ವಿಧಾನಸೌಧದಲ್ಲಿ ರಾಸಾಯನಿಕ ಬಣ್ಣ ಬಳಸುವಂತಿಲ್ಲ

By Kannadaprabha NewsFirst Published Oct 20, 2020, 7:26 AM IST
Highlights

ವಿಧಾನಸೌಧದಲ್ಲಿ ರಾಸಾಯನಿಕ ಯುಕ್ತ ಬಣ್ಣಗಳ ಬಳಕೆಯನ್ನು ನಿಷೇಧಿಸಲಾಗಿದೆ. 

ಬೆಂಗಳೂರು (ಅ.20):  ಆಯುಧ ಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿ (ಎಂಎಸ್‌ ಬಿಲ್ಡಿಂಗ್‌) ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಹೊರ ಆವರಣದಲ್ಲಿ ಬಳಸದಂತೆ ಸರ್ಕಾರ ಆದೇಶಿಸಿದೆ. ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿವೆ.

 ಆದ್ದರಿಂದ ಆಯುಧ ಪೂಜೆ ನೆರವೇರಿಸುವಾಗ ಕಚೇರಿಯ ಬಳಗೆ ಮತ್ತು ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ, ಕುಂಕುಮ, ಅರಿಶಿನ, ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸಬಾರದು.

ವಿಧಾನಸೌಧ, ಹೈಕೋರ್ಟ್‌ ಆವರಣದಲ್ಲಿ 27 ಶೌಚಾಲಯ ನಿರ್ಮಾಣ ..

 ಪೂಜಾ ದಿನದಂದು ಕಚೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್‌ ಸ್ವಿಚ್‌ಗಳನ್ನು ನಂದಿಸಿ ತೆರಳುವಂತೆ ಸೂಚಿಸಲಾಗಿದೆ. ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಹಲವು ತಿಂಗಳು ನೆಲದ ಹಾಸುವಿನ ಮೇಲೆ ಬಣ್ಣ ಉಳಿದುಕೊಳ್ಳುವುದರಿಂದ ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ.

 ಈ ಹಿಂದೆಯೂ ರಾಸಾಯನಿಕ ಬಣ್ಣ ಬಳಸದಂತೆ ಆದೇಶಿಸಿದ್ದರೂ ನಿಯಮ ಉಲ್ಲಂಘಿಸಲಾಗಿತ್ತು. ಈ ಬಾರಿ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಸಂಬಂಧಪಟ್ಟ ಶಾಖೆಯವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಎಚ್ಚರಿಸಲಾಗಿದೆ.

click me!