ರಾಷ್ಟ್ರಮಟ್ಟಕ್ಕೆ ಚಿತ್ರಸಂತೆ ಬೆಳೆಸಲು ಸಹಕಾರ: ಸಿಎಂ ಘೋಷಣೆ

By Kannadaprabha NewsFirst Published Jan 9, 2023, 9:47 AM IST
Highlights

ಚಿತ್ರಕಲಾ ಪರಿಷತ್ತು ಹಾಗೂ ಚಿತ್ರಸಂತೆಯಂತಹ ಚಟುವಟಿಕೆಯನ್ನು ಪ್ರಾದೇಶಿಕ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಬೆಳೆಸಲು ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು (ಜ.9) : ಚಿತ್ರಕಲಾ ಪರಿಷತ್ತು ಹಾಗೂ ಚಿತ್ರಸಂತೆಯಂತಹ ಚಟುವಟಿಕೆಯನ್ನು ಪ್ರಾದೇಶಿಕ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಬೆಳೆಸಲು ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರ ಕರ್ನಾಟಕ ಚಿತ್ರಕಲಾ ಪರಿಷತ್ತು(Chitrakala parishath) ಹಾಗೂ ಉನ್ನತ ಶಿಕ್ಷಣ ಇಲಾಖೆ(Department of Higher Education) ಸಹಯೋಗದಲ್ಲಿ ನಡೆದ ‘20ನೇ ಚಿತ್ರಸಂತೆ’()Chitra sante(ಯನ್ನು ಅವರು ನವಿಲಿನ ಚಿತ್ರ ಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Chitra Santhe 2023: ಕಲಾಪ್ರೇಮಿಗಳಿಂದ ತುಂಬಿ ತುಳುಕಿದ ‘ಚಿತ್ರಸಂತೆ’

‘ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ(National School of Drama), ಐಐಟಿ, ಐಐಎಂ, ಎನ್‌ಎಸ್‌ಎಲ…ಯು ಮಟ್ಟಕ್ಕೆ ಚಿತ್ರಕಲಾ ಪರಿಷತ್ತನ್ನು ಬೆಳೆಸಬೇಕಿದೆ. ಬ್ರ್ಯಾಂಡ್‌ ಬೆಂಗಳೂರನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಚಿತ್ರಕಲಾ ಪರಿಷತ್ತಿಗಿದೆ, ದೆಹಲಿ, ಮುಂಬೈ ಸೇರಿ ರಾಷ್ಟಾ್ರದ್ಯಂತ ರಾಜ್ಯದ ಸಂಸ್ಕೃತಿಯನ್ನು ಪಸರಿಸುವಂತೆ ಪ್ರದರ್ಶನ ಆಯೋಜಿಸಬೇಕಿದೆ. ಜತೆಗೆ ರಾಜ್ಯದಲ್ಲೂ ಚಿತ್ರಕಲಾ ಪರಿಷತ್ತು ಕೇವಲ ಬೆಂಗಳೂರಿಗೆ ಸೀಮಿತಗೊಳ್ಳಬಾರದು. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕದಂತ ಭಾಗದಲ್ಲೂ ಚಿತ್ರಸಂತೆ ಏರ್ಪಡಿಸಲು ಮುಂದಾಗಬೇಕು. ಅದಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.

2 ದಿನ ಆಯೋಜಿಸಿ:

