ಬೆಂಗಳೂರಿಗರೇ ಗಮನಿಸಿ...BBMP ಹಲವು ವಾರ್ಡ್‌ಗಳ ಹೆಸರು ಬದಲು

By Kannadaprabha NewsFirst Published Jun 26, 2020, 8:24 AM IST
Highlights

ಪದ್ಮಾವತಿ, ಗಂಗಾಂಬಿಕೆಗೆ ಕೊನೆಗೂ ವಾರ್ಡ್‌ ಇಲ್ಲ| ವಾರ್ಡ್‌ ಪುನರ್‌ ವಿಂಗಡಣೆ ಅಂತಿಮ ಅಧಿಸೂಚನೆ|ಹಲವು ವಾರ್ಡ್‌ ವ್ಯಾಪ್ತಿ, ಹೆಸರು ಬದಲು| ಒಟ್ಟು ವಾರ್ಡ್‌ನಲ್ಲಿ ಇಲ್ಲ ಬದಲಾವಣೆ|
 

ಬೆಂಗಳೂರು(ಜೂ.26): ಬಿಬಿಎಂಪಿಯ ವಾರ್ಡ್‌ಗಳನ್ನು ರಾಜ್ಯ ಸರ್ಕಾರ ಪುನರ್‌ ವಿಂಗಡಣೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಆದರೆ, ಒಟ್ಟು ವಾರ್ಡ್‌ ಸಂಖ್ಯೆಯಲ್ಲಿ ಬದಲಾವಣೆ ಆಗಿಲ್ಲ. ಕೆಲವು ವಾರ್ಡ್‌ಗಳ ವ್ಯಾಪ್ತಿ ಮತ್ತು ಹೆಸರು ಬದಲಾವಣೆ ಮಾಡಲಾಗಿದೆ.

2011ರ ಜನಗಣತಿ ಆಧಾರದ ಮೇಲೆ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯಿದೆ-1976, ಕಲಂ (7)(2)(ಎ) ಅನ್ವಯ ಈ ಮರು ವಿಂಗಡಣೆ ಮಾಡಲಾಗಿದೆ. ಕಳೆದ ಮಾರ್ಚ್‌ 2ರಂದು ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಬಿಡುಗಡೆ ಮಾಡಿ ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿತ್ತು. ಆಕ್ಷೇಪಣೆ ಸಲ್ಲಿಕೆ ಆಧಾರದ ಮೇಲೆ ಅಗತ್ಯ ಬದಲಾವಣೆಗಳನ್ನು ಮಾಡಿ ಇದೀಗ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಸರಾಸರಿ 42,645 ಮತದಾರರಂತೆ 198 ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಲಾಗಿದೆ. ಕೇಂದ್ರ ಭಾಗದ ಮೂರು ವಲಯದಲ್ಲಿ ಈ ಹಿಂದೆ 132 ವಾರ್ಡ್‌ಗಳ ಸಂಖ್ಯೆ ಈಗ 114ಕ್ಕೆ ಇಳಿಕೆ ಆಗಿವೆ. ಹೊರ ವಲಯದ ಐದು ವಲಯದಲ್ಲಿದ್ದ

68 ವಾರ್ಡ್‌ಗಳ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಮೇಯರ್‌ ಆಗಿದ್ದ ಪ್ರಕಾಶ್‌ ನಗರ ವಾರ್ಡ್‌ನ ಜಿ.ಪದ್ಮಾವತಿ, ಜಯನಗರ ವಾರ್ಡ್‌ನ ಗಂಗಾಂಬಿಕೆ ಅವರು ಪ್ರತಿನಿಧಿಸುವ ವಾರ್ಡ್‌ಗಳ ಹೆಸರು ಮರು ವಿಂಗಡಣೆ ವೇಳೆ ಇಲ್ಲದಂತಾಗಿದೆ. ಒಟ್ಟಾರೆ 26 ವಾರ್ಡ್‌ಗಳ ಹೆಸರು ಬದಲಾವಣೆ ಹಾಗೂ ಕೆಲವು ವಾರ್ಡ್‌ಗಳ ವಾರ್ಡ್‌ ಸಂಖ್ಯೆ ಬದಲಾವಣೆ ಆಗಿವೆ.

