ಚಾಮರಾಜನಗರ ಆಕ್ಸಿಜನ್ ದುರಂತ : ಮೈಸೂರು ಡೀಸಿಗೆ ಕ್ಲೀನ್‌ ಚಿಟ್

By Suvarna News  |  First Published May 13, 2021, 11:41 AM IST
  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ
  • ಚಾಮರಾಜನಗರ ಡಿಸಿ ರವಿ ಅವರೇ ನೇರ ಹೊಣೆ ಎಂದು ನಿವೃತ್ತ ನ್ಯಾಯಾಧೀಶರ ಆಯೋಗ ವರದಿ
  • ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್‌ಚಿಟ್

 ಚಾಮರಾಜನಗರ (ಮೇ.13): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು ನಡೆದ ಆಕ್ಸಿಜನ್​ ದುರಂತಕ್ಕೆ ಚಾಮರಾಜನಗರ ಡಿಸಿ ರವಿ ಅವರೇ ನೇರ ಹೊಣೆ ಎಂದು ನಿವೃತ್ತ ನ್ಯಾಯಾಧೀಶರ ಆಯೋಗ ವರದಿ ನೀಡಿದೆ. ಈ ಪ್ರಕರಣ ಸಂಬಂಧ ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್‌ಚಿಟ್ ನೀಡಿದೆ. 

ನಿವೃತ್ತ ನ್ಯಾಯಾಧೀಶ ಎನ್. ವೇಣುಗೋಪಾಲ್ ನೇತೃತ್ವದ ಸಮಿತಿ ಹೈ ಕೋರ್ಟ್‌ಗೆ ವರದಿ ನೀಡಿದ್ದು, ಈ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಪ್ಪಿಲ್ಲ. ಇದಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿಯೇ ನೇರ ಹೊಣೆ. ಅವರ ಮುಂಜಾಗೃತೆ ಕೊರತೆಯಿಂದ ದುರಂತವಾಗಿದೆ.  ತಮ್ಮ ವೈಫಲ್ಯ ಮುಚ್ಚಿಹಾಕಲು ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದೆ. 

Tap to resize

Latest Videos

undefined

ಚಾಮರಾಜನಗರ ದುರಂತ: ಅನುಮಾನ ಮೂಡಿಸುತ್ತಿದೆ ಡಿಸಿಗಳ ದ್ವಂದ್ವ ಹೇಳಿಕೆ ..

ವರದಿ ಸಾರಾಂಶ :  ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆಕ್ಸಿಜನ್​ ಸಪ್ಲೈಗೆ ತಡೆ ಕೊಟ್ಟಿದ್ದಕ್ಕೆ  ಯಾವುದೇ ಸಾಕ್ಷ್ಯಗಳಿಲ್ಲ. ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು.  ಆಕ್ಸಿಜನ್​ ಪ್ಲಾಂಟ್​ ಜಿಲ್ಲೆಯಿಂದ 70 ಕಿ.ಮೀ ದೂರವಿದೆ.  ಮೈಸೂರಿನಿಂದ ಆಕ್ಸಿಜನ್​​ ತುಂಬಿಸಿ ಜಿಲ್ಲೆಗೆ ಸಾಗಿಸಬೇಕಿತ್ತು ಎಂದು ಹೈಕೋರ್ಟ್​ಗೆ ನಿವೃತ್ತ ನ್ಯಾಯಮೂರ್ತಿಗಳ ವರದಿ ತಿಳಿಸಿದೆ.

ಚಾಮರಾಜನಗರ ಆಕ್ಸಿಜನ್‌ ದುರಂತಕ್ಕೆ ಪರಿಹಾರ : ಹೈಕೋರ್ಟ್‌ ಸೂಚನೆ

ಜಿಲ್ಲಾಸ್ಪತ್ರೆಯ ಮಾಹಿತಿ ಪ್ರಕಾರ ಆಕ್ಸಿಜನ್​ ಇರಲಿಲ್ಲ. ಚಾಮರಾಜನಗರ ದುರಂತಕ್ಕೆ ಆಕ್ಸಿಜನ್​ ಇಲ್ಲದಿರುವುದೇ ಕಾರಣ. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗಿನವರೆಗೆ ಆಕ್ಸಿಜನ್​ ಇರಲಿಲ್ಲ.  ಆಕ್ಸಿಜನ್​ ಪಡೆದುಕೊಳ್ಳುವಲ್ಲಿ ಜಿಲ್ಲಾಸ್ಪತ್ರೆ ವಿಫಲವಾಗಿದೆ ಎಂದು ಹೇಳಿದೆ. 

24 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ 24 ಜನ ಕೋವಿಡ್ ಸೋಂಕಿತರ ಸಾವಿಗೂ ಆಕ್ಸಿಜನ್​ ಕೊರತೆಯೆ ಕಾರಣ. ಆಕ್ಸಿಜನ್​ ಕೊರತೆಯಿಂದಾಗಿ ಮೆದುಳು ಘಾಸಿಯಾಗಿದೆ. ದೇಹದ ಇತರ ಭಾಗಗಳಿಗೂ ಹಾನಿಯಾಗಿದೆ​​. ಇದರಿಂದ ಅವಘಡ ಸಂಭವಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳ ಆಯೋಗ ಹೈಕೋರ್ಟ್​ಗೆ ವರದಿ ಸಲ್ಲಿಸಿದೆ. 

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು ...

ನಾವು ಮೈಸೂರು ಜಿಲ್ಲಾಧಿಕಾರಿ ಬಳಿ ಆಕ್ಸಿಜನ್ ಕೇಳಿದ್ದು ಸೂಕ್ತ ಸಮಯಕ್ಕೆ ದೊರಕಿಸದೇ ಇರುವುದು ಈ ದುರಂತಕ್ಕೆ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಆರೋಪ ಮಾಡಿದ್ದರು. ಇದೀಗ ವರದಿಯಲ್ಲಿ  ಮೈಸೂರು ಡೀಸಿಗೆ ಕ್ಲೀನ್‌ ಚಿಟ್ ನೀಡಿದ್ದು, ಚಾಮರಾಜನಗರ ಜಿಲ್ಲಾಧಿಕಾರಿಯೇ ಹೊಣೆ  ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!