ನಾನು ಅರಬ್‌ಗಿಂತ ಹೆಚ್ಚು ಭಾರತೀಯ: ಅಮೆರಿಕದ ಸೆನೆಟರ್‌ ಆದ ಭಟ್ಕಳದ ಅಳಿಯನ ಅಚ್ಚರಿಯ ಹೇಳಿಕೆ!

Gowthami K   | Kannada Prabha
Published : Nov 06, 2026, 08:40 AM IST
Abdul El-Sayed

ಸಾರಾಂಶ

ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾದ ಅಬ್ದುಲ್ ಎಲ್-ಸಯೀದ್ ತಾವು ಈಗ ಅರಬ್‌ಗಿಂತ ಹೆಚ್ಚು ಭಾರತೀಯನಾಗಿರಬಹುದು ಎಂದು ಅವರು ಭಾವುಕವಾಗಿ ಹೇಳಿದ್ದಾರೆ. ಅವರ ಪತ್ನಿ ಸಾರಾ ಜುಕಾಕು ಅವರ ಕುಟುಂಬದ ಬೇರುಗಳು ಕರ್ನಾಟಕದ ಭಟ್ಕಳದಲ್ಲಿವೆ.

ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾದ ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಎಲ್-ಸಯೀದ್ , ‘ನಾನು ಈಗ ಅರಬ್‌ಗಿಂತ ಹೆಚ್ಚು ಭಾರತೀಯನಾಗಿರಬಹುದು’ ಎಂದಿದ್ದಾರೆ.

ಈಜಿಪ್ಟ್‌ ಮೂಲದವರಾದ ಸಯ್ಯದ್‌ ಕರ್ನಾಟಕದ ಭಟ್ಕಳದ ಮುಸ್ಲಿಂ ಕುಟುಂಬವೊಂದರ ಯುವತಿ ಡಾ. ಸಾರಾ ಜುಕಾಕು ಅವರನ್ನು ವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಡ್‌ಕಾಸ್ಟ್‌ ಒಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಎಲ್-ಸಯೀದ್, ‘ನಾನು ಕಳೆದ 20 ವರ್ಷಗಳಿಂದ ದಕ್ಷಿಣ ಭಾರತೀಯ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದೇನೆ ಮತ್ತು ಅವರ ಸಂಸ್ಕೃತಿಗೆ ಹೊಂದಿಕೊಂಡಿದ್ದೇನೆ. ನಾನು ಈಗ ಅರಬ್‌ಗಿಂತ ಹೆಚ್ಚು ಭಾರತೀಯನಾಗಿರಬಹುದು’ ಎಂದು ತಮಾಷೆಯಾಗಿ ಹೇಳಿದರು.

ಐತಿಹಾಸಿಕ ಜಯ

ಈಜಿಪ್ಟ್ ಮೂಲದ ವಲಸಿಗರ ಮಗನಾದ 42 ವರ್ಷದ ವೈದ್ಯ ಮತ್ತು ಆರೋಗ್ಯ ತಜ್ಞರಾದ ಅಬ್ದುಲ್ ಎಲ್-ಸಯೀದ್ ಅವರು, ರಿಪಬ್ಲಿಕನ್ ಪಕ್ಷದ ಮೈಕ್ ರೇಂಜರ್ಸ್ ಅವರನ್ನು ಸೋಲಿಸಿ ಅಮೆರಿಕ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಭಟ್ಕಳದ ಯುವತಿಯನ್ನು ಮದುವೆ ಆಗಿರುವ ಅಬ್ದುಲ್‌

ವಾಷಿಂಗ್ಟನ್: ಕರ್ನಾಟಕದ ಭಟ್ಕಳ ನಂಟು ಹೊಂದಿರುವ ಅಬ್ದುಲ್ ಅಲ್-ಸಯೀದ್‌ ಅವರು ಅಮೆರಿಕದ ಮಿಚಿಗನ್ ರಾಜ್ಯದಿಂದ ಸೆನೆಟ್‌ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಸೆನೆಟ್ ಪ್ರವೇಶಿಸುತ್ತಿರುವ ಮೊದಲ ಮುಸ್ಲಿಂ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನುಅಬ್ದುಲ್ ಸೋಲಿಸಿದ್ದಾರೆ.

ಶಂಶುದ್ಧೀನ್ ಮೊಮ್ಮಗಳು ಸಾರಾ:

ಡಾ. ಸಾರಾ ಅವರು ದಿ. ಜೆ.ಎಚ್. ಶಂಶುದ್ಧೀನ್ ಜುಕಾಕೊ ಅವರ ಮೊಮ್ಮಗಳು. ಇವರು ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ನೇತೃತ್ವದ ಮೈಸೂರು ರಾಜ್ಯ ಸರ್ಕಾರದಲ್ಲಿ ಹಣಕಾಸು ಉಪ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಖ್ಯಾತ ವಕೀಲರು ಮತ್ತು ಸಾರ್ವಜನಿಕ ವ್ಯಕ್ತಿಯಾಗಿದ್ದ ಶಂಶುದ್ಧೀನ್ ಜುಕಾಕೋ ಅವರು ಭಟ್ಕಳದ ಮೊದಲ ವಕೀಲರೆಂದು ಗುರುತಿಸಲ್ಪಟ್ಟಿದ್ದಲ್ಲದೇ ಇಲ್ಲಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದವರೆನ್ನುವ ಹೆಗ್ಗಳಿಕೆ ಇದೆ.

