ಮುರುಘಾ ಶ್ರೀಗಳ ವಿರುದ್ಧ ಆರೋಪಕ್ಕೆ ಪರ- ವಿರೋಧ ಪ್ರತಿಭಟನೆ, ಹೇಳಿಕೆ -ಪ್ರತಿ ಹೇಳಿಕೆ ಬರುತ್ತಲೇ ಇವೆ.ಇದರ ಬೆನ್ನಲ್ಲೇ ಮುರುಘಾ ಶರಣರಿಗೆ ಮತ್ತೊಂದು ಶಾಕ್ ಕೊಡಲಾಗಿದೆ.
ಚಿತ್ರದುರ್ಗ, (ಸೆಪ್ಟೆಂಬರ್. 04): ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಅವರ ಬಂಧನದ ಬೆನ್ನಲ್ಲೇ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನ ಹಾಗೂ ವಿಶ್ವಸ್ಥ ಸಮಿತಿಯ ಸದಸ್ಯತ್ವದಿಂದ ಮುರುಘಾ ಶ್ರೀಗಳನ್ನು ಅಮಾನತು ಮಾಡಲಾಗಿದೆ.
ಟಿಪ್ಪು ಸುಲ್ತಾನ್‌ನ ವರ್ಣನೆ ಮಾಡಿದ್ದಕ್ಕೆ ಸ್ವಾಮೀಜಿಗೆ ಈ ಗತಿ: ಮುರುಘಾ ಶ್ರೀ ವಿರುದ್ಧ ಬಿಜೆಪಿ ಶಾಸಕ ಕಿಡಿ
ಶನಿವಾರ ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಈ ಕ್ರಮ ಜರುಗಿಸಲಾಗಿದೆ ಎಂದು ವಿಶ್ವಸ್ಥ ಸಮಿತಿ ಗೌರವ ಕಾರ್ಯದರ್ಶಿ ಪ್ರೊಫೆಸರ್ ಕೆ.ಇ. ರಾಧಾಕೃಷ್ಣ ಮಾಹಿತಿ ನೀಡಿದ್ದಾರೆ.
ಮಹಾಂತರುದ್ರ ಶ್ರೀ ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿ
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮಲೆ ಮುರುಘಾ ಶರಣರನ್ನು ಬಂಧನವಾಗಿದ್ದು, ಈ ವಿಚಾರ ಬರೀ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸದ್ದು ಮಾಡುತ್ತಿದೆ. ಶ್ರೀಗಳ ಪರ- ವಿರೋಧ ಪ್ರತಿಭಟನೆ, ಹೇಳಿಕೆ -ಪ್ರತಿ ಹೇಳಿಕೆ ಬರುತ್ತಲೇ ಇವೆ. ಇದರ ಬೆನ್ನಲ್ಲೇ ಹೆಬ್ಬಾಳದ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾದ ಮಹಾಂತ ರುದ್ರ ಸ್ವಾಮೀಜಿ ಅವರನ್ನು ಮುರುಘಾ ಮಠದ ಪ್ರಭಾರ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಇನ್ಮುಂದೆ ಮಠದಲ್ಲಿ ಪೂಜೆ ಕೈಂಕರ್ಯಗಳನ್ನ ಮಹಾಂತರುದ್ರ ಶ್ರೀ ಮಾಡಲಿದ್ದಾರೆ. ಅಲ್ಲದೇ ಇದೇ ತಿಂಗಳು ಸೆಪ್ಟೆಂಬರ್ 5ರಂದು ನಡೆಯಲಿರುವ ಸಾಮೂಹಿಕ ವಿವಾಹ ಮಹಾಂತರುದ್ರ ಶ್ರೀ ನೇತೃತ್ವದಲ್ಲಿ ನಡೆಯಲಿದೆ.
1981ರಿಂದಲೂ ಹೆಬ್ಬಾಳದ ಶಾಖಾ ಮಠದಲ್ಲಿ ಕಾರ್ಯ ನಿರ್ವಹಿಸಿರುವ ಮಹಾಂತ ರುದ್ರ ಸ್ವಾಮೀಜಿ ಅಪ್ಪಟ ಗೋಪ್ರೇಮಿ ಆಗಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿಯೂ ಇವರು ನಿಪುಣರಾಗಿದ್ದಾರೆ. ಸೇವಾ ಕೈಂಕರ್ಯಗಳು ಧಾರ್ಮಿಕ ವಿಧಿ ವಿಧಾನಗಳು, ಪೂಜೆ, ಪುನಸ್ಕಾರ, ಸತ್ಕಾರ, ಬಂದವರಿಗೆ ನೆರವಾಗುವುದು, ಶಿಕ್ಷಣ ಹೀಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿ ಆಗಿದ್ದಾರೆ.
ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ: ಬಸವರಾಜನ್ ವಿರುದ್ಧ ಮತ್ತೊಂದು ದೂರು