Hampi: ಹನುಮನ ಜನ್ಮಸ್ಥಳ ವಿವಾದದಲ್ಲಿ ಮಧ್ಯಪ್ರವೇಶ ಇಲ್ಲ: ಕೇಂದ್ರ ಸಚಿವ ಕಿಶನ್‌ ರೆಡ್ಡಿ

By Kannadaprabha News  |  First Published Feb 26, 2022, 8:21 AM IST

*  ಹನುಮನ ಜನ್ಮಸ್ಥಳ ಕುರಿತು ಟಿಟಿಡಿ ನೀಡಿರುವ ಹೇಳಿಕೆಯಲ್ಲಿ ನನ್ನನ್ನು ಸಿಲುಕಿಸಬೇಡಿ
*  ಹನುಮ ಜನ್ಮಸ್ಥಳ ಕುರಿತು ಜನರ ವಿಶ್ವಾಸವೇ ಮುಖ್ಯ
*  ಆನೆಗೊಂದಿಯ ಅಂಜನಾದ್ರಿ ಪರ್ವತವೇ ಹನುಮನ ಜನ್ಮಸ್ಥಳವಾಗಿದೆ 
 


ಹೊಸಪೇಟೆ(ಫೆ.26):  ಹನುಮನ ಜನ್ಮಸ್ಥಳ(Anjaneya Birthplace) ಕುರಿತು ವಿವಾದ ಏನೇ ಇರಲಿ. ಇದರಲ್ಲಿ ಕೇಂದ್ರ ಸರ್ಕಾರ(Central Government) ಮಧ್ಯಪ್ರವೇಶಿಸುವುದಿಲ್ಲ. ಜನರ ವಿಶ್ವಾಸ ಮುಖ್ಯವೇ ಹೊರತು ವಿವಾದ ಸೃಷ್ಟಿಮಾಡುವುದು ಬೇಡ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಕಿಶನ್‌ ರೆಡ್ಡಿ(Kishan Reddy) ಹೇಳಿದರು.

ಹಂಪಿಯಲ್ಲಿ(Hampi) ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹನುಮನ ಜನ್ಮಸ್ಥಳ ಕುರಿತು ಟಿಟಿಡಿ(TTD) ನೀಡಿರುವ ಹೇಳಿಕೆಯಲ್ಲಿ ನನ್ನನ್ನು ಸಿಲುಕಿಸಬೇಡಿ. ಭಾರತ ಸರ್ಕಾರ(Government of India) ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಹನುಮ ಜನ್ಮಸ್ಥಳ ಕುರಿತು ಜನರ ವಿಶ್ವಾಸವೇ ಮುಖ್ಯವಾಗಿದೆ. ಜನರ ವಿಶ್ವಾಸವನ್ನು ನಾವು ಗೌರವಿಸಬೇಕು ಎಂದರು.

Tap to resize

Latest Videos

undefined

ಹಂಪಿಯ ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ; ಹನುಮನ ಜನ್ಮಸ್ಥಳ ಮತ್ತು ವಾದಗಳು!

ಆನೆಗೊಂದಿಯ(Anegondi) ಅಂಜನಾದ್ರಿ ಪರ್ವತವೇ(Anjanadri Hill) ಹನುಮನ ಜನ್ಮಸ್ಥಳವಾಗಿದೆ. ಆದರೂ ಆಂಧ್ರಪ್ರದೇಶದ(Andhra Pradesh) ಟಿಟಿಡಿಯವರು ಈ ಬಗ್ಗೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇಲ್ಲಿ ಹನುಮನ ಲಕ್ಷಾಂತರ ಭಕ್ತರು ಇದ್ದಾರೆ. ಈ ವಿವಾದ ಬಗೆಹರಿಸಿ ಎಂದು ಪತ್ರಕರ್ತರು ಗಟ್ಟಿಯಾಗಿ ಕೇಳಿದ ಪ್ರಶ್ನೆಗೆ ವಿಶ್ವಾಸವೇ ಮುಖ್ಯ ಹೊರತು ವಿವಾದ ಮುಖ್ಯವಲ್ಲ ಎಂಬ ಮಾರ್ಮಿಕ ಉತ್ತರ ನೀಡಿದರು ಸಚಿವ ಕಿಶನ್‌ ರೆಡ್ಡಿ.

