ನಾವು ಆಧುನಿಕವಾಗಿ ಸಾಕಷ್ಟು ಬೆಳೆದಿದ್ದೇವೆ. ಆದರೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯುತ್ತಾ ಬಂದಿದೇವೆ. ಆತ್ಮ ಶುದ್ಧಿಯಿಂದ ಮಾತ್ರ ನಾವು ಪ್ರಾಮಾಣಿಕವಾದ ಪರಿಶುದ್ದ ಜೀವನ ನಡೆಸಲು ಸಾಧ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿಕ್ಕಬಳ್ಳಾಪುರ (ಅ.09): ನಾವು ಆಧುನಿಕವಾಗಿ ಸಾಕಷ್ಟು ಬೆಳೆದಿದ್ದೇವೆ. ಆದರೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯುತ್ತಾ ಬಂದಿದೇವೆ. ಆತ್ಮ ಶುದ್ಧಿಯಿಂದ ಮಾತ್ರ ನಾವು ಪ್ರಾಮಾಣಿಕವಾದ ಪರಿಶುದ್ದ ಜೀವನ ನಡೆಸಲು ಸಾಧ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾತಿ ತಿಳಿಸಿದರು.ನಗರದ ಹೊರ ವಲಯದ ಜಾಲಾರಿ ನರಸಿಂಹಮ್ಮ ಬೆಟ್ಟಸಮೀಪ ಇರುವ ಕರವನಹಳ್ಳಿ ಬಳಿ ಈಶಾ ಫೌಂಡೇಷನ್ ಯೋಗ ಕೇಂದ್ರದ ಆವರಣದಲ್ಲಿ ನಾಗ ಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಹುಟ್ಟಿದಾಗ ನಮಗೆ ಯಾವುದೇ ಧರ್ಮ ಇರುವುದಿಲ್ಲ. ಪರಂಪರೆ, ವಿಚಾರಗಳು ಇರುವುದಿಲ್ಲ. ಮುಕ್ತಿ ಹೊಂದಿದಾಗಲೂ ಇವು ನಮ್ಮ ಜತೆ ಬರುವುದಿಲ್ಲ. ಆದರೆ ಈ ಹುಟ್ಟು ಸಾವಿನ ನಡುವಿನ ಬದುಕು ಅತ್ಯಂತ ರೋಮಾಂಚನಕಾರಿ ಆಗಿದೆ ಎಂದರು.
ಮನುಷ್ಯನ ಅಸ್ತಿತ್ವವೇ ಹೊಂದಾಣಿಕೆ: ಮನುಷ್ಯನ ಅಸ್ತಿತ್ವವನ್ನು ಉಳಿಸಿರುವ ಗುಣ ಎಂದರೆ ಅದು ಹೊಂದಾಣಿಕೆ. ಆದರೆ ಆ ಹೊಂದಾಣಿಕೆಯನ್ನು ನಾವು ಅಂತರಾಳಕ್ಕೆ ಅನ್ವಯಿಸಿಕೊಂಡಾಗ ಒಳ ಜಗತ್ತುನ್ನು ನೋಡಲು ಸಾಧ್ಯ. ಮನುಷ್ಯನಿಗಿಂತ ದೊಡ್ಡ ಮತ್ತು ಶಕ್ತಿ ಶಾಲಿ ಪ್ರಾಣಿಗಳನ್ನು ಭಗವಂತ ಮಾಡಿದ್ದಾನೆ. ಮನಷ್ಯನಿಂದ ಶರವೇಗದಲ್ಲಿ ಓಡುವ ಪ್ರಾಣಿಗಳು ಇವೆ. ಆದರೆ ಕಾಲಗರ್ಭದಲ್ಲಿ ಅವು ಅಸ್ತಿತ್ವ ಕಳೆದುಕೊಂಡಿವೆ. ಆದರೆ ಮನುಷ್ಯ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಹೋಗುತ್ತಿದ್ದಾನೆ ಎಂದರು.
