'ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ': ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ

By Govindaraj SFirst Published Jan 18, 2023, 12:02 PM IST
Highlights

'ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ' ಸಂವಾದದಲ್ಲಿ ವಿದ್ಯಾರ್ಥಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ 1 ಸಾವಿರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಎಂಎಲ್‌ಸಿ ಗೋಪಿನಾಥ್ ರೆಡ್ಡಿ ಆಯೋಜನೆ ಮಾಡಿರುವ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲೆಗಳಿಂದಲೂ ಸಹ ವಿದ್ಯಾರ್ಥಿಗಳು ವರ್ಚುವಲ್ ಮೂಲಕ ಸಂವಾದದಲ್ಲಿ ಭಾಗಿಯಾಗಿದ್ದರು. 

ಬೆಂಗಳೂರು (ಜ.18): 'ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ' ಸಂವಾದದಲ್ಲಿ ವಿದ್ಯಾರ್ಥಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ 1 ಸಾವಿರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಎಂಎಲ್‌ಸಿ ಗೋಪಿನಾಥ್ ರೆಡ್ಡಿ ಆಯೋಜನೆ ಮಾಡಿರುವ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲೆಗಳಿಂದಲೂ ಸಹ ವಿದ್ಯಾರ್ಥಿಗಳು ವರ್ಚುವಲ್ ಮೂಲಕ ಸಂವಾದದಲ್ಲಿ ಭಾಗಿಯಾಗಿದ್ದರು. ನಗರದ ಆರ್‌ವಿ ಡೆಂಟಲ್ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌, ಕ್ರೀಡಾಪಟು ಪಂಕಜ್ ಅಡ್ವಾಣಿ, ನಟಿ ಪ್ರಣೀತಾ, ಗಾಯಕ ಚಂದನ್ ಶೆಟ್ಟಿ, ಬಿಜೆಪಿ ಯುವ ಮೂರ್ಚಾದ ಅನಿಲ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜೊತೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ಸಿಎಂ ಬೊಮ್ಮಾಯಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಅವರು ಉತ್ತರಿಸಿದ್ದಾರೆ.

ಕೂ ಸಂಸ್ಥಾಪಕ ಅಪ್ರಮಯ್ಯರಿಂದ ಸಿಎಂಗೆ ಪ್ರಶ್ನೆ: ನೀವು ಬಿಸಿನೆಸ್ ಮ್ಯಾನ್ ಆಗಿದ್ರಿ, ರಾಜಕೀಯಕ್ಕೆ ಬಂದ್ರಿ, ಕೆಲಸ ಮಾಡಿದ್ರಿ, ಸ್ಟೂಡೆಂಟ್ ಲೈಫ್‌ಗಳಲ್ಲಿ ಇದರಲ್ಲಿ ಯಾವುದನ್ನ ತುಂಬಾ ಎಂಜಾಯ್ ಮಾಡಿದ್ದೀರಾ? 
ಸಿಎಂ ಉತ್ತರ: ಸ್ಟೂಡೆಂಟ್ ಲೈಫ್ ಬೆಸ್ಟ್ ಲೈಫ್. ಇದನ್ನ ನಾನು ಮರೆಯೊಲ್ಲ. ಸ್ಟೂಡೆಂಟ್ ಲೈಫ್ ಬೆಸ್ಟ್. ಕೊನೆ ಬೇಂಚ್‌ನಲ್ಲಿ ನಾನು ಕುಳಿತುಕೊಳ್ಳುತ್ತಿದೆ. ಕೆಲಸ ಮಾಡುವಾಗ ಅನೇಕ ಜನರಿಗೆ ಕೆಲಸ ಕೊಡುವ ಅವಕಾಶ ಸಿಗುತ್ತೆ. ಇದು ನನಗೆ ಖುಷಿ ಕೊಟ್ಟಿದೆ. ರಾಜಕೀಯ ಅನ್ನೋದು ದೊಡ್ಡ ಚಾಲೆಂಜ್‌. ಕಿತ್ತಾಟಗಳು ಇರಬಹುದು. ಅದರಂತೆ ಕಲಿಯೋದು ಜಾಸ್ತಿ ಇದೆ. ಕಮಿಟ್‌ಮೆಂಟ್‌ನಿಂದ ‌ಕೆಲಸ ಮಾಡೋದು ಮುಖ್ಯ ಎಂದು ಹೇಳಿದರು.

