ಸಾಲದ ಶೂಲದಿಂದ ಹೊರಬಂದ ಕುಟುಂಬ: ಬಿಗ್ 3 ವರದಿಗೆ ಕೋಟಿ ನಮಸ್ಕಾರ ಎಂದ ಕುಟುಂಬ!

By Govindaraj SFirst Published Sep 13, 2023, 9:43 PM IST
Highlights

ಸಾಲದ ಶೂಲಕ್ಕೆ ಸಿಲುಕಿದ್ದ ಆ ಕುಟುಂಬ ಈ ಜೀವನವೇ ಇಲ್ಲಿಗೆ ಸಾಕೆಂದು ಪ್ರಾಣ ಕಳೆದುಕೊಳ್ಳಲು ಸಿದ್ಧವಾಗಿತ್ತು. ಆದರೆ ಸುವರ್ಣ ನ್ಯೂಸ್ ಬಿಗ್ ತ್ರಿ ಪ್ರಸಾರ ಮಾಡಿದ ಸುದ್ಧಿಯಿಂದ ಆ ಕುಟುಂಬದ ಸಂಕಷ್ಟ ದೂರವಾಗಿ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಸಹಕಾರಿಯಾಗಿದೆ.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.13): ಸಾಲದ ಶೂಲಕ್ಕೆ ಸಿಲುಕಿದ್ದ ಆ ಕುಟುಂಬ ಈ ಜೀವನವೇ ಇಲ್ಲಿಗೆ ಸಾಕೆಂದು ಪ್ರಾಣ ಕಳೆದುಕೊಳ್ಳಲು ಸಿದ್ಧವಾಗಿತ್ತು. ಆದರೆ ಸುವರ್ಣ ನ್ಯೂಸ್ ಬಿಗ್ ತ್ರಿ ಪ್ರಸಾರ ಮಾಡಿದ ಸುದ್ಧಿಯಿಂದ ಆ ಕುಟುಂಬದ ಸಂಕಷ್ಟ ದೂರವಾಗಿ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಸಹಕಾರಿಯಾಗಿದ್ದು, ಬದುಕು ಮತ್ತೆ ಅರಳಿದೆ. ತನ್ನ ಗಂಡ ಸಂಪಾದಿಸಿರುವ ಚಿಕ್ಕ ಭೂಮಿಯಲ್ಲಿ ಅಚ್ಚಹಸಿರಿನಿಂದ ನಳನಳಿಸುತ್ತಿರುವ ಮೆಕ್ಕೆಜೋಳದ ಬೆಳೆ. ಎಲ್ಲರಂತೆ ತಾನೂ ಒಂದು ಉಂಗುರ ಧರಿಸಬೇಕೆಂದು ಬಯಸಿದ್ದ ಮಗನ ಕೈಗೆರಡು ಉಂಗುರ ತೊಡಿಸಿದ ತಾಯಿ. ಸಾಲ ತೀರಿಸಿ ಉಳಿದ ಹಣದಲ್ಲಿ ಗಿರಿವಿಯಿಟ್ಟಿದ್ದ ತಾಳಿಯನ್ನು ಬಿಡಿಸಿಕೊಂಡು ಧರಿಸಿ ನಗು ತುಂಬಿಕೊಂಡ ತಾಯಿ. 

ಇದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗಂಗಾವರ ಗ್ರಾಮದ ಮಹಿಳೆ ರುಕ್ಮಿಣಿ ಮತ್ತು ಮಗ ಜಯರಾಮ್ ಕುಟುಂಬದಲ್ಲಿ ಮತ್ತೆ ಅರಳಿದ ಬದುಕಿನ ರೀತಿ. ಹೌದು ವಿಶೇಷಚೇತನ ಮಗ ಜಯರಾಮನ ಚಿಕಿತ್ಸೆಗಾಗಿ ಮತ್ತು 2018 ರಲ್ಲಿ ತನ್ನ ಗಂಡನ ಆರೋಗ್ಯದ ಚಿಕಿತ್ಸೆಗಾಗಿಯೂ ರುಕ್ಮಿಣಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಆದರೆ ಇಬ್ಬರ ಆರೋಗ್ಯವೂ ಚೇತರಿಕೆಯಾಗಲಿಲ್ಲ. ಜೊತೆಗೆ ಪತಿ ಈರಯ್ಯ ಸಾವನ್ನಪ್ಪಿದ್ದರು. ಅಂದಿನಿಂದ ಸಾಲಗಾರರ ಒತ್ತಡವೂ ಹೆಚ್ಚಿತ್ತು. ಸಾಲ ತೀರಿಸುವುದಕ್ಕಾಗಿ ಕೂಲಿಗೆ ಹೋಗಬೇಕಾಗಿತ್ತು. ಆದರೆ ಇತ್ತ ವಿಶೇಷ ಚೇತನ ಮಗನನ್ನು ಬಿಟ್ಟು ಕೂಲಿಗೂ ಹೋಗುವಂತಿರಲಿಲ್ಲ. 

Kodagu: ಕೃಷ್ಣಾಷ್ಟಮಿಯಲ್ಲಿ ಕೃಷ್ಣ ರಾಧೆಯರಾಗಿ ಕಣ್ಮನ ಸೆಳೆದ ಪುಟಾಣಿಗಳು!

ತನ್ನ ತಾಯಿ ಕೂಲಿಗೆ ಹೋದರೆಂದರೆ ಮಾಂಸದ ಮುದ್ದೆಯಂತೆ ಒಂದೆಡೆಯೇ ಮಲಗಬೇಕಾಗಿದ್ದ ಜಯರಾಮ್ ತನಗೊಂದು ವಿಷಕೊಟ್ಟು ಬಿಡಮ್ಮ ಎಂದು ಕಣ್ಣೀರಿಡುತ್ತಿದ್ದರು. ಆದರೀಗ ಸಾಲ ತೀರಿದ್ದು ಜಯರಾಮ್ ನನ್ನು ಬಿಟ್ಟು ತಾಯಿ ರುಕ್ಮಿಣಿ ಕೂಲಿಗೆ ಹೋಗುವುದಿಲ್ಲ. ಇದು ಜಯರಾಮ್ಗೆ ಅಪಾರ ಸಂತೋಷ. ರುಕ್ಮಿಣಿಯವರ ಕುಟುಂಬದ ಆ ಸ್ಥಿತಿಯನ್ನು ರಾಜ್ಯದ ಜನತೆಗೆ ಸುವರ್ಣ ನ್ಯೂಸ್ ಬಿಗ್ ತ್ರಿ ಎಳೆಎಳೆಯಾಗಿ ತೋರಿಸಿತ್ತು. ಅಂದು ಸುದ್ದಿಯನ್ನು ನೋಡಿ ಸ್ಪಂದಿಸಿದ್ದ ರಾಜ್ಯದ ಜನತೆ ಸಂಕಷ್ಟದಲ್ಲಿದ್ದ ಮಹಿಳೆ ರುಕ್ಮಿಣಿಯವರ ಖಾತೆ 4 ಲಕ್ಷ 75 ಸಾವಿರ ಹಣ ಜಮೆ ಮಾಡಿದ್ದರು. ಆ ಹಣದಿಂದ ತಮಗಿದ್ದ ಸಾಲವನ್ನೆಲ್ಲಾ ತೀರಿಸಿಕೊಂಡ ರುಕ್ಮಿಣಿಯವರು ಬ್ಯಾಂಕಿನಲ್ಲಿ ಗಿರಿವಿ ಇರಿಸಿದ್ದ ಒಡವೆ, ತಾಳಿಯನ್ನು ಬಿಡಿಸಿಕೊಂಡು ಧರಿಸಿಕೊಂಡಿದ್ದಾರೆ. 