ಜನಸಾಮಾನ್ಯರ ಬದುಕಿನ ಇತಿಮಿತಿಗಳು ಸದ್ಗುರು ಅವರಿಗೆ ಗೊತ್ತಿದೆ. ಜ್ಞಾನ, ಕರ್ಮದಿಂದ ಸಾಧನೆ ಮಾಡವವರಿಗೆ ಇಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ವೈಚಾರಿಕವಾಗಿ ನಾವು ಅವರ ಜತೆ ಚರ್ಚೆ ಮಾಡಿದಾಗ ಜ್ಞಾನ ಮತ್ತು ವೈಚಾರಿಕವಾದ ಅನೇಕ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದರು. ಸದ್ಗುರು ಒಳ್ಳೆಯ ವಿಜ್ಞಾನಿ, ವಿನ್ಯಾಸಕಾರರು, ಸೃಜನಶೀಲ ವ್ಯಕ್ತಿ, ಕಲಾವಿದರು ಸಹ ಆಗಿದ್ದಾರೆಂದ ಸಿಎಂ ಬೊಮ್ಮಾಯಿ, ಮಣ್ಣನ್ನು ಉಳಿಸಿದರೆ ಮಾನವನನ್ನು ಉಳಿಸಿದಂತೆ ಎನ್ನುವುದು ಅವರಿಗೆ ಗೊತ್ತು. ಆ ಕಾರಣದಿಂದ ಅವರು ಮಣ್ಣು ಉಳಿಸಿ ಅಭಿಯಾನ ನಡೆಸಿದರು ಎಂದರು.
ಈಗ ಒಳಮೀಸಲಾತಿ ಅಸ್ತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಿದ್ಧತೆ
ನೂರು ಕೋಟಿ ರು.ಗಳ ಅನುದಾನ: ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರ ಜಾಗತಿಕ ಕೇಂದ್ರವಾಗಿ ಬೆಳೆಯಲಿದೆ. ಸರ್ಕಾರ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಆದಾಯವನ್ನು ಅವರು ದುಪ್ಪಟ್ಟು ಮಾಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಅದನ್ನು ರಾಜ್ಯದಾದ್ಯಂತ ಪಸರಿಸಲಾಗುವುದು ಎಂದರು. ಈಗಾಗಲೇ ಮಣ್ಣು ಅಭಿಯಾನ ಕುರಿತು ಸದ್ಗುರುಗಳು ನೀಡಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಲು 100 ಕೋಟಿ ರು, ಅನುದಾನ ಒದಗಿಸಿದೆ. ಇನ್ನೂ ಬೇಕಾದರೂ ಹೆಚ್ಚಿನ ಅನುದಾನ ನೀಡಲಾಗುವುದೆಂದರು.
ಈ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್, ಸಚಿವ ಡಾ.ಕೆ.ಸುಧಾಕರ್. ಪಾಪಾಗ್ನಿ ಮಠದ ವೃಷಭಾನಂದ ಉಮೇಶ್ವರ ಸ್ವಾಮೀಜಿ, ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುರ್ಮಾ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಆರ್.ಕೆ.ಶ್ರೀವಾಸ್ತವ್ ಇತರರು ಇದ್ದರು.
ಮೀಸಲು ಹೆಚ್ಚಳದಿಂದ ಯಾರಿಗೂ ಅನ್ಯಾಯ ಆಗಲ್ಲ: ಸಿಎಂ ಬೊಮ್ಮಾಯಿ
ಮನುಷ್ಯ ಸಹರಾ ಮರುಭೂಮಿಯಲ್ಲಿಯೂ ಮತ್ತು ತೀವ್ರ ಉಷ್ಣಾಂಶ ಇರುವ ಕೋಲಾರದಲ್ಲಿಯೂ ಬದುಕುವನು. ಪರಿಸ್ಥಿತಿಗೆ ಹೊಂದಾಣಿಕೆಯಾಗಿ ಬದುಕುತ್ತಾನೆ. ಆದರೆ ನಾವು ಅದನ್ನು ಅಧ್ಯಾತ್ಮಿಕವಾಗಿ ಬಳಕೆ ಮಾಡಿದರೆ ನಮ್ಮ ಒಳಗೆ ಅದ್ಭುತವಾದ ಜಗತ್ತನ್ನು ಕಾಣಬಹುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.