ರೈತರ ಕರಾಳ ದಿನ ಆಚರಣೆಗೆ ಕೋಡಿಹಳ್ಳಿ ಕರೆ: ಯಾವಾಗ..?

Published : Jan 29, 2021, 10:24 PM IST
ರೈತರ ಕರಾಳ ದಿನ ಆಚರಣೆಗೆ ಕೋಡಿಹಳ್ಳಿ ಕರೆ: ಯಾವಾಗ..?

ಸಾರಾಂಶ

ರೈತರ ಕರಾಳ ದಿನವಾಗಿ ಆಚರಣೆ ಮಾಡಲು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದ್ದಾರೆ. ಯಾವಾಗ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಜ.29): ಒಂದೆಡೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಆಯ್ದೆ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪಪಡೆದುಕೊಂಡಿದೆ.

ಜನವರಿ 26 ಗಣರಾಜ್ಯೋತ್ಸವದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ಮಾಡಿದರು. ಇತ್ತ ಇದಕ್ಕೆ ರಾಜ್ಯದಲ್ಲೂ ಸಹ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಯ್ತು.

ಖತರ್ನಾಕ್ ಖಲಿಸ್ತಾನ್ ರಕ್ತಚರಿತ್ರೆ: ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕಥೆ

ಇದೀಗ ನಾಳೆ (ಜನವರಿ 30) ಮಹಾತ್ಮ ಗಾಂಧಿಜೀ ಹುತಾತ್ಮರಾದ ದಿನ. ಈ ಹಿನ್ನೆಲೆ ರೈತರ ಮೇಲೆ ನಡೆದಿರುವ ಹಲ್ಲೆ, ದೌರ್ಜನ್ಯವನ್ನು ಖಂಡಿಸಿ ರೈತರ ಕರಾಳ ದಿನವಾಗಿ ಆಚರಣೆ ಮಾಡಲು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕರೆ ಕೊಟ್ಟಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿ ನಾಳೆ (ಶನಿವಾರ) ಬೆಳಗ್ಗೆ 11-30ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಕರಾಳ ದಿನವಾಗಿ ಆಚರಣೆ ಮಾಡಲಾಗುತ್ತದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ರೈತರು ಎಡಗೈಗೆ ಕಪ್ಪು ಬಟ್ಟೆಯ ಪಟ್ಟಿ ಧರಿಸಿ ಕರಾಳ ದಿನವಾಗಿ ಆಚರಣೆ ಮಾಡಿ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್