ಅಂದು ಸುವರ್ಣ ನ್ಯೂಸ್ ನಮ್ಮ ಸಂಕಷ್ಟಕ್ಕೆ ಮಿಡಿಯದಿದ್ದರೆ ಇಂದು ನಾವು ಬದುಕಿರುತ್ತಿರಲಿಲ್ಲ. ಅಂದು ತಾಳ್ಮೆಯಿಂದ ಸುವರ್ಣ ನ್ಯೂಸ್ ಚಾಲನ್ ಕಚೇರಿಯನ್ನು ತಲುಪಿದ್ದರಿಂದ ಇಂದು ಬದುಕಿದ್ದೇವೆ. ತನ್ನ ಪತಿ ಇದ್ದಾಗ ಎಷ್ಟು ಸಂತೋಷದಿಂದ ಇದ್ದೆವೋ ಅಷ್ಟೇ ಸಂತೋಷದಲ್ಲಿ ಇದ್ದೇವೆ. ಹೀಗಾಗಿ ಸುವರ್ಣ ನ್ಯೂಸ್ ಮತ್ತು ರಾಜ್ಯದ ಜನತೆಗೆ ಕೋಟಿ ಕೋಟಿ ನಮಸ್ಕಾರ ಎನ್ನುತ್ತಾರೆ ರುಕ್ಮಿಣಿ. ಅಷ್ಟೇ ಅಲ್ಲ ನಾಲ್ಕು ವರ್ಷಗಳಿಂದ ಪಾಳು ಬಿದ್ದಿದ್ದ ತಮ್ಮ ತುಂಡು ಭೂಮಿಯಲ್ಲಿ ಈ ವರ್ಷ ಮೆಕ್ಕೆಜೋಳವನ್ನು ಬೆಳೆದಿದ್ದೇವೆ. 

ಕಲ್ಗುಡಿ ಬ್ರಾಂಡ್ 'ಗನ್' ಕೊಡಗಿನ ಮಾರುಕಟ್ಟೆಗೆ ಎಂಟ್ರಿ: ಈ ಗನ್‌ನ ಸ್ಪೆಷಾಲಿಟಿ ಏನು?

ತನ್ನ ತಂಡ ಅಂದು ಕಷ್ಟಪಟ್ಟು ಈ ಭೂಮಿಯನ್ನು ಖರೀದಿಸಿದ್ದರು. ಆ ಭೂಮಿಯಲ್ಲಿ ಇಂದು ಮತ್ತೆ ಬೆಳೆ ಬೆಳೆದಿದ್ದೇವೆ. ಹೀಗಾಗಿ ನಾವು ಬದುಕುಬೇಕು ಎನಿಸುತ್ತಿದೆ ಎಂದು ರುಕ್ಮಿಣಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಗ್ರಾಮದ ಮಹಿಳೆಯರು ಕೂಡ ತೀರಾ ಕಷ್ಟಕ್ಕೆ ಸಿಲುಕಿದ್ದ ಕುಟುಂಬದ ಪರಿಸ್ಥಿತಿ ಬದಲಾಗಿ ಇಂದು ಸಂತೋಷದಿಂದ ಇದ್ದಾರೆ. ಅದಕ್ಕೆ ಸುವರ್ಣ ನ್ಯೂಸ್ ಕಾರಣ. ಸುವರ್ಣ ನ್ಯೂಸ್ಗೆ ಧನ್ಯವಾದ ಎನ್ನುತ್ತಾರೆ ಗ್ರಾಮದ ಮಹಿಳೆ ರತ್ನ. ಒಟ್ಟಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದ ಕರುಣಾಜನಕ ಕಥೆಯನ್ನು ಬಿತ್ತರಿಸಿ ಆ ಕುಟುಂಬವನ್ನು ಸಂಕಷ್ಟದಿಂದ ಹೊರ ತಂದು ಉಳಿಸಿದ ಸಾರ್ಥಕತೆ ಸುವರ್ಣ ನ್ಯೂಸ್ ಬಿಗ್ ತ್ರಿಯದ್ದು ಎನ್ನುವುದು ನಮ್ಮ ಹೆಮ್ಮೆ.

click me!