* ಒಂದು ವಾರ ಹೋಂ ಐಸೋಲೇಷನ್‌ನಲ್ಲಿದ್ದ ಬೊಮ್ಮಾಯಿ
* ಬಿಎಸ್‌ವೈ, ಸಚಿವ ಅಶೋಕ್, ಕಟೀಲ್ ಜೊತೆ ಪ್ರತ್ಯೇಕ ಸಭೆ
* ಇಂದೂ ಕೂಡ ವಿವಿಧ ಸಭೆಗಳನ್ನು ನಡೆಸಲಿರುವ ಸಿಎಂ
ಬೆಂಗಳೂರು(ಜ.20): ಕೋವಿಡ್(Covid-19) ಸೋಂಕಿನಿಂದಾಗಿ ಕಳೆದೊಂದು ವಾರದಿಂದ ಹೋಂ ಐಸೋಲೇಷನ್‌ನಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಂಪೂರ್ಣ ಗುಣಮುಖರಾಗಿ ಬುಧವಾರ ಮನೆಯಿಂದ ಹೊರಗೆ ಬಂದು ಕೆಲಸ ಆರಂಭಿಸಿದರು.
ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ ಮಧ್ಯಾಹ್ನ ಕಂದಾಯ ಸಚಿವ ಆರ್.ಅಶೋಕ್(R Ashok) ಅವರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಿ ಭೋಜನ ಸಹಿತ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
undefined
Karnataka Politics: ನಿಗಮ- ಮಂಡಳಿಗಳ ನೇಮಕಾತಿಗೆ ಸರ್ಕಸ್
ರಾತ್ರಿ ಬಿಜೆಪಿ ಕಚೇರಿಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಮತ್ತಿತರ ಮುಖಂಡರೊಂದಿಗೆ ಸಂಘಟನೆ ಬಲಪಡಿಸುವ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದರು. ಇಂದು(ಗುರುವಾರ) ಕೂಡ ಮುಖ್ಯಮಂತ್ರಿಗಳು ತಮ್ಮ ಸರ್ಕಾರಿ ನಿವಾಸದಲ್ಲಿ ವಿವಿಧ ಸಭೆಗಳನ್ನು ನಡೆಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೊರೋನಾ
ಸಚಿವ ಆಶೋಕ್ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಜ.10 ರಂದು ಕೊರೋನಾ ಪಾಸಿಟಿವ್ (Corona Positive) ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದು, ಸಂಪರ್ಕಿತರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು.
ನನ್ನ ಆರೋಗ್ಯ ಚೆನ್ನಾಗಿದೆ, ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.ನನ್ನ ಆರೋಗ್ಯ ಚೆನ್ನಾಗಿದೆ, ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದರು ಬೊಮ್ಮಾಯಿ ತಮ್ಮ ಆರ್ ಟಿ ನಗರ ನಿವಾಸದಲ್ಲಿ ಕೋವಿಡ್ RTPCR ಟೆಸ್ಟ್ ಮಾಡಿಸಿಕೊಂಡಿದ್ದು, ವರದಿಯಲ್ಲಿ ಪಾಸಿಟಿವ್ ಅಂತ ಬಂದಿತ್ತು.
ಇನ್ನೂ ಸಿಎಂ ಜೊತೆ ಇರುವ ಸಿಬ್ಬಂದಿಗಳು ಮತ್ತು ಸಿಎಂ ಭೇಟಿಯಾದ ನಾಯಕರುಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಬಸವರಾಜ ಬೊಮ್ಮಾಯಿ ಅವರು (ಜ.10) ಹಿರಿಯ ಸಾಹಿತಿ ಪ್ರೋ. ಚಂದ್ರಶೇಖರ ಪಾಟೀಲ ಅವರ ಅಂತಿಮ ದರ್ಶನಕ್ಕೆ ಹೋಗಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ಲಸಿಕೆಗೆ ಚಾಲನೆ ನೀಡಿದ್ದರು. ಇದರಿಂದ ಬೊಮ್ಮಾಯಿ ಅವರ ಸಂಪರ್ಕಕ್ಕೆ ಬಂದವರಿಗೆ ಆತಂಕ ಮೂಡಿಸಿತ್ತು.
ದೇಶಾದ್ಯಂತ ಕೊರೊನಾ ವೈರಸ್ ಆರ್ಭಟ ತೀವ್ರಗೊಳ್ಳುತ್ತಿದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ ಗಣನೀಯವಾಗಿ ಏರಿಕೆ ಆಗುತ್ತಿದೆ. ಗಣ್ಯಾತಿಗಣ್ಯರಿಗೂ ಕೊರೊನಾ ಸೋಂಕು ತಗುಲುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ: ಶಾಸಕ ಎಸ್.ವಿ.ರಾಮಚಂದ್ರ
ತಡರಾತ್ರಿ 3.30ಕ್ಕೆ ಸಿಎಂ ಬೊಮ್ಮಾಯಿ ಮೀಟಿಂಗ್: ಕುತೂಹಲ ಮೂಡಿಸಿದ ಮಾತುಕತೆ
ಕೊರೋನಾದಿಂದ ಗುಣಮುಖರಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫುಲ್ ಆಕ್ಟಿವ್ ಆಗಿದ್ದಾರೆ. ತಡರಾತ್ರಿವರೆಗೂ ನಗರದ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಟಿಂಗ್ ನಡೆಸಿದ್ದರು. ಹೌದು, ತಡರಾತ್ರಿ 3.30 ವರೆಗೂ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲೆ, ಬೆಂಗಳೂರಿನಲ್ಲಿ ಪಕ್ಷ ಸಂಘಟನೆ ಬಗ್ಗೆ ಮೀಟಿಂಗ್‌ನಲ್ಲಿ ಚರ್ಚೆ ನಡೆದಿದೆ. ಇನ್ನು ಕೊರೋನಾಗೆ ಸಂಬಂಧಿಸಿದಂತೆ ನಾಳೆ(ಶುಕ್ರವಾರ) ಮಹತ್ವದ ಮೀಟಿಂಗ್ ಕೂಡ ಕರೆದಿದ್ದಾರೆ. ನೈಟ್ ಕರ್ಫ್ಯೂ(Night Curfew), ವೀಕೆಂಡ್ ಕರ್ಫ್ಯೂ(Weekend Curfew) ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.