ಮಹದಾಯಿಗೆ ಕೇಂದ್ರ ಅನುಮತಿ ನಿರಾಕರಿಸಿಲ್ಲ: ಸಚಿವ ಜೋಶಿ ಸ್ಪಷ್ಟನೆ

By Kannadaprabha NewsFirst Published Feb 15, 2024, 1:11 PM IST
Highlights

ಮಹದಾಯಿ ವಿಚಾರದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ಮಹದಾಯಿಗೆ ಸಂಬಂಧಿಸಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಪ್ರಾಮಾಣಿಕವಾಗಿ ಮಾಡಿದೆ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ 

ಹುಬ್ಬಳ್ಳಿ(ಫೆ.15): ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಸಚಿವರು ಅನುಮತಿ ನಿರಾಕರಿಸಿಲ್ಲ. ಮಹದಾಯಿ ಯೋಜನೆ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಈ ವಿಚಾರದಲ್ಲಿ ತರಾತುರಿ ಮಾಡುವಂತಿಲ್ಲ. ನಾವು ತರಾತುರಿ ಹೆಜ್ಜೆ ಇಟ್ಟರೆ ಕೋರ್ಟ್‌ನಿಂದ ತಡೆಯಾಜ್ಞೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಹದಾಯಿ ವಿಚಾರದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ಮಹದಾಯಿಗೆ ಸಂಬಂಧಿಸಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಪ್ರಾಮಾಣಿಕವಾಗಿ ಮಾಡಿದೆ ಎಂದು ತಿಳಿಸಿದ್ದಾರೆ. 

ಬೆಳಗಾವಿ: ಮಹದಾಯಿಯಲ್ಲಿ ನಮ್ಗೆ 7.5 ಟಿಎಂಸಿ ನೀರು ಬೇಕೆಂದು ಪಾದಯಾತ್ರೆ, ಮುರುಘೇಂದ್ರ ಶ್ರೀ

ತನ್ನ ಕೈಯಲ್ಲಿದ್ದ ಕಡತವನ್ನು ಕ್ಲಿಯರ್ ಮಾಡಿದೆ. ಆದರೆ, ಹುಲಿ ಕಾರಿಡಾರ್ ಮತ್ತು ದಟ್ಟ ಅರಣ್ಯ ಇರುವುದರಿಂದ ಸುಪ್ರೀಂ ಕೋರ್ಟ್ ಸಮರ್ಪಕ ವರದಿ, ಮಾಹಿತಿ ಕೇಳಿದೆ. ಹೀಗಾಗಿ ಹದ್ದಿನ ಕಣ್ಣಿಟ್ಟು, ಕೂಲಂಕಷ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ನಾವು ಮುಂದಾಗುತ್ತಿದ್ದೇವೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

click me!