ಅಮೆರಿಕ ಸೆನೆಟ್ ಗೆ ಆಯ್ಕೆಯಾದ ಅಬ್ದುಲ್ ರೆಹಮಾನ್ ಪತ್ನಿ ಡಾ. ಸಾರಾ ಅವರು ಡಾ. ತಯೇಬ್ ಜುಕಾಕೋ ಅವರ ಪುತ್ರಿ. ಡಾ. ತಯೇಬ್ ಅವರು ಮೂತ್ರಪಿಂಡ ರೋಗ ತಜ್ಞರಾಗಿದ್ದು(ನೆಫ್ರಾಲಜಿಸ್ಟ್). 1976ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದರು. ವಿದೇಶದಲ್ಲಿ ಕೆಲಸ ಮಾಡಿದ ನಂತರ ೧೯೮೦ರ ದಶಕದಲ್ಲಿ ಅವರು ಅಮೆರಿಕಕ್ಕೆ ತೆರಳಿ, ಅಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ರೂಪಿಸಿಕೊಂಡರು. ಸಾರಾ ಅಮೆರಿಕದಲ್ಲಿಯೇ ಬೆಳೆದಿದ್ದರೂ, ಅವರ ತಂದೆ ತಮ್ಮ ಮಕ್ಕಳಿಗೆ ತಮ್ಮ ಮೂಲ ನೆಲೆಯೊಂದಿಗೆ ಸಂಪರ್ಕವಿರಲಿ ಎಂಬ ಉದ್ದೇಶದಿಂದ, ಅವರು ಆಗಾಗ ಭಟ್ಕಳ ಮತ್ತು ಬೆಂಗಳೂರಿಗೆ ಭೇಟಿ ನೀಡುವಂತೆ ನೋಡಿಕೊಂಡಿದ್ದರು. ಜುಕಾಕು ಕುಟುಂಬದ ಹಲವು ಸದಸ್ಯರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಡಾ. ಸಾರಾ ಅವರ ಕುಟುಂಬವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುತ್ತಿದೆ.

2006ರಲ್ಲಿ ಸಾರಾರೊಂದಿಗೆ ವಿವಾಹ: ಡಾ. ಸಾರಾ ಮತ್ತು ಅಬ್ದುಲ್ ರೆಹಮಾನ್ ಮೊಹಮ್ಮದ್ ಎಲ್- ಸಯೀ ದ್ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ಬಾರಿಗೆ ಭೇಟಿಯಾದರು ಮತ್ತು 2006ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಾರಾ ಅವರ ಸೋದರ ಸಂಬಂಧಿಯೊಬ್ಬರ ಪ್ರಕಾರ, ಈ ಕುಟುಂಬವು ಭಟ್ಕಳದೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡಿದೆ. ಕುಟುಂಬದ ಸಮಾರಂಭಗಳಲ್ಲಿ ಭಾಗವಹಿಸಲು ಸಾರಾ ಹಲವು ಬಾರಿ ಭಟ್ಕಳ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದಾರೆ.

ಭಟ್ಕಳದೊಂದಿಗೆ ಸಂಪರ್ಕ:

ಸುಮಾರು ಏಳು ವರ್ಷಗಳ ಹಿಂದೆ ಅವರು ಕುಟುಂಬದ ಇತರ ಸದಸ್ಯರೊಂದಿಗೆ ಕೊನೆಯ ಬಾರಿಗೆ ಭಟ್ಕಳಕ್ಕೆ ಭೇಟಿ ನೀಡಿದ್ದರು ಎನ್ನುವುದನ್ನು ಸ್ಮರಿಸುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅನ್ನಭಾಗ್ಯ ಅಕ್ಕಿ ಆಫ್ರಿಕಾಗೆ ರಫ್ತು ದೃಢ! ಮುಂಬೈ, ಗುಜರಾತ್‌ ಬಂದರು ಮೂಲಕ ರವಾನೆ, ಸಿಐಡಿ 4000 ಪುಟಗಳ ಚಾರ್ಜ್‌ಶೀಟ್‌
ಜಿಪಂ, ತಾಪಂ ಚುನಾವಣೆಗೆ ಕ್ಷಣಗಣನೆ ನಡುವೆ ಬಂಪರ್‌ ಕೊಡುಗೆ, ರಸ್ತೆ-ಸೇತುವೆ ಅಭಿವೃದ್ಧಿಗೆ ₹20000 ಕೋಟಿ ಅನುದಾನ