- ಬೆಂಗಳೂರಲ್ಲಿ ಮೇ 17 ಕ್ಕೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ
- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
- ಆರ್ ಸಿಹೆಚ್ ಪೋರ್ಟ್ಲ್ ಸಮಸ್ಯೆ ಬಗೆಹರಿಸಿಕೊಡಿ
ವರದಿ - ರವಿಕುಮಾರ್ ವಿ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ (ಮೇ. 12): ವಿವಿಧ ಬೇಡಿಕೆಗಳ (Demands) ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳ ಮೇ 17 ರಂದು ಬೆಂಗಳೂರಿನ ಪ್ರೀಢಂ ಪಾರ್ಕ್ ನಲ್ಲಿ (freedom Park) ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘಟನೆ (Karnataka State Asha Workers association) ವತಿಯಿಂದ ಬೃಹತ್ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘದ ಹನುಮೇಶ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವೇತನ ಹೆಚ್ಚಳ (Salary Hike) ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸಭೆ ಸೇರಿ ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಚರ್ಚೆ ನಡೆಸಿದರು. ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ಇದ್ದ ಮಾಸಿಕ ಪ್ರೋತ್ಸಾಹ ಧನವನ್ನ ಕಳೆದ ಬಜೆಟ್ ನಲ್ಲಿ 1 ಸಾವಿರ ರೂಪಾಯಿ ಹೆಚ್ಚಳ ಮಾಡಿ 5 ಸಾವಿರ ರೂ ಮಾಡಿದೆ ಆದ್ರೂ ಈಗಲೂ 4 ಸಾವಿರ ರೂಪಾಯಿ ಮಾತ್ರ ಬರ್ತಾ ಇದೆ. ಮತ್ತೊಂದೆಡೆ ಕೇಂದ್ರ ಸರ್ಕಾರದಿಂದ ಕೆಲಸಕ್ಕೆ ತಕ್ಕಂತೆ ಮಾಸಿಕವಾರುವ ವಿವಿಧ ಯೋಜನೆಗಳಡಿ ಬರುವ ಹಣ ಸಹ ಸಕಾಲಕ್ಕೆ ಬರ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ಮೇ 17ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಸರ್ಕಾರವನ್ನು ಒತ್ತಾಯ ಮಾಡಲು ಇಡೀ ರಾಜ್ಯಾದ್ಯಂತ ಸುಮಾರು 10 ಸಾವಿರ ಆಶಾ ಕಾರ್ಯಕರ್ತೆಯರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಈಗಾಗಲೇ ಪ್ರತಿಭಟನೆಯ ಬಗ್ಗೆ ರೂಪುರೇಷೆಗಳನ್ನು ಮಾಡುತ್ತಿದ್ದಾರೆ.
ಬಜೆಟ್ ನಲ್ಲಿ ಹೆಚ್ಚಳ ಮಾಡಿದ 1 ಸಾವಿರ ಬರ್ತಿಲ್ಲ: ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಸಿಎಂ ಬೊಮ್ಮಾಯಿ ಅವರು ಕಳೆದ ಬಜೆಟ್ ನಲ್ಲಿ 4 ಸಾವಿರ ರುಗಳಿದ್ದ ಪ್ರೋತ್ಸಾಹ ದನವನ್ನು 5 ಸಾವಿರಕ್ಕೆ ಹೆಚ್ಚಳ ಮಾಡಿದರು. ಆದ್ರೆ ಇದುವರೆಗೂ ಕೂಡ ಹೆಚ್ಚಳವಾದ 1 ಸಾವಿರ ಪ್ರೋತ್ಸಾಹ ಧನ ಸಿಗುತ್ತಿಲ್ಲ, ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಕಾಲ ಯೋಜನೆ ಅನುಷ್ಠಾನದಲ್ಲಿ ಅರ್ಧ ಶತಕ ಬಾರಿಸಿದ ಚಿಕ್ಕಬಳ್ಳಾಪುರ: ಆರ್.ಲತಾ
ಆರ್ ಸಿಹೆಚ್ ಪೋರ್ಟ್ಲ್ ಸಮಸ್ಯೆ ಬಗೆಹರಿಸಿಕೊಡಿ: ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿ ಆಶಾ ಕಾರ್ಯಕರ್ತೆಯರು ಮಾಡುವ ಕೆಲಸಕ್ಕೆ ಅನುಗುಣವಾಗಿ ಹಣವನ್ನು ನೀಡುತ್ತೆ. ಆದ್ರೆ ಇಷ್ಟು ದಿನ ಮ್ಯಾನ್ಯುಯುಲ್ ಮುಖಾಂತರ ಆಶಾ ಕಾರ್ಯಕರ್ತೆಯರು ತಾವು ಮಾಡಿದ ಕೆಲಸ ಕಾರ್ಯಗಳನ್ನ ಎಂಟ್ರಿ ಮಾಡಲಾಗುತ್ತಿತ್ತು.
6 ವರ್ಷವಾದ್ರೂ ಮುಗಿದಿಲ್ಲ, ಈ ಸಮಸ್ಯೆಯನ್ನು ವರದಿ ಮಾಡುವಂತೆ ಬಿಗ್-3ಗೆ ಜಡ್ಜ್ ಮನವಿ
ಆದರೆ, ಈಗ ಆರ್ ಸಿ ಎಚ್ ಪೋರ್ಟಲ್ ನಲ್ಲಿ ಅನ್ ಲೈನ್ ಮುಖಾಂತರ ಕಿರಿಯ ಆರೋಗ್ಯ ಮಹಿಳಾ ಅಧಿಕಾರಿಗಳು ಎಂಟ್ರಿ ಮಾಡಬೇಕಾಗುತ್ತೆ. ಆದ್ರೆ ಹಲವು ಕಡೆ ಡಾಟಾ ಎಂಟ್ರಿ ಅಪರೇಟರ್ ಗಳ ಕೊರತೆ, ತಾಂತ್ರಿಕ ಸಮಸ್ಯೆಗಳಿಂದ ಎಂಟ್ರಿ ಮಾಡಲಾಗುತ್ತಿಲ್ಲ. ಇದ್ರಿಂದ ಸಹಜವಾಗಿ ಆಶಾ ಕಾರ್ಯಕರ್ತೆಯರ ಕೆಲಸ ಮಾಡಿದ್ರೂ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವೇತನ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದಂತೆ ಕೇಂದ್ರ ಸರ್ಕಾರವೂ ಸಹ ನಿಗದಿತ ಪ್ರೋತ್ಸಾಹ ಧನ ನೀಡಬೇಕು ಅಂತ ಆಗ್ರಹಿಸಿದ್ದಾರೆ.