ಮದ್ಯ ಖರೀದಿ ವಯೋಮಿತಿ 21ರಿಂದ 18ಕ್ಕಿಳಿಸಲು ಮುಂದಾದ ಸರ್ಕಾರ: ಯು.ಟಿ.ಖಾದರ್ ಖಂಡನೆ

* ನೀವು ಪ್ರಧಾನಮಂತ್ರಿಗಳನ್ನ ಭೇಟಿಯಾಗಿದ್ರಿ ನಿಮ್ಗೆ ಅವರನ್ನ ನೋಡಿದಾಗ ಏನ್ ಅನ್ನಿಸ್ತು?
ಅವರನ್ನ ನೋಡಿದಾಗ ನನಗೆ ತುಂಬಾ ಇಂಟ್ರೆಸ್ಟಿಂಗ್‌ ಪರ್ಸನ್ ಅನ್ನಿಸ್ತು. ಮೋದಿಯವರ ಜೊತೆ ಯಾರಾದ್ರೂ ಕೆಲ ಸಮಯ ಕಳೆದರೆ ಅವರ ಫಾಲೋವರ್ ಆಗ್ತಾರೆ. ಯಾಕಂದ್ರೆ ಅವರ ಲೈಫ್ ಮತ್ತು ಅವರ ಅಚೀವ್ಮೆಂ‌ಟ್ ಹಾಗೂ ಅವರ ಹೊಸ ಬಗೆಯ ಕೇಳಿಸಿಕೊಳ್ಳುವ ಮನಸ್ಥಿತಿ ಇದೆ. ಮೋದಿಯವರಿಗೆ ಹೊಸತನ್ನು ಕಲಿಯುವ ಹಂಬಲವಿದೆ. ಮೋದಿಯವರು ಸಾಕಷ್ಟು ಸಕಾರಾತ್ಮಕ ವ್ಯಕ್ತಿ, ಎಲ್ಲವನ್ನೂ ಪಾಸಿಟಿವ್ ಆಗಿ ನೋಡುವ ವ್ಯಕ್ತಿ. ಎಲ್ಲಾ ರೀತಿಯ ವ್ಯಕ್ತಿತ್ವವಿರುವ ಒಬ್ಬ ವ್ಯಕ್ತಿ ಅಂದ್ರೆ ಅದು ಮೋದಿ. ಮೋದಿಯವರ ನೇತೃತ್ವದದಲ್ಲಿ ಭಾರತಕ್ಕೆ ಒಂದು ಸ್ಪಷ್ಟ ಗುರಿ ಸಿಕ್ಕಿದೆ ಎಂದರು.

ಈ ದೇಶದಲ್ಲಿರುವ ಸಾಧ್ಯತೆಗಳು ,ಅವಕಾಶಗಳು ಬೇರೆಲ್ಲೂ ಇಲ್ಲ. ನಮ್ಮ ಕರ್ತವ್ಯ ಕಾಲವಿದು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ನಾವು ವಿಜ್ಞಾನ,ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ಈ ಹಿಂದೆ ಭೂಮಿ ಇದ್ದವರು ಜಗತ್ತನ್ನು ಆಳುತ್ತಿದ್ದರು. ಇಂದು ಜ್ಞಾನ ಇದ್ದವರು ಜಗತ್ತನ್ನು ಆಳುತ್ತಿದ್ದಾರೆ. ನಾವು ಜ್ಞಾನದ ಕಾಲದಲ್ಲಿದ್ದೇವೆ. ಕರ್ನಾಟಕ ಮತ್ತು ಭಾರತಕ್ಕೆ ದೊಡ್ಡ ಭವಿಷ್ಯವಿದೆ. ಭಾರತದ  Growth engine ಯಾವುದಾದರೂ ಇದ್ರೆ ಅದು ಕರ್ನಾಟಕ ಎಂದು ತಿಳಿಸಿದರು.

ವಿದ್ಯಾರ್ಥಿನಿ ಪ್ರಶ್ನೆ: ಡೆಂಟಲ್ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು?
ಉತ್ತರ ಕರ್ನಾಟಕದ ಭಾಗದಲ್ಲಿ ತಂಬಾಕು ತಿನ್ನುವವರು ಹೆಚ್ಚಾಗಿದ್ದಾರೆ. ಆರೋಗ್ಯ ಇಲಾಖೆ ಸರಣಿ ಕ್ಯಾಂಪ್‌ಗಳನ್ನು ಮತ್ತು ಆರೋಗ್ಯ ಶಿಬಿರ ಮಾಡುತ್ತದೆ. ಯುವ ಡೆಂಟಲ್ ವಿದ್ಯಾರ್ಥಿಗಳನ್ನು ಸರ್ಕಾರದ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗುವುದು. ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.

