ಸಿಐಡಿ ತನಿಖೆ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್‌?

By Kannadaprabha NewsFirst Published Oct 27, 2024, 9:06 AM IST
Highlights

ಪ್ರಸುತ್ತ ಅಪರಾಧ ಕೃತ್ಯಗಳ ಸಂಬಂಧ ಎಫ್ ಐಆರ್‌ ದಾಖಲಾಗುವ ವ್ಯಾಪ್ತಿಯ ನ್ಯಾಯಾಲಯಕ್ಕೆ ಸಿಐಡಿ ಆರೋಪ ಪಟ್ಟಿ ಸಲ್ಲಿಸುತ್ತಿದ್ದು, ಆ ನ್ಯಾಯಾಲದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಹೀಗಾಗಿ ಬೆಂಗಳೂರಿನಲ್ಲೇ ಸಿಐಡಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಸಿಐಡಿ ಡಿಜಿಪಿ ಡಾ. ಎಂ.ಎ.ಸಲೀಂ 

ಬೆಂಗಳೂರು(ಅ.27): ತಾನು ತನಿಖೆ ನಡೆಸುವ ಪ್ರಕರಣಗಳನ್ನು ವಿಚಾರಣೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮಾದರಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಗೃಹ ಇಲಾಖೆ ಕೂಡ ಸಕಾರಾತಾತ್ಮಕವಾಗಿ ಸ್ಪಂದಿಸಿದ್ದು, ಕಾನೂನು ಇಲಾಖೆ ಜತೆ ಸಮಾಲೋಚಿಸಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರವನ್ನು ಸರ್ಕಾರ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ. 

ಪ್ರಸುತ್ತ ಅಪರಾಧ ಕೃತ್ಯಗಳ ಸಂಬಂಧ ಎಫ್ ಐಆರ್‌ ದಾಖಲಾಗುವ ವ್ಯಾಪ್ತಿಯ ನ್ಯಾಯಾಲಯಕ್ಕೆ ಸಿಐಡಿ ಆರೋಪ ಪಟ್ಟಿ ಸಲ್ಲಿಸುತ್ತಿದ್ದು, ಆ ನ್ಯಾಯಾಲದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಹೀಗಾಗಿ ಬೆಂಗಳೂರಿನಲ್ಲೇ ಸಿಐಡಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಸಿಐಡಿ ಡಿಜಿಪಿ ಡಾ. ಎಂ.ಎ.ಸಲೀಂ ಮನವಿ ಮಾಡಿದ್ದಾರೆ. 

Latest Videos

ಬೇಲೇಕೇರಿ ಅದಿರು ನಾಪತ್ತೆ ಕೇಸ್: ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ

ಸಿಐಡಿ ಕೇಂದ್ರ ಸ್ಥಾನವು ಬೆಂಗಳೂರಿನಲ್ಲಿದೆ. ರಾಜ್ಯದ ವಿವಿಧೆಡೆ ವರದಿಯಾಗುವ ಬಹುಮುಖ್ಯ ಪ್ರಕರಣಗಳು ತನಿಖೆಗೆ ಸಿಐಡಿಗೆ ವರ್ಗಾವಣೆಯಾಗುತ್ತದೆ. ಆದರೆ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ನ್ಯಾಯಾಲಯದ ವಿಚಾರಣೆಗೆ ಜಿಲ್ಲೆಗಳಿಗೆ ಪ್ರತಿ ಬಾರಿ ಸಿಐಡಿ ಅಧಿಕಾರಿಗಳು ತೆರಳಬೇಕಾಗುತ್ತದೆ. ಇದರಿಂದ ಅಧಿಕಾರಿಗಳಿಗೆ ಪ್ರಯಾಣ ಮಾತ್ರವಲ್ಲದೆ ಪ್ರಕರಣಗಳ ಮೇಲೆನಿ ಗಾವಹಿಸಲು ಕೂಡ ಅನಾನುಕೂಲವಾಗುತ್ತದೆ. ಈ ಸಮಸ್ಯೆ ಹಿನ್ನಲೆಯಲ್ಲಿ ಸಿಐಬಿ ಮಾದರಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಡಿಜಿಪಿ ಕೋರಿದ್ದಾರೆ. 

ಜನಪ್ರತಿನಿಧಿಗಳ ವಿರುದ್ದ ರಾಜ್ಯದಲ್ಲಿ ದಾಖಲಾಗುವ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರಿಂದ ಆ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೂ ಅನುಕೂಲವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

click me!