ಶಾಸಕ ಪ್ರದೀಪ್ ಈಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಅಹಿಂದ ಮತ್ತು ಬೆಂಗಲಿಗರು ಹಾಗೂ ಬಲಿಜ ಸಮುದಾಯದ ಮುಖಂಡರು ಒತ್ತಾಯಿಸಿದರು.
ಚಿಕ್ಕಬಳ್ಳಾಪುರ (ಜೂ.25) : ಶಾಸಕ ಪ್ರದೀಪ್ ಈಶ್ವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಅಹಿಂದ ಮತ್ತು ಬೆಂಗಲಿಗರು ಹಾಗೂ ಬಲಿಜ ಸಮುದಾಯದ ಮುಖಂಡರು ಒತ್ತಾಯಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಎಸ್.ಎಂ.ರಫೀಕ್, ಸಂಪುಟ ಪುನರ್ ರಚನೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಿಗೆ ಸ್ಥಾನ ನೀಡಬೇಕು ಎಂದರು.
ದಸಂಸ ಮುಖಂಡ ಸುಧಾ ವೆಂಕಟೇಶ್ ಮಾತನಾಡಿ, ಅಹಿಂದ ವರ್ಗದಡಿ ಬರುವ ಬಲಜಿಗ ಸಮುದಾಯದ ಏಕೈಕ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಸಚಿವರಾಗಿ ಮಾಡಬೇಕು ಎಂದು ಎಂದರು.
ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್‌ಗೆ! ಕಾರಣ ಇಲ್ಲಿದೆ
ಸಾಮಾಜಿಕ ನ್ಯಾಯಾದ ಪರ
ಯಾದವ ಸಮುದಾಯದ ಮುಖಂಡ ಕೆ.ಎಂ.ಮುನೇಗೌಡ ಮಾತನಾಡಿ, ಸಂಪುಟ ಪುನಾರಚನೆ ಆಗುವುದೆಂದು ಮಾಹಿತಿ ಇದೆ.ಇದು ನಿಜವೇ ಆಗಿದ್ದರೆ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಬೇಕು. ಪ್ರದೀಪ್ ಈಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದರು. ಬಲಿಜ ಮುಖಂಡ ಕೆ.ಎಲ್.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಅಹಿಂದ ವರ್ಗದ ಏಕೈಕ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇವೆ. ಸ್ವಾತಂತ್ರ ಬಂದಾಗಿನಿಂದ ಬಲಿಜ ಸಮುದಾಯದಿಂದ ಯಾರೂ ಮಂತ್ರೀ ಆಗಿಲ್ಲ ಎಂದರು.
ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ಚರ್ಚೆಗೆ ಬಿರುಸು!
ಪರಿಶಿಷ್ಟ ಪಂಗಡದ ಮುಖಂಡ ಗವಿರಾಯಪ್ಪ,ಕ್ರಿ ಶ್ಚಿಯನ್ ಮುಖಂಡ ಹೆನ್ರಿ ಪ್ರಸನ್ನ, ದಲಿತ ಮುಖಂಡ ವೆಂಕಟ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್,ನಾಯನಹಳ್ಳಿ ನಾರಾಯಣಸ್ವಾಮಿ, ಜೋಳದ ಕಿಟ್ಟಿ,ನರೇಂದ್ರಕುಮಾರ್ ಬಾಬು, ಎಸ್.ಪಿ.ಶ್ರೀನಿವಾಸ್, ಪಿ.ಎಂ.ರಘು,ನಾಗಭೂಷಣ್, ಕೋಲಾಟ್ಲು ರಾಮಚಂದ್ರ, ಕುಪೇಂದ್ರ, ಡಿಎಎಂ ಮಂಜುನಾಥ್,ಶಂಕರ,ಕುಬೇರ್ ಅಚ್ಚು, ಮತ್ತಿತರರು ಇದ್ದರು.ಸಿಕೆಬಿ-3 ಚಿಕ್ಕಬಳ್ಳಾಪುರದಲ್ಲಿ ಅಹಿಂದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.