ವಿದ್ಯಾರ್ಥಿ ಕೀರ್ತನ್ ಪ್ರಶ್ನೆ: ಸ್ಕಾಲರ್ಶಿಪ್ ಬಗ್ಗೆ ಪ್ರಶ್ನೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಾಕಾಗುತ್ತಿಲ್ಲ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಿ?
ಇದೊಂದು ಸಾಮಾಜಿಕ ಕಾರ್ಯಕ್ರಮ. ಈ‌ ಬಗ್ಗೆ ಸೂಕ್ತ ಕ್ರಮ ತಗೋತೀನಿ ಎಂದರು.

* ರೈತರಿಗೆ Storage ಸೌಲಭ್ಯವಿಲ್ಲ. ಬೇರೆ ರಾಜ್ಯಗಳಲ್ಲಿ Storage ಸೌಲಭ್ಯ ಚೆನ್ನಾಗಿದೆ?
ಇಲ್ಲ ನಿನ್ನ ಪ್ರಶ್ನೆ ತಪ್ಪು. Storage ಸೌಲಭ್ಯಕ್ಕೆ ಕಳೆದ ಬಜೆಟ್‌ನಲ್ಲಿ ಒತ್ತು ಕೊಟ್ಟಿದ್ದೇನೆ ಎಂದು ಹೇಳಿದರು.

* ಬೋರ್ಡ್ ಎಕ್ಸಾಮ್‌ಗಳನ್ನು ಮತ್ತಷ್ಟು ಡಿಜಿಟಲೈಸ್ ಮಾಡಬೇಕು ಎಂದು ಮನವಿ ಮಾಡಿದ ವಿದ್ಯಾರ್ಥಿನಿ?
ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಡಿಜಿಟಲೈಶನ್ ತಲುಪಿಲ್ಲ. ಇನ್ನೂ ಡಿಜಿಟಲ್ ಅವರಿಗೆ ತಲುಪಲು ಸಮಯ ಬೇಕಿದೆ. ಟ್ಯಾಬ್,ಮೊಬೈಲ್ ಅನೇಕ ವ್ಯವಸ್ಥೆಗಳ ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಸರ್ಕಾರದಿಂದಲೇ ಶಿಕ್ಷಣ ಕಲಿಸುವ ತಂತ್ರಾಂಶ ಸಿದ್ದಪಡಿಸಲಾಗುತ್ತಿದೆ. ಬೈಜೂಸ್ ರೀತಿ ಸರ್ಕಾರದ ತಂತ್ರಾಂಶ ಸಿದ್ದಪಡಿಸಲಾಗುವುದು. ವ್ಯವಸ್ಥೆ ಡಿಜಿಟಲೈಸೇಶನ್‌ಗೆ ಸಿದ್ದವಾದಾಗ ಸರ್ಕಾರ ಕೂಡ ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

* ಕಾಲೇಜಲ್ಲಿ ಚುನಾವಣೆ ನಡೆಸುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ ವಿದ್ಯಾರ್ಥಿ?
ಇದು ಓದುವ ಸಮಯ. ಚೆನ್ನಾಗಿ ಓದಿ,ಕಾಲೇಜು ಸಮಯವನ್ನು ಎಂಜಾಯ್ ಮಾಡಿ. ಕಾಲೇಜಿನಲ್ಲಿ ಚುನಾವಣೆ ಬೇಡ ಅದು ದೊಡ್ಡ ಜವಾಬ್ದಾರಿ. ಓದುವ ಸಮಯದಲ್ಲಿ ಓದಿ ಎಂದು ವಿದ್ಯಾರ್ಥಿಗಳಿಗೆ ಸಿಎಂ ಕಿವಿಮಾತು ಹೇಳಿದರು.

* ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?
8 ಸಾವಿರ ಕಟ್ಟಡ ಕಟ್ಟುವ ವಿವೇಕ ಯೋಜನೆ ಜಾರಿ ಮಾಡಿದ್ದೇವೆ. ಯಾವ ಸರ್ಕಾರವೂ ಇದನ್ನ ಮಾಡಿಲ್ಲ. ಶಾಲಾ ಕಟ್ಟಡಗಳ ನವೀಕರಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದೇವೆ. 7500 ಕೊಠಡಿಗಳ ನವೀಕರಣ ಮಾಡಿದ್ದೇವೆ. ಒಂದೂ ಒಂದೂವರೆ ವರ್ಷದಲ್ಲಿ ಇಡೀ ಸರ್ಕಾರಿ ಶಾಲೆಗಳ ವ್ಯವಸ್ಥೆ ಸಂಪೂರ್ಣ ಬದಲಾವಣೆ ಆಗಲಿದೆ. ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದೇವೆ ಎಂದರು.

