ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದ ಎ3 ಆರೋಪಿ ಮುರುಘಾಮಠದ ಮ್ಯಾನೇಜರ್ ಪರಮಶಿವಯ್ಯಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ.
ಚಿತ್ರದುರ್ಗ (ಅ.13): ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದ ಎ3 ಆರೋಪಿ ಮುರುಘಾಮಠದ ಮ್ಯಾನೇಜರ್ ಪರಮಶಿವಯ್ಯಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ, ಹಲವು ತಿಂಗಳಿಂದ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದ ಪರಮಶಿವಯ್ಯ ಅವರು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.
ಫೋಕ್ಸೋ ಪ್ರಕರಣದ 3ನೇ ಆರೋಪಿಗೆ ಜಾಮೀನು. ಮುರುಘಾಮಠದ ಮ್ಯಾನೇಜರ್ ಎ3 ಪರಮಶಿವಯ್ಯಗೆ ಹೈಕೋರ್ಟ್‌ನ ಸಿಂಗಲ್ ಬೆಂಚ್ ನಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿರುವ ಎ3 ಪರಮಶಿವಯ್ಯ, ಅಕ್ಟೋಬರ್ 17ರಂದು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಸಾಧ್ಯತೆಯಿದೆ. ಆರೋಪಿ ಪರ ವಕೀಲ ಕೆ.ಬಿ.ಕೆ. ಸ್ವಾಮಿ ವಾದ ಮಂಡಿಸಿದ್ದರು. ಇನ್ನು ಇವರು ಎ1 ಆರೋಪಿಯಲ್ಲದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ.
undefined
ಪೋಕ್ಸೋ ಪ್ರಕರಣದ ಆರೋಪ: ಮುರುಘಾ ಶ್ರೀಗಳ ಜಾಮೀನು ಅರ್ಜಿ ತಿರಸ್ಕೃತ
ಚಿತ್ರದುರ್ಗದ ಮುರುಘಾ ಮಠದ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯಾಗಿದ್ದ ಪರಮಶಿವಯ್ಯಗೆ ಈಗ ಸುಮಾರು 10 ತಿಂಗಳ ನಂತರ ಜಾಮೀನು ಮಂಜೂರು ಆಗಿದ್ದು, ಜೈಲಿನಿಂದ ಹೊರಬರಲಿದ್ದಾರೆ. ಫೋಕ್ಸೊ ನಿಯಮದಂತೆ ತನಿಖೆಯನ್ನು ನಡೆಸಿದ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡ ಇಬ್ಬರು ಸಂತ್ರಸ್ತೆಯರ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಿ, ಪ್ರಕರಣ ಎ1 ಮುರುಘಾ ಶರಣರು, ಎ2 ಲೇಡಿ ವಾರ್ಡನ್, ಎ3 ಪರಮಶಿವಯ್ಯ ಅವರನ್ನು ನ್ಯಾಯಾಂಗ ಬಂಧಿಸಲಾಗಿತ್ತು, ಇದಾದ ನಂತರ ಮಾಜಿ ಶಾಸಕ ಬಸವರಾಜನ್ ಹಾಘು ಅವರ ಪತ್ನಿಯನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು. ಇದಾದ ನಂತರ ಬಸವರಾಜನ್ ದಂಪತಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಉಳಿದಂತೆ ಪ್ರಮುಖ ಆರೋಪಿಗಳಿಗೆ ಜಾಮೀನು ನೀಡದೇ ಜೈಲಿನಲ್ಲಿಯೇ ಉಳಿಸಲಾಗಿತ್ತು. ಇನ್ನು ಮುರುಘಾ ಶರಣರು ಹಲವು ಬಾರಿ ಜಾಮೀನು ಮಂಜೂರಾತಿಗೆ ಅರ್ಜಿ ಸಲ್ಲಿಕೆ ಮಾಡಿದರೂ ಅವರಿಗೆ ಜಾಮೀನು ಮಂಜೂರು ಆಗಿಲ್ಲ.