ಈ ಪರಿಷತ್ತು ಚಿತ್ರಕಲೆಯ ಪರಮಹಂಸದಂತಿದೆ. ಆಧ್ಯಾತ್ಮಿಕ, ಐತಿಹಾಸಿಕ, ಐಟಿ, ಬಿಟಿ, ಸ್ಟಾರ್ಚ್‌ ಅಪ್‌ಗಳ ತವರು ಬೆಂಗಳೂರು. ಅದರೊಂದಿಗೆ ಉತ್ತಮವಾದ ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಬೀಡಾಗಿದೆ. ಇಲ್ಲಿ ಮುಂದಿನ ವರ್ಷ 2 ದಿನ ಚಿತ್ರ ಸಂತೆ ಹಮ್ಮಿಕೊಳ್ಳಬೇಕು. ಎನ್‌ಜಿಇಎಫ್‌ನಲ್ಲಿ ತೆರೆಯಲು ಉದ್ದೇಶಿಸಿರುವ ಓಪನ್‌ ಮ್ಯೂಸಿಯಂನಲ್ಲಿ ರಾಜ್ಯದ ಚಿತ್ರಕಲೆ ಬೆಳೆದುಬಂದ ಹಾದಿಯನ್ನು ತೋರ್ಪಡಿಸುವ ಅವಕಾಶವನ್ನೂ ನೀಡಲಾಗುವುದು. ಪರಿಷತ್ತು ಈ ಬಗ್ಗೆ ಅಧ್ಯಯನ ಮಾಡಿ ತಿಳಿಸಬೇಕು ಎಂದರು.

ಪರಿಷತ್ತಿನ ಅಧ್ಯಕ್ಷ ಬಿ.ಎಲ….ಶಂಕರ್‌, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ….ಅಶ್ವತ್ಥನಾರಾಯಣ, ಸಂಸದ ಪಿ.ಸಿ.ಮೋಹನ್‌, ಶಾಸಕ ರಿಜ್ವಾನ್‌ ಅರ್ಷದ್‌, ಚಿತ್ರ ಕಲಾವಿದ ಲಕ್ಷ್ಮಣ ಗೌಡ ಸೇರಿ ಇತರರಿದ್ದರು.

.2500 ನೀಡಿ ಕಲಾಕೃತಿ ಖರೀದಿಸಿದ ಬೊಮ್ಮಾಯಿ

ಚಿತ್ರಸಂತೆಯಲ್ಲಿ ಸಮುದ್ರ ದಂಡೆಯಲ್ಲಿ ದೋಣಿಗಳು ನಿಂತಿರುವ ವಿಶೇಷವಾದ ಕಲಾಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖರೀದಿ ಮಾಡಿದರು. ಕೇವಲ ಕಲಾಕೃತಿಯನ್ನು ನೋಡುವುದು ಮಾತ್ರವಲ್ಲ ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಎಂದ ಅವರು, .2500 ಕೊಟ್ಟು ಚಿತ್ರವನ್ನು ಖರೀದಿ ಮಾಡಿದರು.

Chitra sante 2023: ಚನ್ನೈನಿಂದ ಆಗಮಿಸಿದ್ದ ಕಿವುಡರ ‘ಡೆಫ್‌ ಕಲೆಕ್ಟಿವ್‌’ ತಂಡ ಕಲಾಕೃತಿ ರಚನೆಯಲ್ಲಿ ಅದ್ಭುತ!

2 ದಿನ ಚಿತ್ರ ಸಂತೆ ಕಷ್ಟ

ಚಿತ್ರಸಂತೆಯನ್ನು ಎರಡು ದಿವಸ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಬಹಳಷ್ಟುಚಿಂತನೆ ನಡೆಸಬೇಕಿದೆ. ಒಂದೊಮ್ಮೆ ಮಳೆ ಬಂದರೆ ಕಲಾವಿದರಿಗೆ ತೊಂದರೆಯಾಗಲಿದೆ. ಮತ್ತೊಂದೆಡೆ ಕಲಾಕೃತಿಗಳನ್ನು ರಾತ್ರಿಯೆಲ್ಲಾ ಕಾಪಾಡಿಕೊಳ್ಳುವುದೂ ಕಷ್ಟ.

-ಬಿ.ಎಲ್‌.ಶಂಕರ್‌, ಚಿತ್ರಕಲಾ ಪರಿಷತ್‌ ಅಧ್ಯಕ್ಷ

click me!