ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಟಿಂಗ್‌ ಶಾಪ್‌ ಮಾಲೀಕ

By Govindaraj S  |  First Published Sep 13, 2023, 11:30 PM IST

ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಬಗ್ಗೆ ಗೋವಿಂದ ಬಾಬು ಪೂಜಾರಿ ಎಂಬುವವರು ತಮಗಾಗಿರುವ ಅನ್ಯಾಯದ ಬಗ್ಗೆ ಎರಡು ಪುಟಗಳಷ್ಟು ಬರೆದಿದ್ದರು ಎನ್ನಲಾದ ಪತ್ರವೊಂದು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡಿತು. 


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್, ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.13): ಸಾಮಾಜಿಕ ಕಾರ್ಯಕರ್ತ ಬೈಂದೂರು ಮೂಲದ ಗೋವಿಂದ ಬಾಬು ಪೂಜಾರಿ ಅವರಿಗೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗೆ ಬೈಂದೂರು ಕ್ಷೇತ್ರದಿಂದ ಟಿಕೇಟ್ ಕೊಡಿಸುವುದಾಗಿ ನಂಬಿಸಿ ಕೋಟಿಗಟ್ಟಲೇ ಹಣ ಪೀಕಿದ್ದ ವಂಚನೆ ಪ್ರಕರಣದ ಹಿನ್ನಲೆಯಲ್ಲಿ ಪ್ರಮುಖ ಆರೋಪಿಯಾಗಿರುವ ವಾಗ್ಮಿ ಚೈತ್ರಾ ಕುಂದಾಪುರ ಜೊತೆಯಲ್ಲಿ ಚಿಕ್ಕಮಗಳೂರು ಕಡೂರು ಪಟ್ಟಣದ ಇಬ್ಬರು ಆರೋಪಿಗಳು ಹಾಗೂ ತರೀಕೆರೆಯ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿಯೇ ಬಂಧಿಸಿದ್ದಾರೆ. ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಬಗ್ಗೆ ಗೋವಿಂದ ಬಾಬು ಪೂಜಾರಿ ಎಂಬುವವರು ತಮಗಾಗಿರುವ ಅನ್ಯಾಯದ ಬಗ್ಗೆ ಎರಡು ಪುಟಗಳಷ್ಟು ಬರೆದಿದ್ದರು ಎನ್ನಲಾದ ಪತ್ರವೊಂದು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡಿತು. 

Tap to resize

Latest Videos

undefined

ಸೆ8 ರಂದು ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಳ್ಳುತ್ತಿದ್ದಂತೆ ಆರೋಪಿಗಳ ಪತ್ತೆಗಾಗಿ ಸಿಸಿಬಿ ಪೊಲೀಸರ ತಂಡ ರಚಿಸಿಕೊಂಡು ಖಚಿತ ಮಾಹಿತಿಯೊಂದಿಗೆ ಕಡೂರಿನಲ್ಲಿ ಆರೋಪಿಗಳ ಪತ್ತೆಗಾಗಿ ಸಿಸಿಪಿ ಪೊಲೀಸರ ಒಂದು ತಂಡ ಕಳೆದ ಎರಡು ದಿನಗಳ ಹಿಂದೆಯೇ ಬೀಡುಬಿಟ್ಟಿದ್ದರು ಎನ್ನಲಾಗಿದೆ.  ಪ್ರಕರಣದ ಎರಡನೇ ಆರೋಪಿಯಾಗಿರುವ ಗಗನ್ನನ್ನು ಪಟ್ಟಣದ ಕನಕವೃತ್ತದ ಬಳಿ ಸಿಸಿಬಿ  ಪೊಲೀಸರು ಚಲನವಲನಗಳನ್ನು ಗಮಿನಿಸಿಕೊಂಡು ಖಚಿತ ಪಡಿಸಿಕೊಂಡು ಬಂಧಿಸಿದರೆ, ಮತ್ತೋರ್ವ ಆರೋಪಿಗಳಾದ ಧನರಾಜ್ ಮತ್ತು ರಮೇಶ್ನನ್ನು ರಾತ್ರಿ ವಶಕ್ಕೆ ಪಡೆದಿದ್ದಾರೆ.

ವಿಜಯಪುರಕ್ಕೆ ಬಾಹ್ಯಾಕಾಶ ವಿಜ್ಞಾನಿ ಭೇಟಿ: ಶಾಲಾ-ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀನಿವಾಸನ್

ಗಗನ್ಕಡೂರ್ ಯಾರು?: ಕಡೂರಿನ ಮೂಲತಃ ಎಬಿವಿಪಿ ಸೇರಿದಂತೆ ಹಿಂದೂಪರ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಗನ್   ಕಡೂರು ಪಟ್ಟಣದಲ್ಲಿ ಬಿಲ್ದಿಂಗ್ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಹಿನ್ನಲೆಯಲ್ಲಿ ಚೈತ್ರಾಕುಂದಾಪುರ ಪರಿಚಯವಾಗಿದ್ದು, ಬಳಿಕ ಹಿಂದೂಪರ ಸಂಘಟನೆಯ ಆಯೋಜಕರು ಕಡೂರು ಭಾಗದಲ್ಲಿ ನಡೆಸುತ್ತಿದ್ದ ಕೆಲ ಕಾರ್ಯಕ್ರಮಗಳಿಗೆ ಹಾಗಾಗ್ಗೆ ದಿಕ್ಸೂಚಿ ಭಾಷಣ ಮಾಡಿಸಲು ಚೈತ್ರಾಳನ್ನು ದಿಕ್ಸೂಚಿ ಭಾಷಣ ಮಾಡಿಸಲು ಆಹ್ವಾನಿಸುತ್ತಿದ್ದನು ಎಂದು ತಿಳಿದು ಬಂದಿದೆ. 

