
ಚಿತ್ರದುರ್ಗ (ಅ.13): ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಗಳ ಅವಶ್ಯಕತೆ ಇದ್ದಾಗ ಅಧಿಕಾರಿಗಳು ಹಿಂದೆ ಮುಂದೆ ನೋಡದೇ ಕೆಲಸಕ್ಕೆ ಸೇರಿಸಿಕೊಳ್ತಾರೆ. ಆದ್ರೆ ವರ್ಷಾನುಗಟ್ಟಲೇ ಸಂಬಳ ಆಗ್ತಿಲ್ಲ ಅಂದ್ರು ಅವರನ್ನು ಕ್ಯಾರೇ ಎನ್ನದೇ ಬೇಜವಾಬ್ದಾರಿ ತೋರಿಸ್ತಾರೆ. ಕಳೆದ ಎರಡು ವರ್ಷಗಳಿಂದ ಸಂಬಳ ಸಿಗದೇ, ಈ ಕಡೆ ಕೆಲಸವೂ ಕಳೆದುಕೊಂಡು ಸ್ಟಾಫ್ ನರ್ಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಎರಡೂ ವರೆ ವರ್ಷದಿಂದ 11 ಜನ ಸ್ಟಾಫ್ ನರ್ಸ್ ಗಳು 5 ಮಂದಿ ಡಿ ಗ್ರೂಪ್ ಆಗಿ, ಇಬ್ಬರು ವಾಹನ ಚಾಲಕರಾಗಿ ಕೆಲಸ ಮಾಡ್ತಿದ್ದೆವು. ಮೊದಲ ನಾಲ್ಕು ತಿಂಗಳು ಮಾತ್ರ ಸ್ಯಾಲರಿ ಆಗಿದೆ. ಅದನ್ನು ಹೊರತುಪಡಿಸಿದ್ರೆ ಇನ್ನುಳಿದ ಎರಡು ವರ್ಷ ನಮಗೆ ಯಾವುದೇ ಸಂಬಳವಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ಹೋಗಿ ಕೇಳಿದ್ರೆ ಒಂದು ವಾರ, ಹದಿನೈದು ದಿನ ಬಿಟ್ಟು ಹಾಕ್ತೀವಿ ಎಂದು ಪ್ರತಿ ಬಾರಿಯೂ ಹಾರಿಕೆಯ ಉತ್ತರವನ್ನು ನೀಡ್ತಿದ್ದಾರೆ. ಯಾರಾದ್ರು ಮೇಲಾಧಿಕಾರಿಗಳು ಬಂದಾಗ ನಾವು ಸ್ಯಾಲರಿ ಸಮಸ್ಯೆ ಹೇಳಲು ಹೋದ್ರೆ ಆ ಕ್ಷಣದಲ್ಲಿ ಮಾತ್ರ ಕೊಡ್ತೀವಿ ಎಂದು ಸಬೂಬು ಹೇಳಿ ಜಾರಿ ಕೊಳ್ತಾರೆ. ಮತ್ತದೇ ರಾಗವನ್ನು ಮುಂದುರೆಸ್ತಿರೋದು ನಮಗೆ ತುಂಬಾ ಸಮಸ್ಯೆಯಾಗಿದೆ. ಇತ್ತ ಕಡೆ ಮೇಲಾಧಿಕಾರಿಗಳ ಆದೇಶದಂತೆ ಆರ್ಡರ್ ಕಾಪಿಯನ್ನು ಕೊಡ್ತಿಲ್ಲ, ಸ್ಯಾಲರಿಯನ್ನು ಕೊಡದೇ ಆಸ್ಪತ್ರೆ ಅಧಿಕಾರಿಗಳು ನಮ್ಮ ಹಣವನ್ನು ತಿಂದು ನಮಗೆ ಮೋಸ ಮಾಡ್ತಿದ್ದಾರೆ ನಮಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.
ಎರಡು ತಿಂಗಳಿಂದ ವೇತನ ನೀಡದೆ ಕಿರುಕುಳ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಇನ್ನು ಸಿಬ್ಬಂದಿ ಸಂಬಳದ ಕುರಿತು ಜಿಲ್ಲಾ ಸರ್ಜನ್ ಅವರನ್ನೇ ವಿಚಾರಿಸಿದ್ರೆ, ಈ ಹಿಂದೆ ಇದ್ದ ಅಧಿಕಾರಿಗಳು ಕೆಲ ಸಿಬ್ಬಂದಿಯನ್ನ ಅಕ್ರಮವಾಗಿ ನೇಮಕ ಮಾಡಿದ್ದರು. ಅವರು ಕೂಡ ಕಾನೂನುಬಾಹಿರವಾಗಿ ಕೆಲಸವನ್ನು ಮಾಡ್ತಿದ್ದರು. ಆದ್ರೂ ಕೂಡ ಮೊದಲ ಎರಡು ತಿಂಗಳು ಸಂಬಳ ನೀಡಿ ನಂತರ ೧೫ ತಿಂಗಳು ಸಂಬಳ ನೀಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಹಿಂದಿನ ಅಧಿಕಾರಿಗಳು ಮಾಡಿರುವ ತಪ್ಪನ್ನು ನಾನು ಮಾಡಲು ತಯಾರಿಲ್ಲ. ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ಕೆಲಸ ಮಾಡಿರುವ ಸಿಬ್ಬಂದಿಗೆ ಯಾವುದೇ ಅನ್ಯಾಯ ಆಗಬಾರದು. ಮೇಲಾಧಿಕಾರಿಗಳ ಗಮನಕ್ಕೆ ನಾನು ತರ್ತೀನಿ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದರನ್ವಯ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ. ಬಾಕಿ ಸಂಬಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಒಟ್ಟಾರೆಯಾಗಿ ಸಿಬ್ಬಂದಿಗೆ ಕಷ್ಟಪಟ್ಟು ಕೆಲಸ ಮಾಡುವಾಗ ಯಾವುದೇ ಚಕಾರ ಎತ್ತದ ಅಧಿಕಾರಿಗಳು. ವರ್ಷಗಟ್ಟಲೇ ಸಂಬಳ ಆಗಿಲ್ಲ ಎಂದು ಕೇಳಲು ಹೋಗಿದ್ದಕ್ಕೆ ಹಿಂದಿನ ಅಧಿಕಾರಿಗಳ ಮೇಲೆ ಹೇಳುವ ಮೂಲಕ ಅನ್ಯಾಯ ಮಾಡ್ತಿರೋದು ದುರಂತವೇ ಸರಿ. ಇನ್ನಾದ್ರು ಸಂಬಂಧಿಸಿದ ಅಧಿಕಾರಿಗಳು ಅನ್ಯಾಯಕ್ಕೆ ಒಳಗಾಗಿರುವ ಶುಶ್ರೂಷಕರಿಗೆ ಕೂಡಲೇ ಸಂಬಳ ನೀಡಬೇಕಿದೆ.
ಪೊಲೀಸ್ ಆಯ್ತು, ಈಗ ಸಾರಿಗೆ ನೌಕರರ ಸಂಬಳ ವಿಳಂಬ..!
ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿತ್ರದುರ್ಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