ದರ್ಗಾ ಲೈಟ್ ವಿವಾದ: ಚಿಕ್ಕಮಗಳೂರಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ, ಕೆಲಕಾಲ ಬಿಗುವಿನ ವಾತಾವರಣ!

By Suvarna News  |  First Published Jan 3, 2025, 9:33 PM IST

ಚಿಕ್ಕಮಗಳೂರಿನ ದರ್ಗಾದಲ್ಲಿ ಅಕ್ರಮ ಲೈಟ್ ಅಳವಡಿಕೆ ಮತ್ತು ಕಾಮಗಾರಿ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಮುಖಂಡರು ನಗರಸಭೆ ಕಮಿಷನರ್ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರ ನಿಯೋಜನೆಯೊಂದಿಗೆ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಜ.3): ದರ್ಗಾದಲ್ಲಿ ಅಕ್ರಮ ಲೈಟ್ ವಿವಾದ ಕೆಲ ಕಾಲ ಕಾಫಿನಾಡು ಚಿಕ್ಕಮಗಳೂರು ನಗರವನ್ನೇ ಉದ್ವಿಗ್ನ ಗೊಳಿಸಿತ್ತು..ವಿವಾದಿತ ಸ್ಥಳದಲ್ಲಿ ಕಾಮಗಾರಿ ಮಾಡ್ತಿದ್ದಾರೆ, ಅಕ್ರಮವಾಗಿ ವಿದ್ಯುತ್  ಪಡೆದಿದ್ದಾರೆ ಎಂದು ಹಿಂದೂ ಮುಖಂಡರು ಸ್ಥಳದಲ್ಲಿ  ಜಮಾಯಿಸಿದರು. ಇದರಿಂದ‌ ಕೆಲ ಹೊತ್ತು ಬಿಗುವಿ‌ನ ವಾತಾವರಣ  ನಿರ್ಮಾಣವಾಗಿತ್ತು.ನಗರಸಭೆಯ ಕಮಿಷನರ್, ಅಧ್ಯಕ್ಷರ ವಿರುದ್ದ ಕಿಡಿಕಾರಿದ ಮುಖಂಡರು  ಪ್ರತಿಭಟನೆ ನಡೆಸಿದರು. ತದನಂತರ ಅಧ್ಯಕ್ಷರು, ಆಯುಕ್ತರು ಸಭೆ ನಡೆಸಿ ಕ್ರಮ ಕೈಗೊಳ್ಳೋ ಭರವಸೆ ನೀಡಿದ ನಂತರ ಪರಿಸ್ಥಿತಿ ಕೊಂಚ ಶಾಂತವಾಗಿದ್ದರೂ  ಬೂದಿ ಮುಚ್ಚಿದ ಕೆಂಡದಂತಿದೆ.

Tap to resize

Latest Videos

ಕಮಿಷನರ್ ವಿರುದ್ದ ಧಿಕ್ಕಾರ, ಪ್ರತಿಭಟನೆ

ಕಾಫಿನಾಡು ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರೋ ದರ್ಗಾ  ಮುಂದೆ ನಗರಸಭೆಯ ಕಮಿಷನರ್ ವಿರುದ್ದ ದಿಕ್ಕಾರ ಕೂಗಿ ಹಿಂದೂ ಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.ಇನ್ನೇನೂ ಸೂರ್ಯ ಮುಳುಗೋ ಹೊತ್ತು..ವಿವಾದಿತ ಜಾಗವಾದ ದರ್ಗಾದಲ್ಲಿ ಲೈಟ್ ಹತ್ತುತ್ತಿದ್ದಂತೆ ಸ್ಥಳೀಯರ ಯುವಕರು ಹಾಗೂ ಹಿಂದೂ ಮುಖಂಡರು ದರ್ಗಾದ ಮುಂದೆ ಜಮಾಯಿಸಿದ್ರು.ಇದು ಅನಧಿಕೃತ ವಿದ್ಯುತ್‌ ಪಡೆದಿರೋದು ದರ್ಗಾದಲ್ಲಿ ಟೈಲ್ಸ್ ಹಾಕೋ ಕಾಮಗಾರಿ ನಡೆಯುತ್ತಿದೆ ಎಂದು ಅಕ್ರೋಶ ಹೊರಹಾಕಿದ್ರು..ಸ್ಥಳಕ್ಕೆ ನಗರಭೆಯ ಅಧಿಕಾರಿಗಳು ಅಗಮಿಸುವಂತೆ ಅಗ್ರಹ ಕೇಳಿ ಬಂತು..ಸ್ಥಳಕ್ಕೆ ಬಂದ ನಗರಸಭೆಯ ಕಮಿಷನರ್ ವಿರುದ್ದ ಹರಿಹಾಯುತ್ತಿದ್ದಂತೆ ಅಲ್ಲಿಂದ ತೆರಲು ನಗರಸಭೆ ಆಯುಕ್ತರು ವಾಹನದಲ್ಲಿ ಮುಂದಾದರು, ಆಗ  ವಾಹನವನ್ನು ಬೆನ್ನೆತ್ತಿದ ಯುವಕರು  ಕಾರ್  ತಡೆದು ವಾಪಸ್ಸು ಕರ್ಕೊಂಡು ಬಂದ್ರು, ದರ್ಗಾದ ಜಾಗದಲ್ಲಿ ಮಾತಿನ ಚಕಮಕಿಯನ್ನು  ನಡೆಸಿದರು.ಯುವಕರಿಗೆ ಸ್ಥಳೀಯ ನಗರಸಭೆಯ ಸದಸ್ಯರಾದ ಮಧುರಾಜ ಅರಸ್ ಕೂಡ ಸಾಥ್ ನೀಡಿದರು.

