ಆಲಮಟ್ಟಿ ಡ್ಯಾಂ ಎತ್ತರಕ್ಕೆ ಕೇಂದ್ರ ಸರ್ಕಾರ ನೋಟಿಫಿಕೇಷನ್‌ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Aug 22, 2024, 4:25 PM IST

ಆಲಮಟ್ಟಿ ಡ್ಯಾಂ ಎತ್ತರಿಸಲು ಕೇಂದ್ರ ಸರ್ಕಾರ ನೋಟಿಫಿಕೇಷನ್ ಮಾಡಬೇಕಿದ್ದು, ಅದನ್ನು ಮಾಡಿಲ್ಲ. ಹೀಗಾಗಿ ಕೇಂದ್ರವು ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದವರನ್ನು ಕರೆದು ಇದನ್ನು ಇತ್ಯರ್ಥ ಮಾಡಲು ಸಾಧ್ಯವಿದೆ. ಇಲ್ಲವಾದರೆ ನೊಟಿಫಿಕೇಷನ್ ಆಗದೆ ಡ್ಯಾಂ ಎತ್ತರ ಮಾಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 


ವಿಜಯಪುರ (ಆ.22): ಆಲಮಟ್ಟಿ ಡ್ಯಾಂ ಎತ್ತರಿಸಲು ಕೇಂದ್ರ ಸರ್ಕಾರ ನೋಟಿಫಿಕೇಷನ್ ಮಾಡಬೇಕಿದ್ದು, ಅದನ್ನು ಮಾಡಿಲ್ಲ. ಹೀಗಾಗಿ ಕೇಂದ್ರವು ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದವರನ್ನು ಕರೆದು ಇದನ್ನು ಇತ್ಯರ್ಥ ಮಾಡಲು ಸಾಧ್ಯವಿದೆ. ಇಲ್ಲವಾದರೆ ನೊಟಿಫಿಕೇಷನ್ ಆಗದೆ ಡ್ಯಾಂ ಎತ್ತರ ಮಾಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎರಡನೇ ನ್ಯಾಯಾಧಿಕರಣ ತೀರ್ಪು ಬಂದಿದ್ದರಲ್ಲಿ ಆಲಮಟ್ಟಿಗೆ 130 ಟಿಎಂಸಿ ನೀರು ಸಿಗುತ್ತದೆ. ಆದರೆ ನಾವು 519.60 ಮೀಟರ್‌ನಿಂದ 524.225 ಮೀಟರ್‌ಗೆ ಎತ್ತರಿಸಬೇಕಿದೆ. ಹೀಗಾಗಾದ ಮಾತ್ರ 130 ಟಿಎಂಸಿ ನೀರು ಉಪಯೋಗ ಆಗಲಿದೆ ಎಂದರು.

ಸಂತ್ರಸ್ತರಾಗುವವರಿಗೆ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಹಿಂದೆಯೂ ಸಿದ್ಧವಿತ್ತು. ಈಗಲೂ ಸಿದ್ಧವಿದೆ. ಪುನರ್ವಸತಿ ಕಲ್ಪಿಸುವ ಅಂದಾಜು ವೆಚ್ಚ ₹80 ಸಾವಿರ ಕೋಟಿ ಆಗಲಿದೆ. ಅದಕ್ಕಾಗಿ ನಾವು ಪ್ರತಿವರ್ಷ ₹20 ಸಾವಿರ ಕೋಟಿ ಹಣವನ್ನು ನೀರಾವರಿಗೆ ಖರ್ಚು ಮಾಡಲು ಸಿದ್ಧವಿದ್ದೇವೆ. ಐದು ವರ್ಷಗಳಲ್ಲಿ ₹1 ಲಕ್ಷ ಕೋಟಿ ಖರ್ಚು ಮಾಡಲಿದ್ದೇವೆ. ಪ್ರಧಾನಿಗಳು ಎಲ್ಲ ರಾಜ್ಯದವರನ್ನು ಕರೆದು ಈ ಸಮಸ್ಯೆ ಇತ್ಯರ್ಥ ಮಾಡಬೇಕು. ಅದನ್ನು ಮಾಡಿದರೆ 524.225 ಮೀಟರ್ ಎತ್ತರಕ್ಕೆ ಒಯ್ಯಲು ಹಾಗೂ 130 ಟಿಎಂಸಿ ನೀರು ಸಂಗ್ರಹಿಸಲು ಅನುಕೂಲ ಆಗಲಿದೆ. ಇದರಿಂದ 14.68 ಲಕ್ಷ ಎಕರೆ ನೀರಾವರಿಗೆ ಅನುಕೂಲ ಆಗಲಿದೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ನೊಟಿಫಿಕೇಷನ್ ಮಾಡಬೇಕು ಎಂದು ನಮ್ಮ‌ಒತ್ತಾಯವಿದೆ ಎಂದರು.