ಬೇಲೂರು, ಹಳೆಬೀಡು ಯುನೆಸ್ಕೊ ಪಟ್ಟಿಗೆ ಶಿಫಾರಸು

ರಾಜ್ಯದ(Karnataka) ಬೇಲೂರು(Belur), ಹಳೆಬೀಡು(Halebeedu) ಹಾಗೂ ಸೋಮನಾಥಪುರ ದೇವಾಲಯಗಳು ಮತ್ತು ಸ್ಮಾರಕಗಳನ್ನು ಯುನೆಸ್ಕೊ(UNESCO) ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್‌ ರೆಡ್ಡಿ ತಿಳಿಸಿದರು.

ಈ ಶಿಫಾರಸುಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌(Anand Singh) ಅವರಿಗೂ ಪತ್ರ ಬರೆಯಲಾಗಿದೆ. ಯುನೆಸ್ಕೊ ಪ್ರತಿನಿಧಿಗಳು ಬರುವುದರೊಳಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದರು. ಹಂಪಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಹೈಟೆಕ್‌ ಶೌಚಾಲಯಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೆದ್ದಾರಿಯಲ್ಲಿ ಸೈನ್‌ಬೋರ್ಡ್‌ ಅಳವಡಿಕೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ಬಂಕ್‌ ಮಾಲೀಕರಿಗೆ ನಿರ್ದೇಶನ ನೀಡಿದೆ ಎಂದರು.

ಭಾರತ ಸರ್ಕಾರ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಹೀಗಾಗಿ 75 ಸ್ಮಾರಕಗಳ ಜೀರ್ಣೋದ್ಧಾರ ಹಾಗೂ ಸಂಪರ್ಕ ವ್ಯವಸ್ಥೆ ಸುಧಾರಣೆ ಮಾಡಲಾಗುವುದು. ಕಾರ್ಪೊರೇಟ್‌ ಸಂಸ್ಥೆಗಳಿಗೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಭಾರತೀಯ ಪುರಾತತ್ವ ಇಲಾಖೆಯಡಿ(Department of Archeology of India) 4000 ದೇವಾಲಯಗಳು(Temples) ಬರುತ್ತವೆ. ಈ ಪೈಕಿ ಕರ್ನಾಟಕದಲ್ಲೇ 500 ದೇಗುಲಗಳಿವೆ.

Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು

ದೇಗುಲಗಳ ಜೀರ್ಣೋದ್ಧಾರಕ್ಕೆ ಖಾಸಗಿ ಸಹಭಾಗಿತ್ವ

ಹಂಪಿ ಸೇರಿದಂತೆ ಭಾರತದ ಪ್ರಮುಖ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಖಾಸಗಿ ಸಹಭಾಗಿತ್ವಕ್ಕೆ ದತ್ತು ನೀಡಲಾಗುವುದು. ಈ ಮೂಲಕ ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಸಚಿವ ಕಿಶನ್‌ ರೆಡ್ಡಿ ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಭಾರತೀಯ ಪುರಾತತ್ವ ಇಲಾಖೆ ಮತ್ತು ಹಂಪಿ ಕನ್ನಡ ವಿವಿ ಸಹಯೋಗದಲ್ಲಿ ಹಂಪಿಯ ಪಟ್ಟಾಭಿರಾಮ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ದೇವಾಲಯ ವಾಸ್ತುಶಿಲ್ಪ ಕುರಿತ ದೇವಾಯತನಂ’ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಐತಿಹಾಸಿಕ ದೇವಾಲಯಗಳನ್ನು ಸಂರಕ್ಷಿಸಬೇಕಿದೆ. ದೇವಾಲಯ ಇಲ್ಲದೇ ಭಾರತ ಗುರುತಿಸುವುದು ಕಷ್ಟ. ದೇವಾಲಯ ನಮ್ಮ ಸಂಸ್ಕತಿ, ಜೀವನದ ಪ್ರತೀಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಐದು ವಿಕ್ಟರಿ ಮೇಲೆ ಕಾರ್ಯನಿರ್ವಹಿಸುವ ಹೊಣೆಗಾರಿಕೆ ನೀಡಿದ್ದಾರೆ. ವಿರಾಸತ್‌ (ಪರಂಪರೆ), ವಿಕಾಸ, ವಿಶ್ವಾಸ, ವಿಜ್ಞಾನ, ವಿಶ್ವ ಗುರು ದಿಸೆಯಲ್ಲಿ ಕಾರ್ಯನಿರ್ವಹಿಸಲು ಪ್ರಧಾನಿ ಅವರು ಸೂಚಿಸಿದ್ದಾರೆ ಎಂದರು.
 

click me!