ಅಂಕಲಿಯ ಕೆ‌ಎಲ್ಇ ಕಾಲೇಜಿನಿಂದ ವಿದ್ಯಾರ್ಥಿನಿ ಪ್ರಶ್ನೆಗೆ ಸಿಎಂ ಉತ್ತರಿಸೋವಾಗ ವಿದ್ಯಾರ್ಥಿನಿ ಶರ್ಟ್ ಮೇಲೆ ತಮ್ಮ ಪೊಟೋ‌ ಇರೋದನ್ನ‌ ಗಮನಿಸಿದ ಸಿಎಂ, ನಿಮ್ಮ ಕಾಲೇಜಿನಲ್ಲಿ ಇಷ್ಟು ಚೆನ್ನಾಗಿರೋ ಯೂನಿಫಾರ್ಮ್ ಇದೆ ಅಂತ ಗೊತ್ತಿರಲಿಲ್ಲ. ನಿಮ್ಮ ಡ್ರೆಸ್ ಮೇಲೆ ನನ್ನ ಪೋಟೋ‌ ಇದೆ ಅಂತ ಹೇಳಿದ‌ ಸಿಎಂ ಮಾತಿಗೆ ನಗೆಗಡಲಿನಲ್ಲಿ ಸಭಾಂಗಣ ತೇಲಾಡಿತ್ತು.

* KLE ವಿದ್ಯಾರ್ಥಿ ಸಮಯದ ಬಗ್ಗೆ ಮೆಲುಕು ಹಾಕಿ ಎಂದ ವಿದ್ಯಾರ್ಥಿ?
ನಾನು 40 ವರ್ಷದ ಹಿಂದಿನ ವಿದ್ಯಾರ್ಥಿ. ಈಗಲೂ ಕೂಡ ಕಾಲೇಜು ಕ್ಯಾಂಪಸ್ ಮಿಸ್ ಮಾಡಿಕೊಳ್ಳುತ್ತೇನೆ. ನಾವು ಓದುವಾಗ 3 ಬ್ರಾಂಚ್ ಮಾತ್ರವಿತ್ತು. ನಮಗೆ ಸಾಕಷ್ಟು ಖುಷಿ ಇತ್ತು. ಉತ್ತಮ ಶಿಕ್ಷಕರಿದ್ದರು. ಉತ್ತಮ ಶಿಕ್ಷಕರು, ಇಷ್ಟದ ಶಿಕ್ಷಕರು, ಶಿಸ್ತಿನ ಶಿಕ್ಷಕರು ಕಾಲೇಜಿನಲ್ಲಿದ್ದರು. All india tour ಮಾಡಿದ್ದು ಸಾಕಷ್ಟು ಅನುಭವಗಳು ಸಿಕ್ಕಿತು. ನಮ್ಮ ಕಾಲೇಜಿನಲ್ಲಿ ನಾವು ಆಲ್ ಇಂಡಿಯಾ ಟೂರ್ ಶುರು ಮಾಡಿದ್ವಿ. ಪ್ರಿನ್ಸಿಪಲ್ ಅನುಮತಿಗಿಂತ ಮೊದಲೇ ಟೂರ್ ಪ್ಲಾನ್ ಮಾಡಿದ್ವಿ. ಕ್ಯಾಂಟಿನ್ ನನ್ನ ನೆಚ್ಚಿನ ಸ್ಥಳವಾಗಿತ್ತು ಎಂದರು. ಅಲ್ಲದೇ WhatsApp instragam ಬಳಸಬೇಡಿ ಎಂದು ನಾನು ಹೇಳಲ್ಲ. ಆದ್ರೆ ಎಷ್ಟು ಬೇಕೋ ಅಷ್ಟು ಬಳಸಿ ನಿಮ್ಮ ಮೇಲೆ ನೀವು ವಿಶ್ವಾಸವಿಡಿ ಆಗ ಯಶಸ್ಸು ನಿಮ್ಮದಾಗಲಿದೆ ಎಂದು ಸಿಎಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

* ಹಳ್ಳಿಗಳಲ್ಲಿ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ವಿದ್ಯಾರ್ಥಿ ಪ್ರಶ್ನೆ?
ಹಳ್ಳಿಗಳಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳಿಗಾಗಿ ಹಳ್ಳಿಗಳಿಗೆ ಸ್ಪೆಷಲ್ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ಇದೆ ಎಂದರು.