ಚಿಕ್ಕಮಗಳೂರು: ಬಾಬಾ ಬುಡನ್‌ಗಿರೀಲಿ ಫಾತೇಹಗೆ ನಿರಾಕರಣೆ

ಸ್ಥಳದಲ್ಲಿ ಪೊಲೀಸರ ನಿಯೋಜನೆ : 

 ಇನ್ನೂ ವಿವಾದಿತ ಜಾಗ ಗೆಜೆಟ್ ನೋಟಿಫೀಕೆಷನ್ ನಲ್ಲಿ ನೀಡಲಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಇದೇ ರೀತಿ ವಿವಾದವಾಗಿದ್ದಾಗ ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಡಳಿತ ಸೂಚಿಸಿತ್ತು.ಇದರ ನಡುವೆ ಇದೀಗ ಈಗ ಮತ್ತೇ ಅಲ್ಲಿ ಅನಧಿಕೃತ ಲೈಟ್ ಪಡೆದಿದ್ದಾರೆ. ‌ಟೈಲ್ಸ್ ಹಾಕೊ ಕಾಮಗಾರಿ ನಡೆಸ್ತಾ ಇದ್ದಾರೆ ಅಂತಾ ಅರೋಪಿಸಿ ಪ್ರತಿಭಟನೆ ನಡೆಸಿದರು.ಪರಿಸ್ಥಿತಿ ಕೈಮೀರೋ ಸಾಧ್ಯತೆ ಹೆಚ್ಚಾಗ್ತಿದ್ರಿಂದ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಯಿತು. ಡಿ ವೈಎಸ್ಪಿ ಸ್ಥಳದಲ್ಲಿ ಮೊಖಂ ಹೂಡಿದ್ರು. ಈಗಲೇ ಲೈಟ್ ಬಂದ್ ಮಾಡಿ ಕೇಸ್ ದಾಖಲಿಸುವಂತೆ ಅಗ್ರಹಿಸಿದ್ರು. ನಗರಸಭೆಯ ಅಧ್ಯಕ್ಷೆ ಹಾಗೂ ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕೈಗೊಳ್ಳೋ ಭರವಸೆ ನೀಡಲಾಯ್ತ..ಒಟ್ಟಾರೆ ವರ್ಷಕ್ಕೊಮ್ಮೆ ಈ ದರ್ಗಾದ ಜಾಗದಲ್ಲಿ ವಿವಾದವಂತೂ ನಡೆಯುತ್ತಲೇ‌ ಇದೆ. ಹಿಂದೂ ಮುಖಂಡ್ರು ಈ ಜಾಗಕ್ಕೆ ದಾಖಲೆ ಯೇ ಇಲ್ಲ ಅಂತಿದ್ದಾರೆ. ನಗರಸಭೆ ಯಾವುದೇ ಕಾಮಗಾರಿಗೂ ಅನುಮತಿ ನೀಡಿಲ್ಲ ಅಂತಿದ್ದಾರೆ. ಕೆಲ ಮುಸ್ಲಿಂಮುಖಂಡರು ದರ್ಗಾದ ಪರವಾಗಿ ದಾಖಲೆ ಇದೆ ಎನ್ನುತ್ತಿದ್ದಾರೆ..ಮತ್ತೆ ಈಗ ಆ ಜಾಗದಲ್ಲಿ ಲೈಟ್ ಹಾಗೂ ಕಾಮಗಾರಿ ಮಾಡಲಾಗ್ತಿರೋ ಅರೋಪ ಕೇಳಿಬಂದಿದೆ. ಸ್ಥಳದಲ್ಲಿ ಪೊಲೀಸರ ನಿಯೋಜಿಸಿ ಅಹಿತರಘಟನೆ ‌ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

click me!