'ಕೊರೋನಾ ಸೋಂಕು ದೃಢಪಟ್ಟ 6 ತಾಸಲ್ಲಿ ಆಸ್ಪತ್ರೆಗೆ ದಾಖಲು'

ಪದ್ಮನಾಭನಗರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳ ವಾರ್ಡ್‌ ವ್ಯಾಪ್ತಿಯಲ್ಲಿ ಏರುಪೇರಾಗಿದೆ. ಯಲಹಂಕ ಕ್ಷೇತ್ರದ ವಾರ್ಡ್‌ಗಳ ಸಂಖ್ಯೆ 4ರಿಂದ 6ಕ್ಕೆ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ 9ರಿಂದ 11ಕ್ಕೆ, ಯಶವಂತಪುರ ಕ್ಷೇತ್ರ 5ರಿಂದ 7ಕ್ಕೆ, ಬೆಂಗಳೂರು ದಕ್ಷಿಣ 8ರಿಂದ 10ಕ್ಕೆ, ಬೊಮ್ಮನಹಳ್ಳಿ 8ರಿಂದ 10ಕ್ಕೆ, ಕೆ.ಆರ್‌.ಪುರ 9ರಿಂದ 11ಕ್ಕೆ ಹಾಗೂ ಮಹದೇವಪುರ ಕ್ಷೇತ್ರದ ವಾರ್ಡ್‌ಗಳ ಸಂಖ್ಯೆ 9ರಿಂದ 11ಕ್ಕೆ ಏರಿಕೆಯಾಗಿದೆ.

ಹೊಸ 26 ವಾರ್ಡ್‌ಗಳು, ಹೊಸ ವಾರ್ಡ್‌ -ವಾರ್ಡ್‌ ಸಂಖ್ಯೆ

ಕೋಗಿಲು 5
ಗರುಡಾಂಜನೇಯ ಸ್ವಾಮಿ ದೇವಸ್ಥಾನ 8
ಅಮೃತಹಳ್ಳಿ 9
ರಾಮಚಂದ್ರಾಪುರ 13
ಚಿಕ್ಕಸಂದ್ರ 15
ಬೃಂದಾವನ ನಗರ 20
ಹೆಣ್ಣೂರು 29
ಚಳ್ಳಕೆರೆ 30
ಕಲ್ಕೆರೆ 32
ಜಯಚಾಮರಾಜೇಂದ್ರನಗರ 50
ಮಾರುತಿನಗರ 70
ಸುಂಕದಕಟ್ಟೆ 74
ಗೊಲ್ಲರಪಾಳ್ಯ ಹೊಸಹಳ್ಳಿ 75
ಸರ್‌.ಎಂ.ವಿಶ್ವೇಶ್ವರಯ್ಯ 77
ಶೇಷಾದ್ರಿಪುರ 86
ವೈಟ್‌ಫೀಲ್ಡ್‌ 97
ಮಾರೇನಹಳ್ಳಿ 120
ಹನುಮಗಿರಿ ದೇವಸ್ಥಾನ 121
ಕಲ್ಯಾಣನಗರ 122
ನಾಗದೇವನಹಳ್ಳಿ 147
ದೊಡ್ಡಕನ್ನಳ್ಳಿ 168
ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ 177
ಸುಬ್ರಹ್ಮಣ್ಯಪುರ 181
ಕೂಡ್ಲು 191
ದೇವರಚಿಕ್ಕನಹಳ್ಳಿ 193
ಕಾಳೇನ ಅಗ್ರಹಾರ 195

ವಾರ್ಡ್‌ ಪುನರ್‌ ವಿಂಗಡಣೆ ನೆಪದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತ ಬರುತ್ತಿರುವ ವಿಧಾನಸಭಾ ಕ್ಷೇತ್ರಗಳನ್ನು ಒಡೆಯಲಾಗಿದೆ. ನಗರಾಭಿವೃದ್ಧಿ ಅಧಿಕಾರಿಗಳು ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವುದನ್ನು ಬಿಟ್ಟು ವಾರ್ಡ್‌ ಮರು ವಿಂಗಡಣೆ ಅಧಿಸೂಚನೆ ಹೊಡಿಸಿರುವುದು ತೀರಾ ಅಚ್ಚರಿ ತಂದಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಅವರು ಹೇಳಿದ್ದಾರೆ. 
 

click me!