ವಿರೋಧದ ಮಧ್ಯೆಯೂ ಹೆಗ್ಡೆಗೆ ಮಣೆ ಹಾಕಿದ ಕಾಂಗ್ರೆಸ್? ಬಿಜೆಪಿಯಲ್ಲಿ ಶೋಭಾ-ಸಿಟಿ ರವಿ ಜಗಳದ ಮಧ್ಯೆ ಮತ್ತೆರಡು ಹೆಸ್ರು ಎಂಟ್ರಿ!

By Suvarna NewsFirst Published Mar 12, 2024, 9:57 PM IST
Highlights

ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಟಿಕೆಟ್‌ಗೆ ಕಳೆದೊಂದು ತಿಂಗಳಿಂದ ಎರಡು ಪಕ್ಷದ ಕಾರ್ಯಕರ್ತರು ಭಾರೀ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ವಿರೋಧದ ಮಧ್ಯೆಯೂ ಹೆಗ್ಡೆಗೆ ಮಣೆ ಹಾಕಿದ್ದಾರೆ ಇತ್ತ ಬಿಜೆಪಿಯಲ್ಲಿ ಸಿಟಿ ರವಿ, ಶೋಭಾ ಕರಂದ್ಲಾಜೆ ಜೊತೆಗೆ ಮತ್ತೆರಡು ಅಭ್ಯರ್ಥಿಗಳು ಎಂಟ್ರಿಯಾಗಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಮಾ.12): ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಟಿಕೆಟ್‌ಗೆ ಕಳೆದೊಂದು ತಿಂಗಳಿಂದ ಎರಡು ಪಕ್ಷದ ಕಾರ್ಯಕರ್ತರು ಭಾರೀ ಕಸರತ್ತು ನಡೆಸಿದ್ದಾರೆ. 

ಬಿಜೆಪಿಯಲ್ಲಿದ್ದ ಹೆಗ್ಡೆಗೆ ಕಾಂಗ್ರೆಸ್ಸಿಗೆ ಕರೆ ತಂದು ಟಿಕೆಟ್ ಕೊಡೋದಕ್ಕೆ ಕೈ ಕಾರ್ಯಕರ್ತರು ವಿರೋಧಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳ್ಳಿ ನಾನು ಅಭ್ಯರ್ಥಿ ಎಂದಿದ್ರು. ಆದ್ರೆ, ಸರ್ಕಾರ ಅಂಶುಮಂತ್ ಗೆ ಕಾಡಾ ನಿಗಮ ಮಂಡಳಿ ನೀಡಿ ಸೈಲೆಂಟ್ ಮಾಡಿತು. ಸುಧೀರ್ ಬೆಂಬಲಿಗರು ಕೊಪ್ಪ-ಶೃಂಗೇರಿಯಲ್ಲಿ ಮೇಲಿಂದ ಮೇಲೆ ಸಭೆ ಮಾಡಿ ಹೆಗ್ಡೆ ವಿರುದ್ಧ ಕಿಡಿಕಾರಿದರು. 

ತಮ್ಮ ಮಕ್ಕಳ ಸಲುವಾಗಿ ರಾಜಕಾರಣ ಮಾಡಿದ್ರೆ ನಾವು ಗಂಟೆ ಬಾರಿಸ್ಕೊಂಡು ಕೂಡಬೇಕಾ?: ಮೂವರು ನಾಯಕರ ವಿರುದ್ಧ ಯತ್ನಾಳ್ ಕಿಡಿ

ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರ ವಿರೋಧದ ಮಧ್ಯೆಯೂ ಹೆಗ್ಡೆಗೆ ಮಣೆ ಹಾಕಿದ್ದಾರೆ. ಆದರೆ ಇದೀಗ ಬಿಜೆಪಿ ಪಕ್ಷದಲ್ಲಿಲ್ಲ ಹೆಗ್ಡೆ ಕಾಂಗ್ರೆಸ್ ಸೇರಿದ್ದಾರೆ. ಹಾಗಾಗಿ, ಶೋಭಕ್ಕನಿಗಿರುವ ಡ್ಯಾಮೇಜನ್ನ ನಾವೇ ಇಮೇಜ್ ಮಾಡ್ಕೋಳ್ಳೋಣ ಅಂತಿದ್ದ ಕಾಂಗ್ರೆಸ್ ಆಸೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಹೈಕಮಾಂಡ್ ತಣ್ಣೀರೆರಚಲು ಮುಂದಾಗಿದೆ. ಅವಳಿ ಜಿಲ್ಲೆಗೆ  ಶೋಭಕ್ಕನ ಜಾಗಕ್ಕೆ ಅಚ್ಚರಿಯಾಗಿ ಹೊಸ ಅಭ್ಯರ್ಥಿ ಎಂದು ಹೇಳಲಾಗ್ತಿದೆ. 
                                                                                                                                                                                                                                   ಇಬ್ಬರ ಜಗಳದಲ್ಲಿ ಕೋಟಾ ಯಾರಿಗೆ ? 

