ ಸ್ಥಿತಿಯಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆ: ಶಾಸಕ, ಮಾಜಿ ಸಚಿವ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಣ್ಣನ ಮಗ ಚಂದ್ರಶೇಖರ್‌ ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಸುಳಿವೊಂದು ಪೊಲೀಸರಿಗೆ ಸಿಕ್ಕಿದೆ. ಪೊಲೀಸ್‌ ಮೂಲಗಳ ಪ್ರಕಾರ ಚಂದ್ರಶೇಖರ್‌ ಕಾರು ನಾಲೆಯಲ್ಲಿ ಸಿಕ್ಕಿದೆ. ಕಾಲುವೆ ಬಳಿ ಕಾರಿನ ಬಿಡಿ ಭಾಗಗಳು ಪತ್ತೆಯಾಗಿದ್ದವು. ಇದೇ ಸುಳಿವನ್ನು ಹಿಂಬಾಲಿಸಿದ ಪೊಲೀಸರಿಗೆ ಕ್ರೆಟಾ ಕಾರು ಪತ್ತೆಯಾಗಿದೆ. ಕಾರಿನಲ್ಲಿ ಚಂದ್ರಶೇಖರ್‌ ಶವ ಕೂಡ ಪತ್ತೆಯಾಗಿದ್ದು, ದೇಹ ಕೊಳೆತು ಹೋಗಿದೆ. ಹಿಂಬದಿ ಸೀಟಿನಲ್ಲಿ ಶವ ಸಿಕ್ಕಿರುವುದು ಸಾಕಷ್ಟು ಸಂಶಯಗಳನ್ನು ಸೃಷ್ಟಿಸಿದೆ. ಅವರೇ ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವಿಲ್ಲ. ಕೊಲೆ ಮಾಡಿ ನಂತರ ಚಂದ್ರಶೇಖರ್‌ನನ್ನು ಕಾರಿನಲ್ಲಿ ಕೂರಿಸಿ ನಾಲೆಗೆ ತಳ್ಳಿರುವ ಸಾಧ್ಯತೆಯಿದೆ.

Tap to resize

Latest Videos

ಈ ವರ್ಷ 5 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ: ಸಚಿವ ಆರಗ ಜ್ಞಾನೇಂದ್ರ

ಚಂದ್ರಶೇಖರ್‌ ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದರು. ಶಿವಮೊಗ್ಗದ ಗೌರಿಗದ್ದೆಯಲ್ಲಿರುವ ವಿನಯ್‌ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಾಪಸ್‌ ಹೊನ್ನಾಳಿಗೆ ಬಂದ ನಂತರ ಅವರು ಅಲ್ಲಿಂದ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆಯಷ್ಟೇ ಚಂದ್ರಶೇಖರ್‌ ಸ್ನೇಹಿತ ಕಿರಣ್‌ನನ್ನು ಪೊಲೀಸರು ಬಂಧಿಸಿದ್ದರು. ಮೂರು ದಿನಗಳಿಂದ ಕಿರಣ್‌ನನ್ನು ವಿಚಾರಣೆಗೊಳಪಡಿಸಲಾಗಿತ್ತು. ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆಯಾಗಿ ನಾಲ್ಕು ದಿನಗಳಾದರೂ ಇನ್ನೂ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಶಿವಮೊಗ್ಗಕ್ಕೆ ಹೋಗಿ ಬರುತ್ತೇನೆ ಎಂದು ಹೊರಟಿದ್ದ ಚಂದ್ರಶೇಖರ್‌ ವಾಪಸ್‌ ಮನೆ ತಲುಪಲೇ ಇಲ್ಲ. ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರಾದರೂ ಇದುವರೆಗೂ ಯಾವುದೇ ಲೀಡ್‌ ಸಿಕ್ಕಿರಲಿಲ್ಲ. ಆದರೆ ಸ್ನೇಹಿತ ಕಿರಣ್‌ ಬಂಧನದ ನಂತರ ವಿಚಾರಣೆ ವೇಳೆ ಸುಳಿವು ಸಿಕ್ಕಿರುವ ಸಾಧ್ಯತೆಯಿದೆ.

