ಅನ್ನಭಾಗ್ಯ ಅಕ್ಕಿ ಆಫ್ರಿಕಾಗೆ ರಫ್ತು ದೃಢ! ಮುಂಬೈ, ಗುಜರಾತ್‌ ಬಂದರು ಮೂಲಕ ರವಾನೆ, ಸಿಐಡಿ 4000 ಪುಟಗಳ ಚಾರ್ಜ್‌ಶೀಟ್‌

Gowthami K   | Kannada Prabha
Published : Nov 06, 2026, 09:18 AM IST
Anna Bhagya

ಸಾರಾಂಶ

ಯಾದಗಿರಿಯಲ್ಲಿ ಬಡವರಿಗೆ ನೀಡುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ವಿದೇಶಗಳಿಗೆ ಸಾಗಿಸುತ್ತಿದ್ದ ಜಾಲವನ್ನು ಸಿಐಡಿ ಪತ್ತೆಹಚ್ಚಿದೆ. ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದ್ದು, ಮುಂಬೈ ಮೂಲಕ ಆಫ್ರಿಕಾ ದೇಶಗಳಿಗೆ ಅಕ್ಕಿ ರಫ್ತಾಗುತ್ತಿರುವುದು ದೃಢಪಟ್ಟಿದೆ.

ವರದಿ: ಆನಂದ್‌ ಎಂ. ಸೌದಿ

ಯಾದಗಿರಿ: ಬಡವರಿಗೆಂದು ಸರ್ಕಾರಗಳು ನೀಡುವ ಅನ್ನಭಾಗ್ಯ (ಪಡಿತರ) ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ, ನಂತರ ಪಾಲಿಶ್‌ ಮಾಡಿ, ವಿವಿಧ ಬ್ರಾಂಡ್‌ಗಳ ಹೆಸರಲ್ಲಿ ಪ್ಯಾಕ್‌ ಮಾಡಿ ಮುಂಬೈ ಮೂಲದ ಕಂಪನಿಯ ಮೂಲಕ ಆಫ್ರಿಕಾ ಖಂಡಕ್ಕೆ ಸಾಗಿಸಲಾಗುತ್ತಿತ್ತು ಅನ್ನೋದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ.

ಕಳೆದ ವರ್ಷ ಸೆ.6 ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಶ್ರೀಲಕ್ಷ್ಮಿ ವೆಂಕಟೇಶ್ವರ ಹಾಗೂ ಶ್ರೀ ಲಕ್ಷ್ಮಿ ಬಾಲಾಜಿ ಇಂಡಸ್ಟ್ರೀಸ್‌ ರೈಸ್‌ಮಿಲ್‌ಗಳಲ್ಲಿ ಪತ್ತೆಯಾದ, 1.21 ಕೋಟಿ ರು. ಮೌಲ್ಯದ, 3,985 ಕ್ವಿಂಟಲ್‌ ಪಡಿತರ ಅಕ್ಕಿ ಅಕ್ರಮ ಸಂಗ್ರಹ ಪ್ರಕರಣದ ತನಿಖೆ ನಡೆಸಿದ ಸಿಐಡಿ, ಇದೀಗ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅದರಲ್ಲಿ ಪಡಿತರ ಅಕ್ಕಿ ವಿದೇಶಗಳಿಗೆ ಹೋಗುವ ಬಗ್ಗೆ ದೃಢಪಡಿಸಿದೆ.