ಮುರುಘಾ ಮಠದ 10.5 ಕೋಟಿ ಸಾಲ ತೀರಿಸಿದ ಆಡಳಿತಾಧಿಕಾರಿ: ಚಿತ್ರದುರ್ಗ: ಬಸವಕೇಂದ್ರ ಮುರುಘಾಮಠದ ಆಡಳಿತಾಧಿಕಾರಿಯಾಗಿ ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟಿದ್ದ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರ ಏಳು ತಿಂಗಳ ಆಡಳಿತದ ಅವಧಿಯಲ್ಲಿ ಬರೊಬ್ಬರಿ ಹತ್ತುವರೆ ಕೋಟಿ ರುಪಾಯಿಯಷ್ಟುಮಠದ ಸಾಲ ತೀರುವಳಿ ಮಾಡಲಾಗಿರುವ ಅಂಶ ಬೆಳಕಿಗೆ ಬಂದಿದೆ. ಮುರುಘಾಮಠ(murugha math)ಕ್ಕೆ ಆಡಳಿತಾಧಿಕಾರಿಯಾಗಿ ಜಿಲ್ಲಾ ಪ್ರಧಾನ ಸತ್ರನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಅವರನ್ನು ಹೈಕೋರ್ಟ್ (Karnataka high court) ತಾತ್ಕಾಲಿಕವಾಗಿ ನೇಮಕ ಮಾಡಿದ ನಂತರ ಮಠದಿಂದ ನಿರ್ಗಮಿಸಿರುವ ನಿಕಟಪೂರ್ವ ಆಡಳಿತಾಧಿಕಾರಿ ವಸ್ತ್ರದ ಅವರು ಎಸ್‌ಜೆಎಂ ವಿದ್ಯಾ ಸಂಸ್ಥೆ ಸಿಬ್ಬಂದಿಗೆ ಪತ್ರವೊಂದನ್ನು ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಸಾಲ ತೀರುವಳಿ ಸಂಗತಿಯ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ. ಈ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
Murughamath: ಏಳು ತಿಂಗಳಲ್ಲಿ ಮುರುಘಾಮಠದ ಹತ್ತುವರೆ ಕೋಟಿ ರು. ಸಾಲ ತೀರುವಳಿ
ಮುರುಘಾ ಮಠದ ಮೇಲೆ 32 ಕೋಟಿ ಸಾಲವಿತ್ತು: ರಾಜ್ಯ ಸರ್ಕಾರದ ಆದೇಶದ ಮೇರೆಗೆ 13-12-2022ರಂದು ಎಸ್‌ಜೆಎಂ ವಿದ್ಯಾಪೀಠಕ್ಕೆ ಅಡಳಿತಾಧಿಕಾರಿಗಳಾಗಿ ನೇಮಕಗೊಂಡು, 3.07.2023 ರವರೆಗೆ ಕರ್ತವ್ಯ ನಿರ್ವಹಿಸಿದ್ದೇನೆ. ವಿದ್ಯಾಪೀಠದ ನೌಕರರಿಗೆ ಯಾವುದೇ ತೊಂದರೆಯಾಗದಂತೆ ಅಭ್ಯುದಯಕ್ಕೆ ಶ್ರಮಿಸಿದ್ದೇನೆ. ಸರ್ಕಾರದ ಒಬ್ಬ ಪ್ರತಿನಿಧಿಯಾಗಿ ನನ್ನ ಕೆಲಸವನ್ನು ಕಾಯ ವಾಚಾ ಮನಸ್ಸಿನಿಂದ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ಧೈರ್ಯ ತುಂಬಿ, ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಕ್ಕಾಗಿ ಸಮಸ್ತ ನೌಕರರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಏಳು ತಿಂಗಳ ಅವಧಿಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಉಲ್ಲೇಖ ಮಾಡಿರುವ ಪಿ.ಎಸ್.ವಸ್ತ್ರದ, ಸಾಲ ತೀರಿಸಿದ ಪ್ರಮಾಣವ ದಾಖಲು ಮಾಡಿದ್ದಾರೆ. ತಾವು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಮುರುಘಾಮಠದ ಸಾಲ ಆಕ್ಸಿಸ್ ಬ್ಯಾಂಕ್‌ನಲ್ಲಿ 19.82 ಕೋಟಿ ರು. ಮತ್ತು ಎಸ್‌ಜೆಎಂ ಬ್ಯಾಂಕ್‌ನಲ್ಲಿ 12.44 ಕೋಟಿ ರು. ಸೇರಿ ಒಟ್ಟು 32.27 ಕೋಟಿಯಷ್ಟಿತ್ತು.