ಉಕ್ರೇನ್‌ನಲ್ಲಿ ಸಿಲುಕಿದ ಕನ್ನಡಿಗರು: ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಬೊಮ್ಮಾಯಿ

By Kannadaprabha NewsFirst Published Feb 25, 2022, 5:52 AM IST
Highlights

*  ಉಕ್ರೇನ್‌ ದೂತಾವಾಸ ಜತೆ ಸಂಪರ್ಕದಲ್ಲಿದ್ದೇವೆ
*  ಕನ್ನಡಿಗರ ಕರೆತರುವ ಪ್ರಯತ್ನ ನಡೆದಿದೆ
*  ದೇಶಕ್ಕೆ ಮರಳುತ್ತಿರು ಉಕ್ರೇನ್‌ನಲ್ಲಿರುವ ಭಾರತೀಯರು 

ಬೆಂಗಳೂರು(ಫೆ.25):  ಉಕ್ರೇನ್‌(Ukraine) ವಿರುದ್ಧ ರಷ್ಯಾ(Russia) ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ರಾಜ್ಯದ(Karnataka) ವಿದ್ಯಾರ್ಥಿಗಳನ್ನು ಕರೆತರಲು ಕೆಲಸ ಮಾಡುತ್ತಿದ್ದೇವೆ. ಅಲ್ಲಿನ ರಾಯಭಾರಿ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‌ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ನೂರಾರು ವಿದ್ಯಾರ್ಥಿಗಳಿದ್ದಾರೆ(Students). ಈ ವಿಚಾರ ಗಮನಕ್ಕೆ ಬಂದ ತಕ್ಷಣ ಕೇಂದ್ರ ಸರ್ಕಾರ, ವಿದೇಶಾಂಗ ಕಾರ್ಯದರ್ಶಿ ಹಾಗೂ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜತೆ ಸಂಪರ್ಕ ಸಾಧಿಸಿದ್ದೇವೆ. ವಿದೇಶಾಂಗ ಸಚಿವರೊಂದಿಗೆ ಮಾತನಾಡಲೂ ಸಹ ಪ್ರಯತ್ನಿಸಲಾಗುತ್ತಿದೆ ಎಂದರು.

Latest Videos

Russia Ukraine Crisis: ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಕಾರಣವೇನು?

‘ಕೇಂದ್ರ ಸರ್ಕಾರ(Central Government) ನೀಡಿದ ಮಾಹಿತಿಯಂತೆ ಉಕ್ರೇನ್‌ನಲ್ಲಿರುವ ಭಾರತೀಯರು(Indians) ತಂಡಗಳಾಗಿ ದೇಶಕ್ಕೆ ಮರಳುತ್ತಿದ್ದಾರೆ. ಕೊನೆಯ ತಂಡವು ವಿಮಾನ ನಿಲ್ದಾಣ ತಲುಪಿದ್ದು, ವಿಮಾನಗಳ ಸಂಚಾರ ಸ್ಥಗಿತವಾಗಿ ಪ್ರಯಾಣ ಸಾಧ್ಯವಾಗಿಲ್ಲ. ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರ ಜೊತೆಗೆ ಭಾರತದಲ್ಲಿರುವ ಉಕ್ರೇನ್‌ ರಾಯಭಾರಿ ಕಚೇರಿ ಹಾಗೂ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರವು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಸಂಪರ್ಕದಲ್ಲಿದೆ. ರಾಜ್ಯದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಿಗರ ಕರೆತರುವ ಪ್ರಯತ್ನ ನಡೆದಿದೆ

ಉಕ್ರೇನ್‌ನಲ್ಲಿ ರಾಜ್ಯದ ಎಷ್ಟು ಮಂದಿ ಇದ್ದಾರೆ ಎಂಬುದರ ಕುರಿತು ಸದ್ಯಕ್ಕೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಕೇಂದ್ರ ಸರ್ಕಾರದ ಬಳಿ ಎಲ್ಲ ಮಾಹಿತಿ ಇದೆ. ಯಾವುದೇ ತೊಂದರೆಯಾಗದಂತೆ ವಿದ್ಯಾರ್ಥಿಗಳೂ ಸೇರಿದಂತೆ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಕೇಂದ್ರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ. 

ಹಿಂಸಾಚಾರವನ್ನು ತಕ್ಷಣವೇ ಕೊನೆ ಮಾಡಿ, ಪುಟಿನ್ ಗೆ ಮೋದಿ ಮನವಿ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Mod) ಅವರು ಗುರುವಾರ  ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಈ ವೇಳೆ ರಷ್ಯಾ ಅಧ್ಯಕ್ಷ  ಪುಟಿನ್ ಅವರು ಉಕ್ರೇನ್‌ಗೆ (Ukraine) ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಣೆ ನೀಡಿದರು. ರಷ್ಯಾ ಮತ್ತು ನ್ಯಾಟೋ (NATO) ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮತ್ತು ನಂಬಿಕಸ್ತ ಸಂವಾದದ ಮೂಲಕ ಮಾತ್ರ ಪರಿಹರಿಸಬಹುದು ಎಂಬ ತಮ್ಮ ದೀರ್ಘಕಾಲದ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು.

Russia Ukraine Crisis: ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾ, ಉಕ್ರೇನ್‌ ತೆರಳುವುದೇಕೆ?

ಅದಲ್ಲದೆ, ಉಕ್ರೇನ್ ಭಾಗದಲ್ಲಿ ಆಗುತ್ತಿರುವ ವ್ಯಾಪಕ ಹಿಂಸಾಚಾರವನ್ನು (violence) ತಕ್ಷಣವೇ ನಿಲ್ಲಿಸಿ ಎಂದು ಮನವಿ ಮಾಡಿದ್ದಲ್ಲದೆ, ರಾಜತಾಂತ್ರಿಕ ಮಾತುಕತೆ ಮತ್ತು ಮಾತುಕತೆಯ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿದರು.

ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭಾರತದ ಕಳವಳಗಳ ಬಗ್ಗೆ ಮೋದಿ ರಷ್ಯಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದರು. ಯುದ್ಧಪೀಡಿತ ಪ್ರದೇಶದಿಂದ ಅವರ ಸುರಕ್ಷಿತ ನಿರ್ಗಮನ ಹಾಗೂ ಭಾರತಕ್ಕೆ ಮರಳುವ ನಿಟ್ಟಿನಲ್ಲಿ ದೇಶವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಮೋದಿ ಈ ವೇಳೆ ತಿಳಿಸಿದರು. ತಮ್ಮ ಅಧಿಕಾರಿಗಳು ಮತ್ತು ರಾಜತಾಂತ್ರಿಕ ತಂಡಗಳು ಸಾಮಯಿಕ ಆಸಕ್ತಿಯ ವಿಷಯಗಳ ಬಗ್ಗೆ ನಿಯಮಿತ ಸಂಪರ್ಕಗಳನ್ನು ಮುಂದುವರಿಸಲಿದೆ ಎನ್ನುವುದನ್ನು ಉಭಯ ನಾಯಕರು ಒಪ್ಪಿಕೊಂಡರು.
 

click me!