ಎಲೆಕ್ಟ್ರೋಲ್ ಬಾಂಡ್‌ನಲ್ಲಿ ಹಗರಣ ನಡೆದಿದೆ; ರಾಜ್ಯದ ಬಿಜೆಪಿ ಸಂಸದರು ಉತ್ತರಿಸುವಂತೆ ಶಾಸಕ ಪ್ರದೀಪ್ ಈಶ್ವರ್ ಆಗ್ರಹ

By Ravi JanekalFirst Published Mar 17, 2024, 3:03 PM IST
Highlights

ಬಿಜೆಪಿ ವಿರುದ್ಧ ಎಲೆಕ್ಟ್ರೋಲ್ ಬಾಂಡ್ ಆರೋಪ ಕೇಳಿ ಬಂದಿದೆ. ಕರ್ನಾಟಕದ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಹಾಗೂ ನಿರ್ಮಲಾ ಸೀತಾರಾಮನ್  ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಆಗ್ರಹಿಸಿದರು.

ಬೆಂಗಳೂರು (ಮಾ.17): ಬಿಜೆಪಿ ವಿರುದ್ಧ ಎಲೆಕ್ಟ್ರೋಲ್ ಬಾಂಡ್ ಆರೋಪ ಕೇಳಿ ಬಂದಿದೆ. ಕರ್ನಾಟಕದ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಹಾಗೂ ನಿರ್ಮಲಾ ಸೀತಾರಾಮನ್  ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಉತ್ತರಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಆಗ್ರಹಿಸಿದರು.

ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 20 ಸಾವಿರಕ್ಕಿಂತ ಹೆಚ್ಚು ದೇಣಿಗೆ ಕೊಟ್ಟವರ ವಿವರ ಬಹಿರಂಗ ಮಾಡ್ಬೇಕಿತ್ತು. ಬಿಜೆಪಿ ಚುನಾವಣಾ ಬಾಂಡ್ ನಲ್ಲಿ ಸಾಕಷ್ಟು ಹಗರಣ ಆಗಿದೆ. ಒಬ್ಬ ಕಾಮನ್ ಮ್ಯಾನ್ ತೆರಿಗೆ ವಿಳಂಬ ಮಾಡಿದ್ರೆ ಫೈನ್ ಹಾಕ್ತಾರೆ. ಕೋಟಿ ಕೋಟಿ ದೇಣಿಗೆ ನೀಡಿದವರ ಬಗ್ಗೆ ವಿವರ ನೀಡಿಲ್ಲ. ತೆರಿಗೆ ಕಟ್ಟಿಲ್ಲ ಎಂದು ಆರೋಪಿಸಿದರು.

Lok sabha election 2024: ಬಿಸಲುನಾಡು ಕಲಬುರಗಿ ಆಯ್ತು, ನಾಳೆ ಮಲೆನಾಡಿಗೆ ಪ್ರಧಾನಿ ಮೋದಿ!

ಬಿಜೆಪಿ ಸರ್ಕಾರ ಬಂದ ನಂತರ 4 ಆಕ್ಟ್ ತರ್ತಾರೆ. 10 ದಿನ ಮಾತ್ರ ಎಲೆಕ್ಟ್ರೋಲ್ ಬಾಂಡ್ ಒಪನ್ ಇರುತ್ತದೆ. ಎಲೆಕ್ಟ್ರೋಲ್ ಬಾಂಡ್ ಮೂಲಕ ಪಂಡ್ ಕೊಟ್ರೆ ಸುಪ್ರೀಂ ಕೋರ್ಟ್ ಸೇರಿದಂತೆ ಯಾರಿಗೂ ಹೇಳಲ್ಲ ಎಂದು ಬಿಜೆಪಿ ಹೇಳುತ್ತದೆ. ಆದರೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾ.17ಕ್ಕೆ ಸೂಕ್ತ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಬಿಜೆಪಿ ಪಕ್ಷಕ್ಕೆ 6 ಸಾವಿರ ಕೋಟಿ ದೇಣಿಗೆ ನೀಡಿದವರ ವಿವರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸ್ಯಾಂಟಿಯಾನೋ ಬಿಜೆಪಿಗೆ ದೇಣಿಗೆ ನೀಡಿದ್ದಾನೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಸಂಸದ ಅಭ್ಯರ್ಥಿಗಳು ಉತ್ತರ ನೀಡಬೇಕು. ಬಿಜೆಪಿ ನಾಯಕರಿಗೆ ಆಗ್ರಹಿಸಿದರು.

ಕಾಂಗ್ರೆಸ್‌ನಿಂದ ಮನೆಮನೆಗೆ ಕುಕ್ಕರ್ ಹಂಚಿಕೆ ಆರೋಪ; ತಹಸೀಲ್ದಾರ್‌ಗೆ ದೂರು ನೀಡಿದರೂ ಸ್ಥಳಕ್ಕೆ ಬಾರದ್ದಕ್ಕೆ ಜೆಡಿಎಸ್ ಕಿಡಿ

click me!