ಅಮರನಾಥದಲ್ಲಿ ಮೇಘಸ್ಫೋಟ ಚಿಕ್ಕಮಗಳೂರು ಜಿಲ್ಲೆಯ 60 ಜನರ ತಂಡ ಸುರಕ್ಷಿತ

By Suvarna News  |  First Published Jul 9, 2022, 8:57 PM IST

* ಅಮರನಾಥ ಗುಹೆಯ ಬಳಿ ಮೇಘಸ್ಫೋಟ
* ಚಿಕ್ಕಮಗಳೂರು ಜಿಲ್ಲೆಯ 60 ಜನರ ತಂಡ ಸುರಕ್ಷಿತ
* ಪ್ಯಾಕೇಜ್ ಮೂಲಕ ಯಾತ್ರೆ ತೆರಳಿದ್ದ 60 ಜನರ ತಂಡ


ಚಿಕ್ಕಮಗಳೂರು, (ಜುಲೈ.09): ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿ ಮೇಘಸ್ಫೋಟದಿಂದ ಹಲವು ಸಾವನ್ನಪ್ಪಿದ್ದಾರೆ. ಇನ್ನೂ ಬಹಳಷ್ಟು ಜನರು ಕಾಣೆಯಾಗಿದ್ದಾರೆ. ಇದರಿಂದ ಕಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಇನ್ನು ಅಮರನಾಥ ಯಾತ್ರೆಗೆ ತೆರಳಿದ್ದ  ಚಿಕ್ಕಮಗಳೂರು ಜಿಲ್ಲೆಯ 60 ಜನರ ತಂಡ ಸುರಕ್ಷಿತವಾಗಿದ್ದಾರೆ. ಅಮರನಾಥ ಯಾತ್ರೆಗೆ ಒಟ್ಟು 60ಜನರ ತಂಡ ತೆರಳಿದ್ದು, ಅದರಲ್ಲಿ ಜಮ್ಮುಕಾಶ್ಮೀರದಿಂದ ಇಬ್ಬರು ಅಮರನಾಥದೇಗುಲಕ್ಕೆ ಹೊರಟ್ಟಿದ್ದವರು. ಯಾತ್ರೆ ಮೂರು ದಿನಗಳ ಕಾಲ ತಾತ್ಕಲಿಕವಾಗಿ ಸ್ಥಗಿತಗೊಂಡಿರುವ ಮಾಹಿತಿ ತಿಳಿದ ಇಬ್ಬರು ಯುವಕರು ಜುಮ್ಮುಕಾಶ್ಮೀರಕ್ಕೆ ಹಿಂದಿರುಗಿದ್ದಾರೆ.

Tap to resize

Latest Videos

Amarnath Yatra: ಕರ್ನಾಟಕದ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ: ಸಿಎಂ ಬೊಮ್ಮಾಯಿ!

ಪ್ಯಾಕೇಜ್ ಮೂಲಕ ಯಾತ್ರೆ ತೆರಳಿದ್ದವರು ಸುರಕ್ಷಿತ 
ಅಮರನಾಥ ಯಾತ್ರೆಗೆ ಪ್ಯಾಕೇಜ್ ಮೂಲಕ ತೆರಳಿದ್ದ ಎಲ್ಲರೂ ಸುರಕ್ಷಿತವಾಗಿದ್ದು. ಮೂರು ದಿನಗಳ ಕಾಲ ಸ್ಥಗಿತಗೊಳಿಸಿರುವುದರಿಂದ ಚಿಕ್ಕಮಗಳೂರಿನಿಂದ ಹೋದವರು ಬೇರೆ ಸ್ಥಳಗಳ ದರ್ಶನಕ್ಕೆ ತೆರಳುತ್ತಿದ್ದಾರೆ. ಭರತ್ ಮತ್ತು ಮನು ಎನ್ನುವರು ನೇರವಾಗಿ ವಿಮಾನದಲ್ಲಿ ಶ್ರೀನಗರಕ್ಕೆ ತೆರಳಿದ್ದರು. ಉಳಿದ 60ಕ್ಕೂ ಹೆಚ್ಚು ಜನರು ಏಜೆನ್ಸಿಗಳ ಮೂಲಕ ಅಮರನಾಥಯಾತ್ರೆಗೆ ತೆರಳಿದ್ದು, ಲಾಲ್ತಾಳ್ನಲ್ಲಿ ಉಳಿದುಕೊಂಡಿದ್ದರು. 