Tap to resize

Latest Videos

undefined

ಮುಡಾ ತನಿಖೆ ಬಳಿಕ ಸಿದ್ದರಾಮಯ್ಯ ದೋಷಮುಕ್ತರಾದರೆ ಅವರ ಪಾದ ತೊಳೆವೆ: ಶಾಸಕ ಚನ್ನಬಸಪ್ಪ

ಆಲಮಟ್ಟಿ ನೀರಾವರಿ ಹಾಗೂ ಸಂತ್ರಸ್ತರ ವಿಚಾರ ಕುರಿತು ಮಾತನಾಡಿದ ಅವರು, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ ಯಾದಗಿರಿ ಸೇರಿದಂತೆ ಈ ವ್ಯಾಪ್ತಿಯ ಸಚಿವರು ಹಾಗೂ ಶಾಸಕರು ಸೇರಿದಂತೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ಕರೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಳೆದ ವರ್ಷವೂ ನಾನು ಸುಪ್ರೀಂ ಕೋರ್ಟ್ ಸೇರಿದಂತೆ ಕೇಂದ್ರದಲ್ಲೂ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದೆ. ಅದಾದ ಬಳಿಕ ನಾವು ಅನೇಕ ಬಾರಿ ಭೇಟಿ ಮಾಡಿದ್ದೇವೆ. ನಾನು, ಡಿಸಿಎಂ ಅವರು ಸೇರಿ ಸಂಬಂಧಿಸಿದ ಕೇಂದ್ರ ಸಚಿವರು, ಪ್ರಧಾನಿಗಳಿಗೆ ಭೇಟಿ ಮಾಡಿ ಹೇಳಿದ್ದೇವೆ. ಆದರೂ ಅವರು ಮನಸು ಮಾಡಿಲ್ಲ ಎಂದು ದೂರಿದರು. ಸಂತ್ರಸ್ತರ ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದೇವೆ. ಇದುವರೆಗೆ ನಾವು ₹18,370 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ‌ನ ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಿಗೆ ಗಂಗಾಪೂಜೆ ಮಾಡಿದ್ದೇವೆ. ಈ ಬಾರಿ ಕಬಿನಿ, ಹಾರಂಗಿ, ಹೇಮಾವತಿ, ನಾರಾಯಣಪುರ, ತುಂಗಭದ್ರಾ, ಆಲಮಟ್ಟಿ, ಶರಾವತಿ, ಸೂಪಾ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ನೀರಾವರಿ, ಕುಡಿವ ನೀರಿಗೆ, ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗಲ್ಲ. ಎಲ್ಲ ಕೆರೆಗಳು ಭರ್ತಿಯಾಗಿವೆ. ಇನ್ನುಳಿದ ಕೆಲ ಕೆರೆಗಳನ್ನು ಭರ್ತಿ ಮಾಡಲಾಗುವುದು. ಇದರಿಂದ ಅಂತರ್ಜಲ ಮಟ್ಟ ಏರಿಕೆ ಆಗುತ್ತದೆ. ಹೀಗಾಗಿ ರೈತರು ಖುಷಿಯಾಗಿದ್ದಾರೆ ಎಂದು ತಿಳಿಸಿದರು.

ಆನೆ ಹೋಗುತ್ತಿರುತ್ತೆ, ನರಿಯೊಂದು ಅದೇನೋ ಬೀಳುತ್ತೇ ಅಂಥ ಕಾಯ್ತಿರುತ್ತೆ: ಸಚಿವ ಮಹದೇವಪ್ಪ

ತುಂಗಭದ್ರಾ ಡ್ಯಾಂ ಭರ್ತಿ ಆಗಲಿದೆ: ಈ ಮೊದಲು ಟಿಬಿ ಡ್ಯಾಂ ಭರ್ತಿಯಾಗಿದ್ದರಿಂದ ಡ್ಯಾಂ ಪೂಜೆ ಮಾಡಲು ಸಿದ್ಧವಾಗಿದ್ದೆವು. ಅಷ್ಟರಲ್ಲಿ ಡ್ಯಾಂನ 19ನೇ ಗೇಟ್ ಚೈನ್ ಕಟ್ ಆಗಿ, ಗೇಟ್ ಕಳಚಿದ್ದರಿಂದ ಬಾಗಿನ ಅರ್ಪಿಸಲು ಆಗಲಿಲ್ಲ. ಗೇಟ್ ತುಂಡಾಗಿದ್ದರಿಂದ 60 ಟಿಎಂಸಿ ನೀರು ಪೋಲಾಗಬಹುದು ಎಂದುಕೊಂಡಿದ್ದೆವು. ಅದೃಷ್ಟವಶಾತ್ ಸುಮಾರು 35 ಟಿಎಂಸಿ ನೀರು ಮಾತ್ರ ಹರಿದುಹೋಗಿದೆ. ಇಂದು 78 ಟಿಎಂಸಿ ನೀರು ಸಂಗ್ರಹವಾಗಿದೆ. 20 ಟಿಎಂಸಿ ನೀರು ಬಂದರೆ ತುಂಗಭದ್ರಾ ಅಣೆಕಟ್ಟಿನಲ್ಲಿ ಶೇ.95 ರಷ್ಟು ನೀರು ಶೇಖರಣೆ ಆಗಲಿದ್ದು, ಮತ್ತೆ ಡ್ಯಾಂ ತುಂಬುತ್ತೆ ಎಂಬುದರ ಭರವಸೆ ಇದ್ದು, ಅದು ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!