2025ರ ಸೆ.4ರಂದು ಗುರುಮಠಕಲ್‌ನಲ್ಲಿ ಪತ್ತೆಯಾದ ಈ ಪ್ರಕರಣದ ತನಿಖೆಯನ್ನು ಅಂದಿನ ಸಿಎಂ ಸಿದ್ದರಾಮಯ್ಯ ಸಿಐಡಿಗೆ ವಹಿಸಿದ್ದರು. ತನಿಖಾಧಿಕಾರಿ ಅನಿಲ್‌ಕುಮಾರ್ ಈ ಪ್ರಕರಣದ ಪತ್ತೆ ನಡೆಸುತ್ತಿದ್ದಾಗ ಇದೇ ವ್ಯಾಪ್ತಿಯ ಮತ್ತೊಂದೆಡೆ ಮತ್ತೆ ಸುಮಾರು 43.79 ಲಕ್ಷ ರು.ಮೌಲ್ಯದ ಅಕ್ಕಿ, ಜೋಳ ಜೊತೆಗೆ ಶಾಲಾ ಮಕ್ಕಳ ಕ್ಷೀರಭಾಗ್ಯದ ಹಾಲಿನ ಪೌಡರ್‌ ದಾಸ್ತಾನು ಪತ್ತೆಯಾಗಿತ್ತು. ಮೊದಲ ಪ್ರಕರಣ ಸೇರಿ, ಈ ಬಗ್ಗೆ ದಾಖಲಾದ ಒಟ್ಟು 4 ದೂರು ದಾಖಲಾಗಿದ್ದವು.

ಈ 4 ಪ್ರಕರಣಗಳನ್ನು ತನಿಖೆ ನಡೆಸಿದ್ದ ಸಿಐಡಿ ಡಿಟೆಕ್ಟಿವ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ಪ್ರಕರಣದ ತನಿಖಾಧಿಕಾರಿ ಆಗಿರುವ ಜಿ. ಅನಿಲ್‌ ಕುಮಾರ್‌ ಹಾಗೂ ಸಹಾಯಕ ತನಿಖಾಧಿಕಾರಿ, ಎಎಸ್‌ಐ ಹರ್ಷ ಅವರ ತಂಡ, ಸತತ 1 ವರ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ತೆರಳಿ, ತನಿಖೆ ನಡೆಸಿ ಯಾದಗಿರಿ ನ್ಯಾಯಾಲಯಕ್ಕೆ ಇದೇ ಅ.30 ರಂದು ಸುಮಾರು 4000 ಪುಟ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಕುರಿತು ಸೆ.8, 2025 ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು.

ಸಿಐಡಿ ತನಿಖೆಯಲ್ಲಿ ದೃಢ

ಮುಂಬೈ ಮೂಲದ ಕಂಪನಿಯೊಂದು ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿದ ನಂತರ ಅಕ್ಕಿ ರಫ್ತು ವ್ಯವಹಾರದಲ್ಲಿ ನಿರತವಾಗಿರುವ ದೇಶದ ಕೆಲವು ಉತ್ತಮ ಸಂಸ್ಥೆಗಳಿಗೆ ಸರಬರಾಜು ಮಾಡಿದ್ದು, ಸದರಿ ಖರೀದಿ ಸಂಸ್ಥೆಗಳು ಪಾಲಿಶ್ ಮಾಡಲಾಗಿರುವ ಇದೇ ಅಕ್ಕಿಯನ್ನು (ಪಡಿತರ ಅಕ್ಕಿ ಎಂಬುದಾಗಿ ಅರಿವಿಲ್ಲದೆ) ತಮ್ಮದೇ ಆದ ಬ್ರಾಂಡ್‌ಗಳ ಹೆಸರಿನಲ್ಲಿ ಮುಂಬೈ ಮತ್ತು ಗುಜರಾತ್ ಬಂದರುಗಳ ಮೂಲಕ ಆಫ್ರಿಕಾ ಮೂಲದ ರವಾಂಡಾ, ಕಿಗಳ, ತಾಂಜೇನಿಯ ಮುಂತಾದ ವಿವಿಧ ದೇಶಗಳಿಗೆ ರಫ್ತು ಮಾಡಿರುವುದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ಅದನ್ನು ಪಾಲಿಶ್ ಮಾಡಿದ ನಂತರ, ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಸಹ ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಿದ್ವಾಯಿ, ಕಿಮ್ಸ್‌ಗೆ ರೋಬೋಟಿಕ್‌ ಸರ್ಜರಿ ಉಪಕರಣ ಖರೀದಿ, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ನಾನು ಅರಬ್‌ಗಿಂತ ಹೆಚ್ಚು ಭಾರತೀಯ: ಅಮೆರಿಕದ ಸೆನೆಟರ್‌ ಆದ ಭಟ್ಕಳದ ಅಳಿಯನ ಅಚ್ಚರಿಯ ಹೇಳಿಕೆ!