ರೇಣುಕಾಚಾರ್ಯ ತಮ್ಮ ಅಣ್ಣನ ಮಗ ಚಂದ್ರಶೇಖರ್‌ರನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಎಲ್ಲರಂತಲ್ಲ ನನ್ನ ಮಗ, ತುಂಬಾ ಒಳ್ಳೆಯ ವ್ಯಕ್ತಿ ಎಂದು ಅವರು ನೋವು ತೊಂಡಿದ್ದಾರೆ. ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ನಾನು ಬೇಗ ಸಿಟ್ಟಾಗಿ ಜಗಳವಾಡುತ್ತೇನೆ. ಆದರೆ ಅವನು ನನ್ನಂತಲ್ಲ. ತುಂಬಾ ತಾಳ್ಮೆ ಹೊಂದಿರುವ ವ್ಯಕ್ತಿ. ಆತ ನಾಪತ್ತೆಯಾದ ದಿನದಿಂದ ನೆಮ್ಮದಿಯಿಲ್ಲ. ಎಲ್ಲರೂ ಕರೆ ಮಾಡಿ ಮಗ ಸಿಗುತ್ತಾನೆ ಎಂಬ ಭರವಸೆ ನೀಡುತ್ತಿದ್ದಾರೆ. ಎಂದಿಗೂ ಈ ರೀತಿ ಹೇಳದೇ ಕೇಳದೇ ಹೋದವನಲ್ಲ ಎಂದು ತಮ್ಮ ಭಯವನ್ನು ವ್ಯಕ್ತಪಡಿಸಿದ್ದಾರೆ. 

ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ ಪ್ರಕರಣ: ಚಂದ್ರು ಕಾರು ಕಾಲುವೆಯಲ್ಲಿ ಬಿದ್ದಿರುವ ಶಂಕೆ

ರೇಣುಕಾಚಾರ್ಯ ಮಾತಿನಲ್ಲೂ ಸ್ವಲ್ಪ ಗೊಂದಲಗಳಿವೆ. ರಾಜಕೀಯ ದ್ವೇಷದಿಂದ ಅಣ್ಣನ ಮಗನನ್ನು ಅಪಹರಿಸಲಾಗಿದೆಯಾ ಎಂಬ ಬಗ್ಗೆಯೂ ಅನುಮಾನಗಳು ಸೃಷ್ಟಿಯಾಗಿವೆ. ಶಿವಮೊಗ್ಗದ ವಿನಯ್‌ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಾಪಸ್‌ ಹೊನ್ನಾಳಿಗೆ ಬಂದ ನಂತರ ಚಂದ್ರಶೇಖರ್‌ ನಾಪತ್ತೆಯಾಗಿದ್ದಾರೆ. ಇದರ ನಡುವೆ ಕಿರಣ್‌ ಎಂಬ ಸ್ನೇಹಿತನನ್ನು ಚಂದ್ರಶೇಖರ್‌ ಡ್ರಾಪ್‌ ಮಾಡಿದ್ದ. ನಂತರ ಹೊನ್ನಾಳಿಗೆ ವಾಪಸ್‌ ತಲುಪಿದ್ದ. ಹೊನ್ನಾಳಿ ತಲುಪಿದ ನಂತರವೂ ಇಬ್ಬರು ಸ್ನೇಹಿತರ ಜೊತೆ ಮಾತನಾಡಿದ್ದಾನೆ. ಅದಾದ ನಂತರ ಫೋನ್‌ ಸ್ವಿಚ್‌ ಆಫ್‌ ಆಗಿದೆ, ಆತ ಎಲ್ಲಿ ಹೋಗಿದ್ದಾನೆ ಎಂಬ ಕುರುಹೂ ಸಿಗುತ್ತಿಲ್ಲ. 

click me!