ಪ್ರತ್ಯೇಕವಾಗಿ ತೆರಳಿದ ಇಬ್ಬರು ಇನ್ನೇನು ಅಮರನಾಥದೇವಾಲಯಕ್ಕೆ ತೆರಳಲು ಸಿದ್ಧತೆಮಾಡಿಕೊಂಡಿದ್ದು, ಯಾತ್ರೆಯು ತಾತ್ಕಲಿಕವಾಗಿ ಸ್ಥಗಿತಗೊಂಡಿರುವ ಮಾಹಿತಿ ಪಡೆದ ಭರತ್ ಮತ್ತು ಮನು ವಾಪಸ್ಶ್ರೀನಗರಕ್ಕೆ ಬಂದು ವೈಷ್ಣವದೇವಿ ದರ್ಶನ ಪಡೆಯಲು ಮುಂದಾಗಿದ್ದಾರೆ.ಪ್ಯಾಕೇಜ್ನಡಿ ತೆರಳಿದವರು ಏಜೆನ್ಸಿಯವರ ಮೂಲಕ ಬೇರೆ ಸ್ಥಳಗಳಿಗೆ ತೆರಳು ಸಾಧ್ಯತೆಗಳಿವೆ.

 ಒಟ್ಟಾರೆಯಾಗಿ ಅಮರನಾಥಕ್ಕೆ  ತೆರಳದೆ ಇದ್ದುದರಿಂದ  ಜಿಲ್ಲೆಯ ಜನರು ಸುರಕ್ಷಿತವಾಗಿದ್ದಾರೆ.ದಕ್ಷಿಣ ಕಾಶ್ಮೀರದ ಹಿಮಾಲಯ ತಪ್ಪಲಿನ ಪ್ರಸಿದ್ಧ ಯಾತ್ರಸ್ಥಳ ಅಮರನಾಥದಲ್ಲಿ ನಿನ್ನೆ ಸಂಜೆ ಮೇಘ ಸ್ಫೋಟಗೊಂಡಿದ್ದು, ಮಳೆಸುರಿದಿದ್ದರಿಂದ ನೀರು ನುಗ್ಗಿದ್ದ 25ಕ್ಕೂ ಹೆಚ್ಚು ಟೆಂಟ್ಗಳ ನಾಶವಾಗಿವೆ.

ಸಿಎಂ ಹೇಳಿದ್ದೇನು?
ಪ್ರಾಥಮಿಕ ಮಾಹಿತಿಯ ಪ್ರಕಾರ ನೂರಕ್ಕೂ ಹೆಚ್ಚು ಜನ ಕನ್ನಡಿಗರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದ ಕನ್ನಡಿಗರು ಸುರಕ್ಷಿತವಾಗಿದ್ದು, ಬೇರೆ ಯಾವ ಅಹಿತಕರ ಸುದ್ದಿಯೂ ಬಂದಿಲ್ಲ. ಅಲ್ಲಿಯ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ರಕ್ಷಣಾ ಕಾರ್ಯಕ್ಕಾಗಿ  ಸಹಾಯವಾಣಿಯನ್ನೂ ಸಹ ತೆರೆಯಲಾಗಿದೆ. ಈಗಾಗಲೇ 15-20 ಜನ ಕರೆ ಮಾಡಿ ತಾವು ಸಿಲುಕಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗುವುದು ಎಂದು ಎಂದಿದ್ದಾರೆ.

ಸಹಾಯವಾಣಿಯ ವಿವರ:
ಎನ್.ಡಿ.ಆರ್.ಎಫ್: 011-23438252, 011-23438253
ಕಶ್ಮೀರ್ ಡಿವಿಷನಲ್ ಹೆಲ್ಪ್ ಲ್ಲೈನ್: 0914- 2496240
ದೇವಸ್ಥಾನ ಮಂಡಳಿಯ ಸಹಯಾವಾಣಿ: 0194-2313149
ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676

click me!