ಫೆ.14-24ರ ವರೆಗೆ ವಿಮಾನ ಸೇವೆಯಲ್ಲಿ ವ್ಯತ್ಯಯ

Published : Jan 22, 2019, 03:27 PM ISTUpdated : Jan 22, 2019, 03:44 PM IST
ಫೆ.14-24ರ ವರೆಗೆ ವಿಮಾನ ಸೇವೆಯಲ್ಲಿ ವ್ಯತ್ಯಯ

ಸಾರಾಂಶ

ಫೆ.14-24ರ ವರೆಗೆ ವಿಮಾನ ಸೇವೆಯಲ್ಲಿ ವ್ಯತ್ಯಯ| ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನೆಲೆ| ಕೆಲ ಕಾಲ ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಸ್ಥಗಿತಕ್ಕೆ ನಿರ್ಧಾರ

 ಬೆಂಗಳೂರು[ಜ.22]: ನಗರದ ಯಲಹಂಕ ವೈಮಾನಿಕ ನೆಲೆಯಲ್ಲಿ ಫೆ.20ರಿಂದ 24ರ ವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಜರುಗುವ ಹಿನ್ನೆಲೆಯಲ್ಲಿ ಫೆ.14ರಿಂದ 24ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್‌) ಕೆಲ ಕಾಲ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ತಿಳಿಸಿದೆ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನವಾಗಿದ್ದು, ಪ್ರತಿಷ್ಠಿತ ವಿಮಾನ ಕಂಪನಿಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಯನ್ನು ಈ ಐದು ದಿನಗಳ ಕಾಲ ಪ್ರದರ್ಶಿಸಲಿವೆ. ಇಂತಹ ಮಹತ್ವದ ಕಾರ್ಯಕ್ರಮವನ್ನು ಬಿಐಎಎಲ್‌ ಬೆಂಬಲಿಸುತ್ತಿದೆ. ಈ ಪ್ರದರ್ಶನದ ಸುರಕ್ಷತೆ ಹಾಗೂ ಯಶಸ್ಸಿಗಾಗಿ ಪ್ರದರ್ಶನದ ತಯಾರಿ ಮತ್ತು ಪ್ರದರ್ಶನದ ದಿನಗಳಂದು ಕೆಐಎಎಲ್‌ನಲ್ಲಿ ಕೆಲ ಕಾಲ ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಇದರಿಂದ ವಿವಿಧ ಏರ್‌ಲೈನ್‌ಗಳ ವಿಮಾನ ಸಂಚಾರದ ವೇಳಾ ಪಟ್ಟಿಬದಲಾವಣೆಯಾಗಲಿದೆ. ಏರ್‌ಲೈನ್‌ ಕಂಪನಿಗಳು ಪ್ರಯಾಣಿಕರಿಗೆ ಬದಲಾದ ವೇಳಾ ಪಟ್ಟಿಅಥವಾ ವಿಮಾನ ರದ್ಧತಿ ಬಗ್ಗೆ ಮಾಹಿತಿ ನೀಡಲಿವೆ. ಇನ್ನು ವೈಮಾನಿಕ ಪ್ರದರ್ಶನದ ದಿನಗಳು ಕೆಐಎಎಲ್‌ಗೆ ಸಂಪರ್ಕ ಕಲ್ಪಿಸುವ ಎನ್‌ಎಚ್‌-4 ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಇರುತ್ತದೆ. ಇದರಿಂದ ಏರ್‌ಪೋರ್ಟ್‌ ಟ್ಯಾಕ್ಸಿ ಮತ್ತು ಬಸ್‌ಗಳ ಸಂಚಾರಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ. ಹಾಗಾಗಿ ಪ್ರಯಾಣಿಕರು ಆ ದಿನಗಳಂದು ತಾವು ಪ್ರಯಾಣಿಸುವ ವಿಮಾನಗಳ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ, ವಿಮಾನಗಳ ಬದಲಾದ ವೇಳಾ ಪಟ್ಟಿಬಗ್ಗೆ ಮಾಹಿತಿ ಪಡೆಯಬೇಕು.

ಯಾವ ಸಮಯದಲ್ಲಿ ವಿಮಾನ ಸೇವೆ ಸ್ಥಗಿತ?

ಫೆ.14ರಿಂದ 17ರವರೆಗೆ ವೈಮಾನಿಕ ಪ್ರದರ್ಶನದ ತಾಲೀಮು ನಡೆಯುವ ಹಿನ್ನೆಲೆಯಲ್ಲಿ ಆ ದಿನಗಳಂದು ಮಧ್ಯಾಹ್ನ 1.30ರಿಂದ ಸಂಜೆ 4.30ರ ವರೆಗೆ ವಿಮಾನ ಕಾರ್ಯಾಚರಣೆ ಸ್ಥಗಿತವಾಗಲಿದೆ.

ಫೆ.18 ಮತ್ತು 19ರಂದು ಸಮವಸ್ತ್ರದೊಂದಿಗೆ ವೈಮಾನಿಕ ಪ್ರದರ್ಶನದ ಅಭ್ಯಾಸ ನಡೆಯಲಿರುವುದರಿಂದ ಈ ಎರಡೂ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನ ಸಂಚಾರ ಸ್ಥಗಿತವಾಗಲಿದೆ.

ಫೆ.20ರಂದು ವೈಮಾನಿಕ ಪ್ರದರ್ಶನದ ಉದ್ಘಾಟನೆ ಮತ್ತು ವೈಮಾನಿಕ ಪ್ರದರ್ಶನ ಇರುವುದರಿಂದ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನ ಸೇವೆ ಇರುವುದಿಲ್ಲ.

ಫೆ.21ರಿಂದ 24ರ ವರೆಗೆ ವೈಮಾನಿಕ ಪ್ರದರ್ಶನ ಇರುವುದರಿಂದ ಈ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎಂದು ಬಿಐಎಎಲ್‌ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!