* ರಾಜಕೀಯದಲ್ಲಿ ಸಿದ್ದಾಂತ ಎಷ್ಟು ಮುಖ್ಯ ಆಗುತ್ತದೆ, ನಿಮ್ಮ ಸಿದ್ದಾಂತ ಏನು ಎಂದು ಬಿಗ್ ಬಾಸ್ ಸ್ಪರ್ಧಿ ರಘುಗೌಡ ಸಿಎಂಗೆ ಪ್ರಶ್ನೆ?
ವಿದ್ಯಾರ್ಥಿ ಜೀವನದಲ್ಲಿ ಇದ್ದಾಗ ವಿದ್ಯಾರ್ಥಿಯಾಗಿ ಕಲಿಯೋಕೆ ಇರ್ತಾರೆ. ರಾಜಕೀಯ ಜೀವನದ ಬಗ್ಗೆ ತಿಳ್ಕೋಬೇಕು ಅಂದುಕೋತಾರೆ. ಅದೇ ರಾಜಕೀಯ ಸ್ಥಾನಕ್ಕೆ ಬಂದಾಗ ರಾಜಕೀಯ ಹೇಗೆ ಮಾಡಬೇಕು ಎಂದು ಬದಲಾಗ್ತಾರೆ ಅದೇ ಸಿದ್ದಾಂತ ಎಂದು ಸಿಎಂ ಉತ್ತರಿಸಿದರು.

ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ಮೇಲೆ 0.25%ರಷ್ಟು ರಿಯಾಯಿತಿ ಘೋಷಣೆ

* ಹಾವೇರಿ ಜಿಲ್ಲೆಯ ವಿದ್ಯಾರ್ಥಿನಿಯಿಂದ ಪ್ರಶ್ನೆ: ಬೇರೆ ಜಿಲ್ಲೆಗಳಂತೆ ಹಾವೇರಿ ಜಿಲ್ಲೆಗೂ ಕ್ರೀಡಾಸೌಲಭ್ಯಗಳು ಸಿಗಬಹುದಾ?
ಕ್ರೀಡಾಂಗಣ ಮತ್ತು ಕ್ರೀಡಾ ತರಬೇತಿ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇನೆ ಎಂದರು.

* ನಿಮ್ಗೆ ಯಾರು ಇನ್‌ಸ್ಪೀರೇಷನ್‌?
ಸ್ವಾಮಿ ವಿವೇಕಾನಂದ ನನ್ನ ಇನ್‌ಸ್ಪೀರೇಷನ್‌. ಸ್ವಾಮಿ ವಿವೇಕಾನಂದ ಏನ್ ಹೇಳಿದ್ದಾರೆ ಗೊತ್ತಾ? ಸಾಧನಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಸಾಧನೆ ಗೊತ್ತಾಗಬೇಕು. ಯುವಕರು ಈ ದೇಶದ ಭವಿಷ್ಯ. ಯುವಕರು ಇತಿಹಾಸದ ಭಾಗವಾಗಿ ಅಥವಾ ಇತಿಹಾಸ ಕ್ರಿಯೇಟ್ ಮಾಡಬೇಕು. ಅಂತಹ ವಿದ್ಯಾರ್ಥಿಗಳಿಗೆ ಜೋಷ್ ಇರಬೇಕು. ಯುವಕರು ಏನೇ ಮಾಡಬೇಕಾದ್ರು ಅದು ಸಾಧ್ಯವಿದೆ. ಯುವಕರು ತಾವು ಸಾಧನೆ ಮಾಡಬೇಕು ಎಂಬ ಗುರಿ ಇರಲಿ. ವಿದ್ಯಾರ್ಥಿಗಳಿಗೆ ಮೌಂಟ್ ಎವರೆಸ್ಟ್ ಹತ್ತಿದೆ ಎಂದು ತೇನ್ ಸಿಂಗ್ ಕಥೆ ಹೇಳಿದರು.
 

ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ
https://t.co/mox4tDRt7u

— Basavaraj S Bommai (@BSBommai)
click me!