ನಾನು ಮುಂದೆಯೂ ಮುರುಘಾ ಮಠಕ್ಕೆ ಹೋಗಿ, ದರ್ಶನ ಮಾಡುವೆ: ಎಂ.ಬಿ.ಪಾಟೀಲ್‌

By Govindaraj S  |  First Published Sep 4, 2022, 4:45 AM IST

ಮರುಘಾಮಠದಲ್ಲಿ ಯಾರಿರುತ್ತಾರೆ, ಯಾರು ಇರಲ್ಲ ಎಂಬುದು ಮುಖ್ಯ ಅಲ್ಲ, ಮುರುಘಾಮಠ ಐತಿಹಾಸಿಕ ಮಠ. ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗಿ ಗದ್ದುಗೆ ದರ್ಶನ ಮಾಡುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.


ತುಮಕೂರು (ಸೆ.04): ತಾವು ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗಿ ಗದ್ದುಗೆ ದರ್ಶನ ಮಾಡುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶ್ರೀಗಳ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮುಂದೇನೂ ಮುರುಘಾ ಮಠಕ್ಕೆ ಹೋಗುವುದಾಗಿ ತಿಳಿಸಿದರು. ಚಿತ್ರದುರ್ಗ ಮುರುಘಾ ಮಠ ಬಹಳ ಐತಿಹಾಸಿಕ ಮಠ. 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ. ಅಲ್ಲಿ ಯಾರು ಇರುತ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ ಎಂದ ಅವರು ಜಯದೇವ ಸ್ವಾಮಿಗಳು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. 

ರಾಹುಲ್‌ ಗಾಂಧಿ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದಾರೆ. ಆ ಮಠಕ್ಕೆ ಎಲ್ಲಾ ಪಕ್ಷದವರು ಹೋಗಿದ್ದಾರೆ, ಮುಂದೆನೂ ಕೂಡ ಹೋಗುತ್ತಾರೆ ಎಂದರು. ಯಡಿಯೂರಪ್ಪ, ಅಮಿತ್‌ ಷಾ, ರಾಹುಲ್‌ ಗಾಂಧಿ ಒಳಗೊಂಡತೆ ನಾನು ಕೂಡ ಮಠಕ್ಕೆ ಹೋಗಿದ್ದೆ. ಮಠದಲ್ಲೇ ತಂಗಿದ್ದೆ, ಮುಂದೆನೂ ಕೂಡ ಮಠಕ್ಕೆ ಹೋಗುವುದಾಗಿ ತಿಳಿಸಿದರು. ಈಗ ಸ್ವಾಮೀಜಿಯವರದ್ದು ಪ್ರಕರಣ ಕೋರ್ಚ್‌ನಲ್ಲಿದೆ. ಕೋರ್ಚ್‌ನಲ್ಲಿ ತನಿಖೆಯಾಗುತ್ತಿದೆ. ಸತ್ಯಾಂಶ ಹೊರಗೆ ಬರಲಿದ್ದು ತಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು. ಮೋದಿ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಕೊಟ್ಟು ಜನರನ್ನು ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ ಅವರು ಸಿದ್ದರಾಮಯ್ಯನವರ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ 15ರಿಂದ 20 ಲಕ್ಷ ಜನರಿದ್ದರು ಎಂದರು.