ಲೋಕಸಭಾ ಚುನಾವಣೆಯ ಕಾವು ಪಡೆಯುತ್ತಲೇ ಶುರುವಾಗಿರುವ ಗೋಬ್ಯಾಕ್ ಶೋಭಕ್ಕ ಅಭಿಯಾನ ಇಂದಿಗೂ ನಿಂತಿಲ್ಲ. ಟಿಕೆಟ್ ಅನೌನ್ಸ್ ಆಗೋತನ್ಕ ನಿಲ್ಲೋದು ಕಾಣ್ತಿಲ್ಲ. ಅವರನ್ನ ಬಿಟ್ಟು ಯಾರಿಗಾದ್ರು ಕೊಡಿ ಅಂತ ದೇವ್ರ ಮೇಲೆ ಹೂ ತಪ್ಪುದ್ರು ಆಕ್ರೋಶ-ಅಭಿಯಾನ ಮಾತ್ರ ನಿಲ್ತಿಲ್ಲ. ಈ ಮಧ್ಯೆ ಎಂಎಲ್‌ಎ ಐದು ಕ್ಷೇತ್ರ ಸೋತಿರೋ ಕಾಫಿನಾಡ ಬಿಜೆಪಿ ಭವಿಷ್ಯಕ್ಕೆ  ಸಿಟಿ ರವಿಗೆ ಟಿಕೆಟ್ ಕೊಡ್ಬೇಕು ಅಂತ ಒಂದು ವರ್ಗ ದುಂಬಾಲು ಬಿದ್ದಿದೆ. ಶೋಭಕ್ಕನಿಗೆ ವಿರೋಧ ಗಮನಿಸಿದ ಹೈಕಮಾಂಡ್ ಶೋಭಾಕ್ಕನಿಗೆ ಕ್ಷೇತ್ರ ಬದಲಾವಣೆಯ ಮಾತು ಕೇಳಿ ಬರ್ತಿದೆ. ಆದ್ರೆ, ಈ ಮಧ್ಯೆ ಸಿ.ಟಿ.ರವಿ-ಶೋಭಾ ಕರಂದ್ಲಾಜೆ ಹೆಸ್ರಲ್ಲಿ ಮಾಜಿ ಸಚಿವರುಗಳಾದ ಡಿ.ಎನ್.ಜೀವರಾಜ್ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಹೆಸರು ಕೇಳಿ ಬರ್ತಿದೆ. ಆದ್ರೆ, 

ಗ್ಯಾರಂಟಿ ಸಮಾವೇಶದಲ್ಲಿ ವೇದಿಕೆ ಮೇಲೆ ಸಚಿವ ಹೆಚ್‌ಸಿ ಮಹದೇವಪ್ಪಗೆ ಮುಖಭಂಗ!

ಉಡುಪಿಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ, ಕಾಫಿನಾಡಿನ ಬಿಜೆಪಿಗರು ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ಭವಿಷ್ಯಕ್ಕಾಗಿ ಸಿ.ಟಿ.ರವಿ ಅಥವ ಡಿ.ಎನ್.ಜೀವರಾಜ್‍ಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಾರೆ, ಕಾಫಿನಾಡು-ಕೃಷ್ಣನೂರಿನ ಪಾರ್ಲಿಮೆಂಟ್ ರಾಜಕೀಯ ಉಮೇದುವಾರಿಕೆಗಾಗಿ ಕೈ-ಕಮಲದ ನಾಯಕರು ಕಿತ್ತಾಡ್ತಿದ್ದರು. ಆದ್ರೆ ಕೈ ನಾಯಕರು ಮಾತ್ರ ಕಾರ್ಯಕರ್ತರ ವಿರೋಧದ ಮಧ್ಯೆಯೂ ಹೆಗ್ಡೆಗೆ ಮಣೆ ಹಾಕೋದು ನಿಚ್ಚಳವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು  ಹೇಗೆ ಸ್ವೀಕರಿಸ್ತಾರೋ ಗೊತ್ತಿಲ್ಲ. ಕಾಂಗ್ರೆಸ್ಸಿನ ಕದನ ಮಗೀತು. ಬಿಜೆಪಿಯದ್ದು ಇನ್ನೂ ನಡೆಯುತ್ತಲೇ ಇದೆ. ಶೋಭಾ, ಕೋಟಾ, ಸಿ..ಟಿ.ರವಿ, ಜೀವರಾಜ್ ಮಧ್ಯೆ ಯಾರಿಗೆ ಟಿಕೆಟ್ ಕೊಡ್ತಾರೋ ಅನ್ನೋದು ಬಿಜೆಪಿಗರಿಗೆ ತಲೆಬಿಸಿಯಾಗಿದೆ. ಹೈಕಮಾಂಡ್ ಯಾರಿಗೆ ಕೊಡುತ್ತೋ... ಏನೇನಾಗುತ್ತೋ ಅನ್ನೋದು ಉಡುಪಿಯ ಶ್ರೀಕೃಷ್ಣ-ಶೃಂಗೇರಿಯ ಶಾರದಾಂಬೆಗೆ ಗೊತ್ತು.

click me!