ಹಿಂದೊಮ್ಮೆ ಕಡೂರು ಪಟ್ಟಣದ ಸರಕಾರಿ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಚೈತ್ರಾಕುಂದಾಪುರ ಅವರ ಪ್ರಚೋದನಕಾರಿ ಭಾಷಣಕ್ಕೆ ಯುವ ಕಾಂಗ್ರೆಸ್ ಮುಖಂಡರು ಹಾಗೂ ಎನ್ಎಸ್ಯುಐ ಘಟಕದ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿತ್ತು. ಸಿನಿಮಿಯ ಶೈಲಿಯಲ್ಲಿ ಡೀಲ್ ಪ್ರಕರಣ ನಡೆಸಿರುವ ಹಿನ್ನಲೆಯಲ್ಲಿ ಪ್ರಕರಣದಲ್ಲಿ ಸಾಥ್ ನೀಡಿರುವ ಆರೋಪಿ ಧನರಾಜ್ ಗಗನ್ ಸ್ನೇಹಿತರಾಗಿದ್ದರು. ಮತ್ತೋರ್ವ ಆರೋಪಿ ರಮೇಶ್ ಧನರಾಜ್ ಅವರ ಸಂಬಂಧಿಕರು ಎಂದು ತಿಳಿದು ಬಂದಿದೆ. 

ಸಾಲದ ಶೂಲದಿಂದ ಹೊರಬಂದ ಕುಟುಂಬ: ಬಿಗ್ 3 ವರದಿಗೆ ಕೋಟಿ ನಮಸ್ಕಾರ ಎಂದ ಕುಟುಂಬ!

ಹೆರ್ ಸೆಲೂನ್ನಲ್ಲಿ ರೆಡಿಯಾದ ವಿಶ್ವನಾಥ್ ಜೀ ಪಾತ್ರ: ವಂಚನೆ ಪ್ರಕರಣದಲ್ಲಿ ಪಟ್ಟಣದ ದೊಡ್ಡಪೇಟೆಯೊಂದರಲ್ಲಿನ ಹೇರ್ ಸೆಲೂನ್ನಲ್ಲಿ ಆರ್ಎಸ್ಎಸ್ ಪ್ರಚಾರಕ್ ವಿಶ್ವನಾಥ್ ಜೀ ತರಾ ವ್ಯಕ್ತಿಯ ಪಾತ್ರವನ್ನು ಸೃಷ್ಟಿಸಲು ವ್ಯಕ್ತಿಯನ್ನು ಕರೆ ತಂದ ಹಿನ್ನಲೆಯಲ್ಲಿ ಶಾಪ್ ಅಂಗಡಿಯನ್ನು ಕ್ಲೋಸ್ ಮಾಡುವ ಸಂದರ್ಭದಲ್ಲಿ ಧನರಾಜ್ ಕರೆದುಕೊಂಡ ಬಂದಿದ್ದರಿಂದ ಪ್ರಚಾರಕರ ಪೋಟೊ ತೋರಿಸಿ ಈ ರೀತಿ ರೆಡಿ ಮಾಡುವಂತೆ ಒತ್ತಾಯಿಸಿದ ಬಳಿಕ ಹೇರ್ಕಟ್ ಮಾಡಿ, ಹೇರ್ ಡ್ರೈ ಮಾಡಿ ವಿಶ್ವನಾಥ್ ಜೀ ಪಾತ್ರಕ್ಕೆ ಜೀವ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಸೆಲೋನ್ ಸಾಪ್ ನ ಮಾಲೀಕ ರಾಮು ಒಂದು ದಿನ 9ಗಂಟೆ ಗೆ ಕಡೂರಿನ ಧನರಾಜ್ ನಮ್ಮ ಅಂಗಡಿಗೆ ಕಸ್ಟಮರ್ , ಅವರ ಜೊತೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಓರ್ವ ವ್ಯಕ್ತಿ ಕರೆತಂದು , ಒಂದು ಪೋಟೋ ತೋರಿಸಿ ಇದೇ ರೀತಿ ಕಟ್ಟಿಂಗ್  ಮತ್ತು ಹೇರ್ ಡ್ರೈ ಆಗಬೇಕೆಂದು ಹೇಳಿದರು. ಅದೇ ರೀತಿ ಮಾಡಿ ಅವರನ್ನು ರೆಡಿ ಮಾಡಲಾಯಿತು ಎಂದು ತಿಳಿಸಿದ್ದಾರೆ.

click me!