Tap to resize

Latest Videos

ಸಾವರ್ಕರ್‌ ಬದಲು ಚನ್ನಮ್ಮ, ರಾಯಣ್ಣರ ಯಾತ್ರೆ ಮಾಡಲಿ: ಎಂ.ಬಿ.ಪಾಟೀಲ್‌

ನಿನ್ನೆಯ ಕಾರ್ಯಕ್ರಮಕ್ಕೆ ಸರ್ಕಾರ ಅಫೀಶಿಯಲ್‌ ಆಗಿ ನೋಡಲ್‌ ಆಫೀಸರ್‌ನ ನೇಮಕ ಮಾಡಿ ಜನ ಸೇರಿಸಿದ್ದಾರೆ. ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಒ, ತಾಪಂ, ಜಿ.ಪಂ ಅಧಿಕಾರಿಗಳ ಮೂಲಕ ಜನ ಸೇರಿದ್ದಾರೆ. ಒತ್ತಾಯ ಪೂರ್ವಕವಾಗಿ ಸರ್ಕಾರದ ಹಣದಲ್ಲಿ ಜನ ಸೇರಿಸಿದ್ದಾರೆ. ಅಭಿಮಾನಕ್ಕೆ ಬಂದಿಲ್ಲ, ಗ್ರಾಮ ಪಂಚಾಯ್ತ ಪಿಡಿಒಗಳ ಮೂಲಕ ಊಟ, ಹಣ ನೀಡಿ ಜನರನ್ನು ಕರೆ ತಂದಿದ್ದಾರೆ. ಸರ್ಕಾರದ ಹಣ ಬಳಸಿ ಜನ ಸೇರಿಸಿದ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಪಂಚಮಸಾಲಿ 2 ಎ ಹೋರಾಟ ವಿಚಾರ ಪಂಚಮಸಾಲಿ ಸಮುದಾಯ ಸಣ್ಣ ಹಿಡುವಳಿದಾರರಿದ್ದಾರೆ. ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕೆಂದು ಹೋರಾಟ ಮಾಡ್ತಾರೆ. ಅದಕ್ಕೆ ನಾನು ಬೆಂಬಲ ನೀಡಿದ್ದೇನೆ, ಅವರಿಗೆ ನ್ಯಾಯ ಸಿಗಬೇಕು. ಪಂಚಮಸಾಲಿ ಸಮುದಾಯ ಸಣ್ಣ ಹಾಗೂ ಮಳೆ ಆಶ್ರಿತ ಕೃಷಿಕರು. ಅವರಿಗೆ 2ಎ ಸಿಗಬೇಕು, ಇದು ನ್ಯಾಯಯುತ ಬೇಡಿಕೆ. ಅವರಿಗೆ 2ಎ ಸಿಗಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯ, ಪಕ್ಷದಲ್ಲ ಎಂದರು.

Vijayapura: ರೈತರಿಗೆ ಆಗ್ತಿರೋ ಅನ್ಯಾಯ ಬಟಾಬಯಲು ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್

ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿ ಅಂತ ಘೋಷಿಸಲಿ: ಯಡಿಯೂರಪ್ಪನವರನ್ನು ಮತ್ತೇ ಮುಖ್ಯಮಂತ್ರಿ ಮಾಡುತ್ತಾರಾ ಎಂದ ಅವರು ಅವರನ್ನು ಪೂರ್ಣಾವಧಿ ಸಿಎಂ ಆಗಲು ಬಿಡಲಿಲ್ಲ ಎಂದರು. ಈಗ ಯಡಿಯೂರಪ್ಪ ನವರ ಮೇಲೆ ಪ್ರೀತಿ ಬಂದಿದೆ. ಹಾಗಾದರೆ ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿ ಅಂತ ಘೋಷಿಸಲಿ. ಅಥವಾ ಈಗಲೇ ಮುಖ್ಯಮಂತ್ರಿ ಮಾಡಲಿ ಎಂದರು. ಜನರು ದಡ್ಡರಲಿಲ್ಲ, ಜನರು ತಿಳಿದುಕೊಂಡಿದ್ದಾರೆ. ನಾನು ಯಡಿಯೂರಪ್ಪನವರ ಅಭಿಮಾನಿ ಇದ್ದೀನಿ. ಯಡಿಯೂರಪ್ಪನವರನ್ನು ಉಪಯೋಗಿಸುತ್ತಿದ್ದಾರೆ. ಅವರು ಕೆಳಗೆ ಕುಸಿದಿದ್ದಾರೆ. ಯಡಿಯೂರಪ್ಪ ಸಹಾಯದಿಂದ ಮೇಲೆ ಬರಲು ಯತ್ನಿಸುತ್ತಿದ್ದಾರೆ ಎಂದರು.

click me!